Updated on: Aug 17, 2022 | 2:30 PM
ಭಾರತ ಮತ್ತು ಜಿಂಬಾಬ್ವೆ ನಡುವಿನ ಮೂರು ಏಕದಿನ ಸರಣಿ ಆಗಸ್ಟ್ 18 ರಿಂದ (ಗುರುವಾರ) ಆರಂಭವಾಗಲಿದೆ. ಈ ಬಾರಿ ತಂಡವನ್ನು ಕೆಎಲ್ ರಾಹುಲ್ ಮುನ್ನಡೆಸಲಿದ್ದಾರೆ. ವಿಶೇಷ ಎಂದರೆ ಈ ಸರಣಿಯ ಮೂಲಕ ಭಾರತ ಬೃಹತ್ ಮೊತ್ತವನ್ನು ಪೇರಿಸಲಿದೆಯಾ ಎಂಬುದನ್ನು ಭಾರತೀಯ ಕ್ರಿಕೆಟ್ ಪ್ರೇಮಿಗಳು ಎದುರು ನೋಡುತ್ತಿದ್ದಾರೆ. ಏಕೆಂದರೆ ಜಿಂಬಾಬ್ವೆ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತ 5 ಬಾರಿ ಬೃಹತ್ ಸ್ಕೋರ್ ದಾಖಲಿಸಿದೆ. ಹಾಗಿದ್ರೆ ಭಾರತ ಬೃಹತ್ ಮೊತ್ತ ದಾಖಲಿಸಿದ್ದು ಯಾವಾಗ ಎಂದು ನೋಡೋಣ...
ಮೊಂಗಿಯಾ ಸೂಪರ್ ಬ್ಯಾಟಿಂಗ್: ಭಾರತವು 19 ಮಾರ್ಚ್ 2002 ರಂದು ಗುವಾಹಟಿಯಲ್ಲಿ ಜಿಂಬಾಬ್ವೆ ವಿರುದ್ಧ 333/6 ರನ್ ಕಲೆಹಾಕಿತ್ತು. ಈ ಪಂದ್ಯದಲ್ಲಿ ದಿನೇಶ್ ಮೊಂಗಿಯಾ ಅಜೇಯ 159 ರನ್ ಗಳಿಸಿ ಮಿಂಚಿದ್ದರು. ಅಲ್ಲದೆ ಈ ಪಂದ್ಯವನ್ನು ಭಾರತ 101 ರನ್‌ಗಳ ಅಂತರದಿಂದ ಗೆದ್ದುಕೊಂಡಿದ್ದು ವಿಶೇಷ. ದಾದಾ ಪರಾಕ್ರಮ: ಟೀಮ್ ಇಂಡಿಯಾ 10 ಮಾರ್ಚ್ 2002 ರಂದು ಮೊಹಾಲಿಯಲ್ಲಿ ನಡೆದ ಜಿಂಬಾಬ್ವ ವಿರುದ್ದದ ಏಕದಿನ ಪಂದ್ಯದಲ್ಲಿ 319/6 ರನ್ ಕಲೆಹಾಕಿತು. ಈ ಪಂದ್ಯದಲ್ಲಿ ಗಂಗೂಲಿ 86 ರನ್ ಬಾರಿಸಿದ್ದರು. ಇನ್ನು ಇದಕ್ಕೆ ಉತ್ತರವಾಗಿ ಜಿಂಬಾಬ್ವೆ 255 ರನ್‌ಗಳಿಗೆ ಆಲೌಟ್ ಆಯಿತು.
ದಾದಾ ಪರಾಕ್ರಮ: ಟೀಮ್ ಇಂಡಿಯಾ 10 ಮಾರ್ಚ್ 2002 ರಂದು ಮೊಹಾಲಿಯಲ್ಲಿ ನಡೆದ ಜಿಂಬಾಬ್ವ ವಿರುದ್ದದ ಏಕದಿನ ಪಂದ್ಯದಲ್ಲಿ 319/6 ರನ್ ಕಲೆಹಾಕಿತು. ಈ ಪಂದ್ಯದಲ್ಲಿ ಗಂಗೂಲಿ 86 ರನ್ ಬಾರಿಸಿದ್ದರು. ಇನ್ನು ಇದಕ್ಕೆ ಉತ್ತರವಾಗಿ ಜಿಂಬಾಬ್ವೆ 255 ರನ್‌ಗಳಿಗೆ ಆಲೌಟ್ ಆಯಿತು.
ಗಂಗೂಲಿ ಭರ್ಜರಿ ಶತಕ: ಜಿಂಬಾಬ್ವೆ ವಿರುದ್ಧ ಭಾರತ ತಂಡದ ಮೂರನೇ ಗರಿಷ್ಠ ಸ್ಕೋರ್ 306/5. ಸೌರವ್ ಗಂಗೂಲಿ ಅವರ 144 ರನ್‌ಗಳ ಭರ್ಜರಿ ಶತಕದ ನೆರವಿನಿಂದ ಟೀಮ್ ಇಂಡಿಯಾ ಈ ಬೃಹತ್ ಮೊತ್ತ ಕಲೆಹಾಕಿತ್ತು. 5 ಡಿಸೆಂಬರ್, 2000 ರಂದು ಅಹಮದಾಬಾದ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ 61 ರನ್‌ಗಳಿಂದ ಜಯ ಸಾಧಿಸಿತ್ತು.
ಅಜರ್ ಅಬ್ಬರ: ಏಪ್ರಿಲ್ 9, 1998 ರಂದು ಜಿಂಬಾಬ್ವೆ ವಿರುದ್ಧ ಭಾರತ 3 ವಿಕೆಟ್ ನಷ್ಟಕ್ಕೆ 301 ರನ್ ಕಲೆಹಾಕಿತ್ತು. ಕಟಕ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಮೊಹಮ್ಮದ್ ಅಜರುದ್ದೀನ್ ಅಜೇಯ 153 ಮತ್ತು ಅಜಯ್ ಜಡೇಜಾ ಅಜೇಯ 116 ರನ್ ಗಳಿಸಿ ಮಿಂಚಿದ್ದರು. ಇನ್ನು ಈ ಪಂದ್ಯವನ್ನು ಭಾರತ 32 ರನ್‌ಗಳಿಂದ ಗೆದ್ದುಕೊಂಡಿತು.
ಬದಾನಿ-ಅಗರ್ಕರ್ ಮಿಂಚಿಂಗ್: 5 ಡಿಸೆಂಬರ್ 2000 ರಂದು ರಾಜ್‌ಕೋಟ್‌ನಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಭಾರತ 6 ವಿಕೆಟ್‌ಗೆ 301 ರನ್ ಗಳಿಸಿತು. ಇದು ಜಿಂಬಾಬ್ವೆ ವಿರುದ್ದ ಟೀಮ್ ಇಂಡಿಯಾ ಕಲೆಹಾಕಿದ ಐದನೇ ಗರಿಷ್ಠ ಸ್ಕೋರ್. ಅಂದು ಭಾರತದ ಪರ ಹೇಮಂಗ್ ಬದಾನಿ 77 ಮತ್ತು ಅಜಿತ್ ಅಗರ್ಕರ್ ಅಜೇಯ 67 ರನ್ ಇನಿಂಗ್ಸ್ ಆಡಿದ್ದರು. ಅಲ್ಲದೆ ಈ ಪಂದ್ಯವನ್ನು ಭಾರತ 39 ರನ್‌ಗಳಿಂದ ಗೆದ್ದುಕೊಂಡಿತು.
ಅಂದರೆ ಜಿಂಬಾಬ್ವೆ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತ ಇದುವರೆಗೆ ಐದು ಬಾರಿ 300ಕ್ಕೂ ಹೆಚ್ಚು ರನ್ ಗಳಿಸಿದೆ. ಆದರೆ, 2002ರ ಬಳಿಕ ಟೀಮ್ ಇಂಡಿಯಾ ಜಿಂಬಾಬ್ವೆ ವಿರುದ್ದ 300 ರನ್‌ಗಳ ಗಡಿದಾಟಿಲ್ಲ ಎಂಬುದು ವಿಶೇಷ. ಈ ಬಾರಿಯಾದರೂ ಜಿಂಬಾಬ್ವೆ ಟೀಮ್ ಇಂಡಿಯಾ ಆಟಗಾರರು ಮೂರಕ್ಕೂ ಅಧಿಕ ರನ್ ಕಲೆಹಾಕಿ 20 ವರ್ಷಗಳ ಬೃಹತ್ ಮೊತ್ತದ ಬರ ನೀಗಿಸಲಿದ್ದಾರಾ ಕಾದು ನೋಡಬೇಕಿದೆ.