ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದಿಂದ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಿದ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಭಾರತದ ಮೂವರು ಸ್ಟಾರ್ ಆಟಗಾರರು ಈ ಬಾರಿಯ ಐಪಿಎಲ್ ಮೂಲಕ ವಿದಾಯ ಹೇಳಲಿದ್ದಾರಂತೆ.
ಇಂತಹದೊಂದು ಶಾಕಿಂಗ್ ಸುದ್ದಿ ನೀಡಿದ್ದು ಮತ್ಯಾರೂ ಅಲ್ಲ, ಸೌತ್ ಆಫ್ರಿಕಾ ತಂಡದ ಮಾಜಿ ಕಾರ್ಯಕ್ಷಮತೆ ವಿಶ್ಲೇಷಕ ಪ್ರಸನ್ನ ಅಗೋರಂ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಸನ್ನ ಅವರು, ಭಾರತದ ಮೂವರು ದಿಗ್ಗಜ ಆಟಗಾರರು ಕೊನೆಯ ಬಾರಿ ಐಪಿಎಲ್ನಲ್ಲಿ (IPL 2024) ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಆದರೆ ಆ ಮೂವರು ಆಟಗಾರರು ಯಾರು ಎಂಬುದನ್ನು ಪ್ರಸನ್ನ ಅವರು ಬಹಿರಂಗಪಡಿಸಿಲ್ಲ. ಇದಾಗ್ಯೂ ಈ ಆಟಗಾರರು ಈ ಹಿಂದೆ ಐಪಿಎಲ್ ಟ್ರೋಫಿ ಗೆದ್ದಿದ್ದಾರೆ ಎಂಬ ಸುಳಿವು ನೀಡಿದ್ದಾರೆ. ಹೀಗಾಗಿ ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಇಲ್ಲ ಎಂಬುದು ಖಚಿತ. ಏಕೆಂದರೆ ಆರ್ಸಿಬಿ ಇದುವರೆಗೆ ಟ್ರೋಫಿ ಎತ್ತಿ ಹಿಡಿದಿಲ್ಲ.
ಇತ್ತ ಪ್ರಸನ್ನ ಅವರ ಟ್ವೀಟ್ ಬೆನ್ನಲ್ಲೇ ಮಹೇಂದ್ರ ಸಿಂಗ್ ಧೋನಿ, ರೋಹಿತ್ ಶರ್ಮಾ ಹಾಗೂ ರವಿಚಂದ್ರನ್ ಅಶ್ವಿನ್ ಹೆಸರು ಮುನ್ನಲೆಗೆ ಬಂದಿದೆ. ಏಕೆಂದರೆ ಈ ಮೂವರು ಆಟಗಾರರು ಈಗಾಗಲೇ ಐಪಿಎಲ್ ಟ್ರೋಫಿ ಗೆದ್ದಿದ್ದಾರೆ. ಇಲ್ಲಿ ಅಶ್ವಿನ್ ಅವರಿಗೆ 37 ವರ್ಷವಾಗಿದ್ದರೆ, ರೋಹಿತ್ ಶರ್ಮಾ ಅವರ ವಯಸ್ಸು 36 ವರ್ಷಗಳು.
ಹೀಗಾಗಿ 42 ವರ್ಷದ ಮಹೇಂದ್ರ ಸಿಂಗ್ ಧೋನಿಯೊಂದಿಗೆ ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ಹಿರಿಯ ಸ್ಪಿನ್ನರ್ ಅಶ್ವಿನ್ ವಿದಾಯ ಹೇಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಅಂದಹಾಗೆ ಪ್ರಸನ್ನ ಅಗೋರಂ ಈ ಹಿಂದೆ ಐಪಿಎಲ್ನಲ್ಲಿ ಆರ್ಸಿಬಿ, ರೈಸಿಂಗ್ ಪುಣೆ ಜೈಂಟ್ಸ್, ಡೆಲ್ಲಿ ಡೇರ್ ಡೇವಿಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ಪರ ಕಾರ್ಯ ನಿರ್ವಹಿಸಿದ್ದರು. ಹೀಗಾಗಿ ಅವರ ಹೇಳಿಕೆಯಂತೆ ಈ ಬಾರಿ ಮೂವರು ಆಟಗಾರರು ವಿದಾಯ ಹೇಳುವುದು ಬಹುತೇಕ ಖಚಿತ. ಆದರೆ ಆ ಆಟಗಾರರು ಯಾರೆಲ್ಲಾ ಎಂಬುದನ್ನು ತಿಳಿಯಲು ಐಪಿಎಲ್ ಆರಂಭದವರೆಗೆ ಕಾಯಲೇಬೇಕು. (ಚಿತ್ರ- ಎಬಿಡಿ ಜೊತೆ ಪ್ರಸನ್ನ ಅಗೋರಂ)
Published On - 1:12 pm, Sat, 16 December 23