IND vs SA: ಏಕದಿನ ಸರಣಿಯಿಂದ ಹಿಂದೆ ಸರಿದ ದೀಪಕ್ ಚಹರ್; ಆರ್ಸಿಬಿ ಹುಲಿಗೆ ಒಲಿದ ಅದೃಷ್ಟ..!
IND vs SA, Akash Deep: ದೀಪಕ್ ಚಹರ್ ಅವರ ಅನುಪಸ್ಥಿತಿಯಲ್ಲಿ ಈಗ ಅವರ ಜಾಗಕ್ಕೆ ಐಪಿಎಲ್‌ನಲ್ಲಿ ಆರ್ಸಿಬಿ ತಂಡವನ್ನು ಪ್ರತಿನಿಧಿಸುವ ಬಲಗೈ ವೇಗಿ ಆಕಾಶ್ ದೀಪ್ ಅವರನ್ನು ಏಕದಿನ ಸರಣಿಗಾಗಿ ಭಾರತ ತಂಡದಲ್ಲಿ ಸೇರಿಸಲಾಗಿದೆ. ಬಿಹಾರ ಮೂಲದ ಆಕಾಶ್ ದೀಪ್ ಅವರು ಮೊದಲ ಬಾರಿಗೆ ಭಾರತಕ್ಕಾಗಿ ಆಡಲಿದ್ದಾರೆ.
1 / 7
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಾಳೆಯಿಂದ ಅಂದರೆ ಡಿಸೆಂಬರ್ 17 ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಆದರೆ ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾದಲ್ಲಿ ಬದಲಾವಣೆಗಳಾಗಿದ್ದು, ತಂಡದ ವೇಗದ ಬೌಲರ್ ದೀಪಕ್ ಚಹಾರ್ ಕೌಟುಂಬಿಕ ಕಾರಣಗಳಿಂದ ಈ ಸರಣಿಯಲ್ಲಿ ಆಡಲು ನಿರಾಕರಿಸಿದ್ದಾರೆ.
2 / 7
ದೀಪಕ್ ಚಹರ್ ಅವರ ಅನುಪಸ್ಥಿತಿಯಲ್ಲಿ ಈಗ ಅವರ ಜಾಗಕ್ಕೆ ಐಪಿಎಲ್‌ನಲ್ಲಿ ಆರ್ಸಿಬಿ ತಂಡವನ್ನು ಪ್ರತಿನಿಧಿಸುವ ಬಲಗೈ ವೇಗಿ ಆಕಾಶ್ ದೀಪ್ ಅವರನ್ನು ಏಕದಿನ ಸರಣಿಗಾಗಿ ಭಾರತ ತಂಡದಲ್ಲಿ ಸೇರಿಸಲಾಗಿದೆ. ಬಿಹಾರ ಮೂಲದ ಆಕಾಶ್ ದೀಪ್ ಅವರು ಮೊದಲ ಬಾರಿಗೆ ಭಾರತಕ್ಕಾಗಿ ಆಡಲಿದ್ದಾರೆ.
3 / 7
ಪ್ರಸ್ತುತ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಕಾಶ್ ದೀಪ್ ತಮ್ಮ ತಂಡ ಬಂಗಾಳದ ಪರ ಉತ್ತಮ ಪ್ರದರ್ಶನ ನೀಡಿದ್ದರು. ಆಕಾಶ್ ದೀಪ್ ಬಿಹಾರದ ರೋಹ್ತಾಸ್ ಜಿಲ್ಲೆಗೆ ಸೇರಿದವರಾಗಿದ್ದರೂ, ಅವರು ದೇಶೀಯ ಪಂದ್ಯಾವಳಿಯಲ್ಲಿ ಬಂಗಾಳದ ಪರವಾಗಿ ಆಡುತ್ತಾರೆ.
4 / 7
27 ವರ್ಷದ ಆಕಾಶ್ ದೀಪ್ ಬಲಗೈ ವೇಗದ ಬೌಲಿಂಗ್ ಆಲ್ ರೌಂಡರ್ ಆಗಿದ್ದು, ರೆಸ್ಟ್ ಆಫ್ ಇಂಡಿಯಾ ಪರ ಕೂಡ ಆಡಿದ್ದಾರೆ. ದೇಶೀಯ ಮಟ್ಟದಲ್ಲಿ ಆಕಾಶ್ ದೀಪ್ ಇಲ್ಲಿಯವರೆಗೆ 25 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ ಅವರು 90 ವಿಕೆಟ್ಗಳನ್ನು ಪಡೆದಿದ್ದಾರೆ. ಈ ಅವಧಿಯಲ್ಲಿ 4 ಬಾರಿ ಐದು ವಿಕೆಟ್ ಪಡೆದ ಸಾಧನೆ ಮಾಡಿದ್ದು, 5 ಬಾರಿ ನಾಲ್ಕು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
5 / 7
ಪ್ರಥಮ ದರ್ಜೆ ಕ್ರಿಕೆಟ್‌ನ ಒಂದು ಇನ್ನಿಂಗ್ಸ್‌ನಲ್ಲಿ 60 ರನ್‌ಗಳಿಗೆ 6 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದ್ದರೆ, ಒಂದು ಪಂದ್ಯದಲ್ಲಿ 112 ರನ್‌ಗಳಿಗೆ 10 ವಿಕೆಟ್ ಪಡೆದಿರುವುದು ಅವರ ಇದುವರೆಗಿನ ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಹಾಗೆಯೇ ದೇಶಿಯ ಮಟ್ಟದಲ್ಲಿ ಒಮ್ಮೆ 10 ವಿಕೆಟ್ ಪಡೆದ ಸಾಧನೆಯನ್ನೂ ಮಾಡಿದ್ದಾರೆ.
6 / 7
ಇನ್ನು ಲಿಸ್ಟ್ ಎ ನಲ್ಲಿ 28 ಪಂದ್ಯಗಳ 28 ಇನ್ನಿಂಗ್ಸ್‌ಗಳಲ್ಲಿ 48 ವಿಕೆಟ್‌ಗಳನ್ನು ಪಡೆದಿರುವ ಆಕಾಶ್ 6 ರನ್‌ಗಳಿಗೆ 3 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಇನ್ನು ಟಿ20 ಕ್ರಿಕೆಟ್‌ನಲ್ಲಿ 41 ಪಂದ್ಯಗಳನ್ನಾಡಿರುವ ಆಕಾಶ್ 48 ವಿಕೆಟ್‌ಗಳನ್ನು ಪಡೆದಿದ್ದಾರೆ. ಹಾಗೆಯೇ ಈ ಸ್ವರೂಪದಲ್ಲಿ 35 ರನ್‌ಗಳಿಗೆ 4 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ.
7 / 7
ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ಆಕಾಶ್ ದೀಪ್, 2022 ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಆ ಆವೃತ್ತಿಯಲ್ಲಿ 4 ಪಂದ್ಯಗಳನ್ನು ಆಡಿದ ಆಕಾಶ್ 5 ವಿಕೆಟ್ ಪಡೆದಿದ್ದರು. ಹಾಗೆಯೇ 2023ರ ಐಪಿಎಲ್‌ನಲ್ಲಿ 2 ಪಂದ್ಯಗಳನ್ನು ಆಡಿದ್ದ ಅವರು ಕೇವಲ 1 ವಿಕೆಟ್ ಮಾತ್ರ ಪಡೆದಿದ್ದರು.