IND vs WI: ಕ್ರಿಕೆಟ್ ದೇವರ ದಾಖಲೆ ಮೇಲೆ ಕಣ್ಣಿಟ್ಟ ಕಿಂಗ್ ಕೊಹ್ಲಿ; ರೋಹಿತ್ಗೂ ಇದೆ ಅವಕಾಶ
India Vs West Indies: ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾದ ಹಿರಿಯ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಪ್ರಮುಖ ಮೈಲಿಗಲ್ಲುಗಳ ಮೇಲೆ ಕಣ್ಣಿಟ್ಟಿದ್ದಾರೆ.
1 / 7
ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾದ ಹಿರಿಯ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಪ್ರಮುಖ ಮೈಲಿಗಲ್ಲುಗಳ ಮೇಲೆ ಕಣ್ಣಿಟ್ಟಿದ್ದಾರೆ.
2 / 7
ಸರಣಿಯ ಮೊದಲ ಪಂದ್ಯವು ಜುಲೈ 27 ರಂದು ಬಾರ್ಬಡೋಸ್‌ನಲ್ಲಿ ನಡೆಯಲಿದ್ದು, ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸಿದರೆ ಅಂದರೆ 102 ರನ್ ಬಾರಿಸಿದರೆ, ಏಕದಿನ ಮಾದರಿಯಲ್ಲಿ 13000 ರನ್ ಪೂರೈಸಲಿದ್ದಾರೆ.
3 / 7
ಇದರೊಂದಿಗೆ ಅತಿ ವೇಗವಾಗಿ 13000 ರನ್ ಪೂರೈಸಿದ ಆಟಗಾರರ ಪೈಕಿ ಮೊದಲ ಸ್ಥಾನದಲ್ಲಿರುವ ಸಚಿನ್ ತೆಂಡೂಲ್ಕರ್ ಅವರನ್ನು ಕಿಂಗ್ ಕೊಹ್ಲಿ ಹಿಂದಿಕ್ಕಲಿದ್ದಾರೆ. ಪ್ರಸ್ತುತ ನಂ.1 ಸ್ಥಾನದಲ್ಲಿರುವ ಕ್ರಿಕೆಟ್ ದೇವರು 321 ಏಕದಿನ ಪಂದ್ಯಗಳಲ್ಲಿ 13000 ರನ್‌ಗಳ ಗಡಿ ದಾಟಿದ್ದರು.
4 / 7
ಸದ್ಯ ಕೊಹ್ಲಿ 50 ಓವರ್‌ಗಳ ಮಾದರಿಯಲ್ಲಿ 274 ಪಂದ್ಯಗಳನ್ನಾಡಿದ್ದು, ಇದರಲಲ್ಇ 12898 ರನ್ ಬಾರಿಸಿದ್ದಾರೆ. ಇದೀಗ ಲಿಟ್ಲ್ ಮಾಸ್ಟರ್ ದಾಖಲೆಯನ್ನು ಮುರಿಯಲು ಕೊಹ್ಲಿಗೆ ಕೇವಲ 102 ರನ್ ಅಗತ್ಯವಿದೆ.
5 / 7
ಕೊಹ್ಲಿ ಹೊರತಾಗಿ ನಾಯಕ ರೋಹಿತ್ ಕೂಡ ಏಕದಿನ ಮಾದರಿಯಲ್ಲಿ ಪ್ರಮುಖ ಮೈಲಿಗಲ್ಲು ಮೇಲೆ ಕಣ್ಣಿಟ್ಟಿದ್ದು, 50 ಓವರ್‌ಗಳ ಮಾದರಿಯಲ್ಲಿ 10,000 ರನ್‌ಗಳನ್ನು ಪೂರ್ಣಗೊಳಿಸಲು ಹಿಟ್ಮ್ಯಾನ್ಗೆ ಕೇವಲ 175 ರನ್‌ಗಳ ಅಗತ್ಯವಿದೆ.
6 / 7
ಇದರೊಂದಿಗೆ ರೋಹಿತ್ 10,000 ರನ್ ಕ್ಲಬ್‌ಗೆ ಪ್ರವೇಶಿಸಿದ ಆರನೇ ಭಾರತೀಯ ಮತ್ತು ಒಟ್ಟಾರೆ 15 ನೇ ಆಟಗಾರನೆಂಬ ದಾಖಲೆ ಬರೆಯಲ್ಲಿದ್ದಾರೆ.
7 / 7
ಈ ವಿಚಾರದಲ್ಲಿ ಸಚಿನ್ ತೆಂಡೂಲ್ಕರ್ (18,426) ಮೊದಲ ಸ್ಥಾನದಲ್ಲಿದ್ದು, ವಿರಾಟ್ ಕೊಹ್ಲಿ (12,809), ಸೌರವ್ ಗಂಗೂಲಿ (11,363), ರಾಹುಲ್ ದ್ರಾವಿಡ್ (10,889) ಮತ್ತು ಎಂಎಸ್ ಧೋನಿ (10,773) ಕ್ರಮವಾಗಿ ಸಚಿನ್ ನಂತರದ ಸ್ಥಾನದಲ್ಲಿದ್ದಾರೆ.