IND vs BAN: ಭಾರತಕ್ಕೆ ಗೆಲ್ಲಲೇ ಬೇಕಾದ ದ್ವಿತೀಯ ಏಕದಿನ ಪಂದ್ಯ ಯಾವಾಗ ನಡೆಯಲಿದೆ?

| Updated By: Vinay Bhat

Updated on: Dec 05, 2022 | 9:30 AM

India vs Bangladesh 2nd ODI: ಭಾರತ ಹಾಗೂ ಬಾಂಗ್ಲಾದೇಶ ನಡುವಣ ದ್ವಿತೀಯ ಏಕದಿನ ಪಂದ್ಯ ಡಿಸೆಂಬರ್ 7 ಬುಧವಾರದಂದು ಢಾಕಾದ ಶೇರೆ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯ ಬೆಳಗ್ಗೆ 11:30ಕ್ಕೆ ಆರಂಭವಾಗಲಿದ್ದು, ಟಾಸ್ 11 ಗಂಟೆಗೆ ನಡೆಯಲಿದೆ.

1 / 8
ಢಾಕಾದ ಶೇರೆ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಕಳಪೆ ಪ್ರದರ್ಶನ ತೋರಿತು. ಬಲಿಷ್ಠ ಬ್ಯಾಟಿಂಗ್ ಪಡೆ ಎಂದು ಹೇಳಿಕೊಳ್ಳುವ ಟೀಮ್ ಇಂಡಿಯಾ ಏಕದಿನ ಪಂದ್ಯದಲ್ಲಿ 200+ ರನ್ ಹೊಡೆಯಲು ಸಾಧ್ಯವಾಗಲಿಲ್ಲ.

2 / 8
ಬೌಲರ್​ಗಳ ಒಂದು ಹಂತದ ವರೆಗೆ ಮಾರಕ ದಾಳಿ ಸಂಘಟಿಸಿದರೂ ಅಂತಿಮ ಹಂತದಲ್ಲಿ ಫೀಲ್ಡಿಂಗ್​ನಲ್ಲಿ ಮಾಡಿದ ಕೆಲ ಎಡವಿಟ್ಟು ತಂಡದ ಸೋಲಿನಲ್ಲಿ ಮುಖ್ಯ ಪಾತ್ರವಹಿಸಿತು. ಈ ಮೂಲಕ ಬಾಂಗ್ಲಾ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ.

3 / 8
ಭಾರತ ಸರಣಿ ವಶಪಡಿಸಿಕೊಳ್ಳ ಬೇಕಾದರೆ, ಮಾನ ಉಳಿಸಿಕೊಳ್ಳಬೇಕಾದರೆ ಉಳಿದಿರುವ ಎರಡೂ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ. ಹಾಗಾದರೆ, ಭಾರತ- ಬಾಂಗ್ಲಾದೇಶ ದ್ವಿತೀಯ ಏಕದಿನ ಪಂದ್ಯ ಯಾವಾಗ?, ಎಲ್ಲಿ ನಡೆಯಲಿದೆ ಎಂಬುದನ್ನು ನೋಡೋಣ.

4 / 8
ಭಾರತ ಹಾಗೂ ಬಾಂಗ್ಲಾದೇಶ ನಡುವಣ ದ್ವಿತೀಯ ಏಕದಿನ ಪಂದ್ಯ ಡಿಸೆಂಬರ್ 7 ಬುಧವಾರದಂದು ಢಾಕಾದ ಶೇರೆ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಮೊದಲ ಏಕದಿನ ಕೂಡ ಇಲ್ಲೇ ನಡೆದಿತ್ತು. ಈ ಪಂದ್ಯ ಬೆಳಗ್ಗೆ 11:30ಕ್ಕೆ ಆರಂಭವಾಗಲಿದ್ದು, ಟಾಸ್ 11 ಗಂಟೆಗೆ ನಡೆಯಲಿದೆ.

5 / 8
ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದೆ. ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಸೋನಿ ಲೈವ್ ಅಪ್ಲಿಕೇಶನ್‌ನಲ್ಲಿ ನೋಡಬಹುದು. ಜಿಯೋ ಟಿವಿ ಆ್ಯಪ್ ಇದ್ದವೂ ಇದರ ಮೂಲಕ ಕೂಡ ಸೋನಿ ಸ್ಪೋರ್ಟ್ಸ್ ಚಾನೆಲ್​ನಲ್ಲಿ ವೀಕ್ಷಿಸಬಹುದು.v

6 / 8
ಮೊದಲ ಏಕದಿನ ಪಂದ್ಯದಲ್ಲಿ ತಂಡದ ಸೋಲಿಗೆ ಕಳಪೆ ಬ್ಯಾಟಿಂಗ್ ಪ್ರದರ್ಶನವೇ ಕಾರಣ ಎಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ಈ ಪಂದ್ಯ ತುಂಬಾ ರೋಚಕತೆಯಿಂದ ಕೂಡಿತ್ತು. ನಾವು ಒಂದು ಸಂದರ್ಭದಲ್ಲಿ ಅತ್ಯುತ್ತಮ ಕಮ್​ಬ್ಯಾಕ್ ಮಾಡಿದೆವು. ಆದರೆ, ಬ್ಯಾಟಿಂಗ್​ನಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ ಎಂದು ತಿಳಿಸಿದ್ದಾರೆ.

7 / 8
ನಾವು 184 ರನ್ ಗಳಿಸಿದ್ದು ಎಲ್ಲಿಗೂ ಸಾಲದು. ಬ್ಯಾಟರ್​ಗಳು ವೈಫಲ್ಯ ಅನುಭವಿಸಿದರು. ಆದರೆ, ಬೌಲರ್​ಗಳಿಂದ ಉತ್ತಮ ಪ್ರದರ್ಶನ ಮೂಡಿಬಂತು. ನಮ್ಮ ಬತ್ತಳಿಕೆಯಿಂದ ರನ್ ಬರಲಿಲ್ಲ. ಇನ್ನೂ 25 ರಿಂದ 30 ರನ್ ಹೊಡೆದಿದ್ದರೆ ನಮಗೆ ಸಹಾಯ ಆಗುತ್ತಿತ್ತು. 25 ಓವರ್ ಆಗುವ ಹೊತ್ತಿಗೆ ನಾವು 240-250 ರನ್ ಗಳಿಸುವ ಬಗ್ಗೆ ಎದುರು ನೋಡುತ್ತಿದ್ದೆವು. ಸತತವಾಗಿ ವಿಕೆಟ್ ಕಳೆದುಕೊಂಡು ಸಾಗಿದಾಗ ಇದು ಸಾಧ್ಯವಿಲ್ಲ - ರೋಹಿತ್ ಶರ್ಮಾ.

8 / 8
ಇಂಥಹ ವಿಕೆಟ್​ನಲ್ಲಿ ಯಾವರೀತಿ ಬ್ಯಾಟಿಂಗ್ ಮಾಡಬೇಕೆಂದು ಕಲಿಯಬೇಕಿದೆ. ಈ ವಿಕೆಟ್ ಬಗ್ಗೆ ನಮಗೆ ತಿಳಿದಿದ್ದರೂ ಈರೀತಿ ಆಡಿದ್ದಕ್ಕೆ ಕ್ಷಮೆಯಿಲ್ಲ. ಈ ಸೋಲಿನಿಂದ ನಮ್ಮವರು ಪಾಠ ಕಲಿಯುತ್ತಾರೆ ಹಾಗೂ ಮುಂದಿನ ಪಂದ್ಯದಲ್ಲಿ ಚೆನ್ನಾಗಿ ಆಡುತ್ತಾರೆ ಎಂಬ ನಂಬಿಕೆಯಿದೆ ಎಂಬುದು ರೋಹಿತ್ ಮಾತು.

Published On - 9:30 am, Mon, 5 December 22