IND vs SA 1st T20I: ಭಾರತ-ದಕ್ಷಿಣ ಆಫ್ರಿಕಾ ಮೊದಲ ಟಿ20 ಪಂದ್ಯ ನಡೆಯುವುದು ಅನುಮಾನ: ಯಾಕೆ ಗೊತ್ತೇ?

|

Updated on: Dec 09, 2023 | 11:22 AM

Kingsmead Stadium Durban Weather Report: ಭಾನುವಾರ ಆಯೋಜಿಸಿಗಿರುವ ಭಾರತ-ದಕ್ಷಿಣ ಆಫ್ರಿಕಾ ಮೊದಲ ಟಿ20 ಪಂದ್ಯ ನಡೆಯುವುದು ಅನುಮಾನ. ಯಾಕೆಂದರೆ, ಹವಾಮಾನವು ಈ ಪಂದ್ಯಕ್ಕೆ ಅಡ್ಡಿಪಡಿಸಲಿದೆ. ಅಕ್ಯುವೆದರ್ ಪ್ರಕಾರ, ಡರ್ಬನ್‌ನಲ್ಲಿ ಪಂದ್ಯದ ಸಮಯ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿದೆ ಎಂದು ಹೇಳಿದೆ.

1 / 6
ಭಾರತ ಕ್ರಿಕೆಟ್ ತನ್ನ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಮೂರು ಪಂದ್ಯಗಳ T20I ಸರಣಿಯೊಂದಿಗೆ ಪ್ರಾರಂಭಿಸಲು ಸಜ್ಜಾಗಿದೆ. ಭಾನುವಾರ, ಡಿಸೆಂಬರ್ 10 ರಂದು ಡರ್ಬನ್‌ನ ಕಿಂಗ್ಸ್‌ಮೀಡ್ ಸ್ಟೇಡಿಯಂನಲ್ಲಿ ಇಂಡೋ-ಆಫ್ರಿಕಾ ನಡುವೆ ಮೊದಲ ಟಿ20 ಪಂದ್ಯ ನಡೆಯಲಿದೆ.

2 / 6
ಆದರೆ, ಭಾನುವಾರ ಆಯೋಜಿಸಿರುವ ಭಾರತ-ದಕ್ಷಿಣ ಆಫ್ರಿಕಾ ಮೊದಲ ಟಿ20 ಪಂದ್ಯ ನಡೆಯುವುದು ಅನುಮಾನ. ಯಾಕೆಂದರೆ, ಹವಾಮಾನವು ಈ ಪಂದ್ಯಕ್ಕೆ ಅಡ್ಡಿಪಡಿಸಲಿದೆ. ಅಕ್ಯುವೆದರ್ ಪ್ರಕಾರ, ಡರ್ಬನ್‌ನಲ್ಲಿ ಪಂದ್ಯದ ಸಮಯ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿದೆ ಎಂದು ಹೇಳಿದೆ.

3 / 6
ಮೊದಲ ಟಿ20 ಪಂದ್ಯದ ಸಮಯ ಶೇಕಡಾ 75 ರಷ್ಟು ಮಳೆಯಾಗುವ ಸಾಧ್ಯತೆಯಿದೆ. ತಾಪಮಾನವು ಸುಮಾರು 20 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ ಮತ್ತು 100% ಮೋಡ ಕವಿದಿರುತ್ತದೆ. ಆರ್ದ್ರತೆಯ ಮಟ್ಟವು ಹೆಚ್ಚು ಎಂದು ನಿರೀಕ್ಷಿಸಲಾಗಿದೆ, ಇದು 86% ತಲುಪುತ್ತದೆ ಎನ್ನಲಾಗಿದೆ.

4 / 6
ಸ್ಥಳೀಯ ಕಾಲಮಾನ ಬೆಳಿಗ್ಗೆ 11 ಗಂಟೆಗೆ (2:30 PM IST) ಮತ್ತು ರಾತ್ರಿ 8 ರಿಂದ 10 ಗಂಟೆ ವರೆಗೆ (11:30 PM ನಿಂದ 1:30 AM ವರೆಗೆ) ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಹೀಗಾಗಿ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಸಾಧ್ಯತೆ ದಟ್ಟವಾಗಿದೆ.

5 / 6
ಟೀಮ್ ಇಂಡಿಯಾ ಡರ್ಬನ್ ಮೈದಾನದಲ್ಲಿ ಉತ್ತಮ ದಾಖಲೆಯನ್ನು ಹೊಂದಿದೆ. ಇದುವರೆಗೆ ಆಡಿದ 5 T20I ಪಂದ್ಯಗಳಲ್ಲಿ ಅಜೇಯವಾಗಿ ಉಳಿದಿದೆ. ಆತಿಥೇಯ ದಕ್ಷಿಣ ಆಫ್ರಿಕಾ 11 ಪಂದ್ಯಗಳಲ್ಲಿ 5 ಗೆಲುವುಗಳನ್ನು ಹೊಂದಿದೆ. ಇಲ್ಲಿನ ಪಿಚ್ ಬೌನ್ಸ್ ಮತ್ತು ಸ್ವಿಂಗ್​ನಿಂದ ಕೂಡಿದ್ದು, ಬ್ಯಾಟರ್​ಗಳಿಗೆ ಸಹಕಾರಿ ಆಗಲಿದೆ.

6 / 6
ಭಾರತ ಕ್ರಿಕೆಟ್ ತಂಡವು ಒಂದು ತಿಂಗಳ ಸುದೀರ್ಘ ಪ್ರವಾಸದಲ್ಲಿ 3 T20I ಮತ್ತು ODI ಹಾಗೂ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಸೂರ್ಯಕುಮಾರ್ ಯಾದವ್ ಟಿ20 ತಂಡವನ್ನು ಮುನ್ನಡೆಸಿದರೆ, ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಕ್ರಮವಾಗಿ ಏಕದಿನ ಮತ್ತು ಟೆಸ್ಟ್ ತಂಡವನ್ನು ಮುನ್ನಡೆಸಲಿದ್ದಾರೆ.