
ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಕೊಲಂಬೊದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ತಂಡಕ್ಕೆ ಉತ್ತಮ ಆರಂಭ ಲಭಿಸಿದ್ದು, ಸತತ ಎರಡನೇ ಪಂದ್ಯದಲ್ಲೂ ಕನ್ನಡಿಗ ದೇವದತ್ ಪಡಿಕ್ಕಲ್ ತಮ್ಮ ಅಮೋಘ ಪ್ರದರ್ಶನವನ್ನು ಮುಂದುವರೆಸಿದ್ದಾರೆ(PC-PTI).

ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಶತಕದ ಇನ್ನಿಂಗ್ಸ್ ಕಟ್ಟಿದ್ದ ಪಡಿಕ್ಕಲ್, ಇದೀಗ ಕೊಲಂಬೊದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದ್ದಾರೆ. ಪಡಿಕ್ಕಲ್ ಅವರ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ 150 ರನ್ಗಳ ಗಡಿ ಕೂಡ ದಾಟಿದೆ(PC-PTI).

ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಸಾಧಾರಣ ಆರಂಭ ಲಭಿಸಿತು. ಮೊದಲ ವಿಕೆಟ್ಗೆ ರಾಹುಲ್ ಮತ್ತು ಜೈಸ್ವಾಲ್ 37 ರನ್ಗಳ ಜೊತೆಯಾಟ ನೀಡಿದರು. 18 ರನ್ ಬಾರಿಸಿ ರಾಹುಲ್ ಔಟಾದ ಬಳಿಕ ಬ್ಯಾಟಿಂಗ್ಗೆ ಬಂದ ಪಡಿಕ್ಕಲ್ ಮೊದಲ ಟೆಸ್ಟ್‌ನಲ್ಲಿ ಎಲ್ಲಿಗೆ ನಿಲ್ಲಿಸಿದ್ದರೋ ಅಲ್ಲಿಂದಲೇ ತಮ್ಮ ಆಟವನ್ನು ಮುಂದುವರೆಸಿದರು(PC-PTI).

ಎರಡನೇ ವಿಕೆಟ್ಗೆ ಜೈಸ್ವಾಲ್ ಜೊತೆಗೆ 29 ರನ್ಗಳ ಜೊತೆಯಾಟ ಕಟ್ಟಿದ ಪಡಿಕ್ಕಲ್, ನಂತರ ಬಂದ ನಾಯಕ ಶುಭ್ಮನ್ ಗಿಲ್ ಜೊತೆಗೆ ಅಜೇಯ ಶತಕದ ಜೊತೆಯಾಟವನ್ನಾಡಿದ್ದಾರೆ. ಇವರಿಬ್ಬರ ಜೊತೆಯಾಟದಿಂದಾಗಿ ಟೀಂ ಇಂಡಿಯಾ ದ್ವಿಶತಕದ ಸನಿಹಕ್ಕೆ ಬಂದಿದೆ(PC-PTI).

ಈ ಸುದ್ದಿ ಬರೆಯುವ ಹೊತ್ತಿಗೆ ದೇವದತ್ ಪಡಿಕ್ಕಲ್ 117 ಎಸೆತಗಳಲ್ಲಿ 63 ರನ್ ಬಾರಿಸಿ ಆಡುತ್ತಿದ್ದರೆ, ಇತ್ತ ನಾಯಕ ಗಿಲ್ 108 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿ ವಿಕೆಟ್ ಒಪ್ಪಿಸಿದರು. ಪಡಿಕ್ಕಲ್ ಮೊದಲ ಟೆಸ್ಟ್ನಲ್ಲೂ ಕ್ರಮವಾಗಿ 167 ಮತ್ತು 44 ರನ್ಗಳ ಇನ್ನಿಂಗ್ಸ್ ಆಡಿದ್ದರು. ಪಡಿಕ್ಕಲ್ ಅವರ ಈ ಪ್ರದರ್ಶನ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತ್ತು(PC-PTI).