
ಏಕದಿನ ವಿಶ್ವಕಪ್‌ನಲ್ಲಿ 8ನೇ ಬಾರಿ ಮುಖಾಮುಖಿಯಾಗಲು ಭಾರತ ಮತ್ತು ಪಾಕಿಸ್ತಾನ ತಂಡಗಳು ಸಜ್ಜಾಗಿವೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ.

ಏಕದಿನ ವಿಶ್ವಕಪ್‌ನಲ್ಲಿ ಇದುವರೆಗೆ ಆಡಿದ 7 ಪಂದ್ಯಗಳಲ್ಲಿಯೂ ಟೀಂ ಇಂಡಿಯಾ, ಪಾಕಿಸ್ತಾನದ ವಿರುದ್ಧ ಪ್ರಾಬಲ್ಯ ಸಾಧಿಸಿದೆ. ಹೀಗಾಗಿ ಭಾರತದ ವಿರುದ್ಧ ಪಾಕಿಸ್ತಾನಕ್ಕೆ ಒಂದೇ ಒಂದು ಗೆಲುವು ದಾಖಲಿಸಲು ಸಾಧ್ಯವಾಗಿಲ್ಲ. ಇದಲ್ಲದೆ ಕ್ರಿಕೆಟ್ ಲೋಕದಲ್ಲಿ ಟೀಂ ಇಂಡಿಯಾ ನಿರ್ಮಿಸಿರುವ ಈ ಐದು ದಾಖಲೆಗಳನ್ನು ಪಾಕ್ ತಂಡಕ್ಕೆ ಮುರಿಯುವುದು ಕಷ್ಟ ಸಾಧ್ಯವಾಗಿದೆ. ಅಂತಹ ದಾಖಲೆಗಳ ವಿವರ ಇಲ್ಲಿದೆ.

ಟಿ20 ಮತ್ತು ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಹಾಗೂ ಭಾರತ ಪರಸ್ಪರ 14 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 13 ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನ ಏಕೈಕ ಗೆಲುವು ಸಾಧಿಸಿದೆ. ಆ ಏಕೈಕ ಗೆಲುವು ಕೂಡ 2021ರ ಟಿ20 ವಿಶ್ವಕಪ್‌ನಲ್ಲಿ ಬಂದಿತ್ತು. ಆದರೆ, ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಭಾರತದ ವಿರುದ್ಧ ಗೆಲ್ಲಲು ಸಾಧ್ಯವಾಗಲಿಲ್ಲ.

ಇನ್ನು ಅತಿ ಹೆಚ್ಚು ಐಸಿಸಿ ನಾಕೌಟ್ ಪಂದ್ಯಗಳನ್ನು ಆಡಿರುವ ತಂಡಗಳ ಪೈಕಿ ಭಾರತ ತಂಡ ಇದುವರೆಗೆ ಏಕದಿನ ವಿಶ್ವಕಪ್‌ನಲ್ಲಿ 26 ನಾಕೌಟ್ ಪಂದ್ಯಗಳನ್ನು ಆಡಿದೆ. ಆದರೆ ಪಾಕಿಸ್ತಾನ ಇದುವರೆಗೆ ಕೇವಲ 18 ಪಂದ್ಯಗಳನ್ನು ಮಾತ್ರ ಆಡಿದೆ.

ಟೀಂ ಇಂಡಿಯಾ ಟಿ20ಯಲ್ಲಿ 200 ಕ್ಕೂ ಅಧಿಕ ರನ್ಗಳನ್ನು 27 ಬಾರಿ ಕಲೆಹಾಕಿದೆ. ಆದರೆ ಪಾಕಿಸ್ತಾನ 11 ಬಾರಿ ಮಾತ್ರ 200+ ರನ್ ಗಳಿಸಿದೆ. ಈ ದಾಖಲೆಯನ್ನು ತಲುಪಲು ಪಾಕಿಸ್ತಾನ ತಂಡಕ್ಕೆ ವರ್ಷಗಳೇ ಬೇಕು.

ಟೀಂ ಇಂಡಿಯಾ ಭಾರತದಲ್ಲಿ ಇದುವರೆಗೆ 114 ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ. ಇದು ಯಾವುದೇ ಏಷ್ಯನ್ ತಂಡದ ಅತಿ ಹೆಚ್ಚು ಗೆಲುವಾಗಿದೆ. ಪಾಕಿಸ್ತಾನ ತಂಡ ತವರಿನಲ್ಲಿ ಇದುವರೆಗೆ ಕೇವಲ 60 ಟೆಸ್ಟ್ ಪಂದ್ಯಗಳನ್ನು ಮಾತ್ರ ಗೆದ್ದಿದೆ.

ಆಸ್ಟ್ರೇಲಿಯ ನೆಲದಲ್ಲಿ ಸತತ 2 ಟೆಸ್ಟ್ ಸರಣಿ ಗೆದ್ದ ಏಷ್ಯಾದ ಏಕೈಕ ತಂಡ ಭಾರತ. ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ ತಂಡ ಇದುವರೆಗೆ ಸತತ 2 ಟೆಸ್ಟ್ ಸರಣಿ ಗೆದ್ದಿಲ್ಲ.