Asia Cup 2023: ಇಂದು ನಡೆಯುತ್ತಾ ಭಾರತ-ಪಾಕಿಸ್ತಾನ ಪಂದ್ಯ?: ಕೊಲಂಬೊದಲ್ಲಿ ಈಗ ಹವಾಮಾನ ಹೇಗಿದೆ?

|

Updated on: Sep 11, 2023 | 9:23 AM

India vs Pakistan Colombo Weather Today: ಏಷ್ಯಾಕಪ್ 2023ರ ಭಾರತ-ಪಾಕಿಸ್ತಾನ ನಡುವಣ ಮೀಸಲು ದಿನದ ಪಂದ್ಯ ಇಂದು ಮಧ್ಯಾಹ್ನ 3 ಗಂಟೆಗೆ ಪುನರಾರಂಭಗೊಳ್ಳುತ್ತದೆ. ಆದರೆ, ಇಂದಿನ ಪಂದ್ಯಕ್ಕೂ ಮಳೆಯ ಕಾಟ ಇರಲಿದೆ ಎನ್ನಲಾಗಿದೆ. ಕೊಲಂಬೊದಲ್ಲಿ ಸೋಮವಾರದ ಹವಾಮಾನ ಪ್ರಕಾಶಮಾನವಾಗಿ ಕಾಣುತ್ತಿಲ್ಲ. ಬೆಳಗ್ಗಿಯಿಂದಲೇ ನಿರಂತರವಾಗಿ ಮಳೆ ಸುರಿಯುತ್ತಿದೆ.

1 / 7
ಕೊಲಂಬೊದಲ್ಲಿ ಭಾನುವಾರ ನಿರಂತರ ಮಳೆ ಸುರಿದ ಪರಿಣಾಮ ಭಾರತ ಹಾಗೂ ಪಾಕಿಸ್ತಾನ ನಡುವಣ ಏಷ್ಯಾಕಪ್ 2023 ಸೂಪರ್ 4 ಪಂದ್ಯವು ಸೋಮವಾರದ ಮೀಸಲು ದಿನಕ್ಕೆ ಮುಂದೂಡಲಾಯಿತು. ನಿನ್ನೆ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಕೇವಲ 24.1 ಓವರ್‌ಗಳನ್ನು ಮಾತ್ರ ಆಡಲು ಸಾಧ್ಯವಾಯಿತು.

2 / 7
ಇಂದು ಮೀಸಲು ದಿನದಂದು ಮಧ್ಯಾಹ್ನ 3 ಗಂಟೆಗೆ ಪಂದ್ಯ ಪುನರಾರಂಭಗೊಳ್ಳುತ್ತದೆ. ಆದರೆ, ಇಂದಿನ ಪಂದ್ಯಕ್ಕೂ ಮಳೆಯ ಕಾಟ ಇರಲಿದೆ ಎನ್ನಲಾಗಿದೆ. ಕೊಲಂಬೊದಲ್ಲಿ ಸೋಮವಾರದ ಹವಾಮಾನ ಪ್ರಕಾಶಮಾನವಾಗಿ ಕಾಣುತ್ತಿಲ್ಲ. ಬೆಳಗ್ಗಿಯಿಂದಲೇ ನಿರಂತರವಾಗಿ ಮಳೆ ಸುರಿಯುತ್ತಿದೆ.

3 / 7
ಹವಾಮಾನ ಇಲಾಖೆಯ ಪ್ರಕಾರ, ಇಂದು ಗರಿಷ್ಠ ತಾಪಮಾನವು 30 ಡಿಗ್ರಿ ಮತ್ತು 97 ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಮಧ್ಯಾಹ್ನ 3 ಗಂಟೆ ಹೊತ್ತಿಗೆ ಪಂದ್ಯವು ಪುನರಾರಂಭಗೊಂಡಾಗ 99 ಪ್ರತಿಶತದಷ್ಟು ಮೋಡ ಕವಿದ ವಾತಾವರಣ ಇರಲಿದೆ. ತೇವಾಂಶವು ಶೇಕಡಾ 81 ರಷ್ಟಿರುತ್ತದೆ ಎಂದು ಹೇಳಲಾಗಿದೆ.

4 / 7
ಸೋಮವಾರ ಮಧ್ಯಾಹ್ನದ ವೇಳೆಗೆ ಸುಮಾರು 17.9ಮಿಮೀ ಮಳೆಯಾಗುವ ನಿರೀಕ್ಷೆಯಿದೆ. ಸಂಜೆ ವೇಳೆಗೆ ಶೇ. 80 ರಷ್ಟು ಮಳೆಯಾಗಲಿದೆ. ನಂತರ ಶೇ. 100 ರಷ್ಟು ಮೋಡ ಕವಿದಿರುತ್ತದೆ. ಆಗಸ್ಟ್-ಸೆಪ್ಟೆಂಬರ್​ನಲ್ಲಿ ಶ್ರೀಲಂಕಾದಲ್ಲಿ ಭಾರೀ ಮಳೆಯಾಗುತ್ತದೆ. ಇಲ್ಲಿ ಈ ತಿಂಗಳುಗಳಲ್ಲಿ ಯಾವುದೇ ಪಂದ್ಯ ನಡೆಯುವುದಿಲ್ಲ. ಆದರೆ, ಪಾಕ್​ಗೆ ತೆರಳಲು ಭಾರತ ಸರ್ಕಾರದ ಅನುಮತಿ ಇಲ್ಲದ ಕಾರಣ ಲಂಕಾಕ್ಕೆ ತನ್ನ ನಾಡಿನಲ್ಲಿ ಏಷ್ಯಾಕಪ್ ಆಯೋಜಿಸುವುದು ಅನಿವಾರ್ಯವಾಗಿದ್ದವು.

5 / 7
ಕೊಲಂಬೊದಲ್ಲಿ ಭಾನುವಾರ ಪಂದ್ಯದ ಮಧ್ಯೆ ಮಳೆ ಬಂದ ಕಾರಣ ಸುಮಾರು ನಾಲ್ಕು ಗಂಟೆಗಳ ಕಾಲ ಆಟ ಸ್ಥಗಿತಗೊಳಿಸಲಾಯಿತು. ನಂತರವೂ ಮಳೆ ನಿಲ್ಲದ ಕಾರಣ ಸೋಮವಾರದ ಮೀಸಲು ದಿನಕ್ಕೆ ಪಂದ್ಯವನ್ನು ಮುಂದೂಡಲಾಯಿತು. ಇಂದು ಭಾರತ 24.1 ಓವರ್‌ಗಳಲ್ಲಿ 2 ವಿಕೆಟ್‌ಗೆ 147 ರನ್‌ಗಳಿಂದ ಇನ್ನಿಂಗ್ಸ್ ಅನ್ನು ಪುನರಾರಂಭಿಸಲಿದೆ.

6 / 7
ಇನ್ನು ಭಾರತ-ಪಾಕಿಸ್ತಾನ ನಡುವಣ ಇಂದಿನ ಮೀಸಲು ದಿನದ ಪಂದ್ಯ ಕೂಡ ಮಳೆಯಿಂದ ರದ್ದಾದರೆ ಉಭಯ ತಂಡಗಳು ತಲಾ ಒಂದು ಅಂಕ ಪಡೆಯಲಿವೆ. ಇದು ಮೀಸಲು ದಿನದ ಪಂದ್ಯ ಆಗಿರುವುದರಿಂದ ಭಾನುವಾರದ ಪಂದ್ಯದ ರೀತಿಯಲ್ಲೇ ಸಾಗಲಿದೆ. ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್​ನಲ್ಲಿ, ಬೌಲಿಂಗ್​ನಲ್ಲಿ, ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡುವಂತಿಲ್ಲ.

7 / 7
ಭಾನುವಾರ ಟಾಸ್ ಸೋತು ಮೊದಲು ಬ್ಯಾಟಿಂಗ್ ಶುರುಮಾಡಿದ ಭಾರತಕ್ಕೆ ಓಪನರ್​ಗಳಾದ ನಾಯಕ ರೋಹಿತ್ ಶರ್ಮಾ (56) ಹಾಗೂ ಶುಭ್​ಮನ್ ಗಿಲ್ (58) ಸ್ಫೋಟಕ ಆರಂಭ ಒದಗಿಸಿ 16.3 ಓವರ್​ಗಳಲ್ಲಿ 121 ರನ್​ಗಳ​ ಜೊತೆಯಾಟವಾಡಿದರು. ಮೂರನೇ ವಿಕೆಟ್​ಗೆ ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ 24 ರನ್ ಸೇರಿಸಿದ ವೇಳೆ ಮಳೆ ಬಂದಿದ್ದರಿಂದ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.

Published On - 9:19 am, Mon, 11 September 23