ಒಂದು ವರ್ಷದೊಳಗೆ 16 ಟೆಸ್ಟ್ ಪಂದ್ಯ; ಗೌತಮ್ ಗಂಭೀರ್​ಗೆ ಆರಂಭದಲ್ಲೇ ಅಗ್ನಿ ಪರೀಕ್ಷೆ

Updated on: Aug 22, 2024 | 6:07 PM

Team India: ಪ್ರಸ್ತುತ ರಜೆಯಲ್ಲಿರುವ ಟೀಂ ಇಂಡಿಯಾ ಆ ಬಳಿಕ ಒಂದರ ಹಿಂದೆ ಒಂದರಂತೆ ಹಲವು ಟೆಸ್ಟ್ ಸರಣಿಗಳನ್ನು ಆಡಲಿದೆ. ಬಿಸಿಸಿಐ ಇಂದು ಪ್ರಕಟಿಸಿರುವ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್ ಸರಣಿಯೂ ಸೇರಿದಂತೆ ಭಾರತ ತಂಡ ಸುಮಾರು 1 ವರ್ಷದೊಳಗೆ ಒಟ್ಟು 16 ಟೆಸ್ಟ್ ಪಂದ್ಯಗಳನ್ನು ಆಡಬೇಕಿದೆ.

1 / 7
ರಾಹುಲ್ ದ್ರಾವಿಡ್ ನಂತರ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ಗೌತಮ್ ಗಂಭೀರ್​ಗೆ ಸೋಲು ಗೆಲುವಿನ ಆರಂಭ ಸಿಕ್ಕಿದೆ. ಶ್ರೀಲಂಕಾ ಪ್ರವಾಸದೊಂದಿಗೆ ತಮ್ಮ ಅಧಿಕಾರಾವಧಿಯನ್ನು ಪ್ರಾರಂಭಿಸಿದ ಗಂಭೀರ್​ಗೆ ಟಿ20 ಸರಣಿಯಲ್ಲಿ ಗೆಲುವಿನ ಶುಭಾರಂಭ ಸಿಕ್ಕರೆ, ಏಕದಿನ ಸರಣಿಯಲ್ಲಿ ಸೋಲಿನ ಆಘಾತ ಎದುರಾಯಿತು.

ರಾಹುಲ್ ದ್ರಾವಿಡ್ ನಂತರ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ಗೌತಮ್ ಗಂಭೀರ್​ಗೆ ಸೋಲು ಗೆಲುವಿನ ಆರಂಭ ಸಿಕ್ಕಿದೆ. ಶ್ರೀಲಂಕಾ ಪ್ರವಾಸದೊಂದಿಗೆ ತಮ್ಮ ಅಧಿಕಾರಾವಧಿಯನ್ನು ಪ್ರಾರಂಭಿಸಿದ ಗಂಭೀರ್​ಗೆ ಟಿ20 ಸರಣಿಯಲ್ಲಿ ಗೆಲುವಿನ ಶುಭಾರಂಭ ಸಿಕ್ಕರೆ, ಏಕದಿನ ಸರಣಿಯಲ್ಲಿ ಸೋಲಿನ ಆಘಾತ ಎದುರಾಯಿತು.

2 / 7

ಇಂತಹ ಪರಿಸ್ಥಿತಿಯಲ್ಲಿ ಮುಂಬರುವ ಸರಣಿಗಳು ಗೌತಮ್ ಗಂಭೀರ್‌ಗೆ ಬಹಳ ಮಹತ್ವದ್ದಾಗಿದೆ. ಪ್ರಸ್ತುತ ರಜೆಯಲ್ಲಿರುವ ಟೀಂ ಇಂಡಿಯಾ ಆ ಬಳಿಕ ಒಂದರ ಹಿಂದೆ ಒಂದರಂತೆ ಹಲವು ಟೆಸ್ಟ್ ಸರಣಿಗಳನ್ನು ಆಡಲಿದೆ. ಬಿಸಿಸಿಐ ಇಂದು ಪ್ರಕಟಿಸಿರುವ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್ ಸರಣಿಯೂ ಸೇರಿದಂತೆ ಭಾರತ ತಂಡ ಸುಮಾರು 1 ವರ್ಷದೊಳಗೆ ಒಟ್ಟು 16 ಟೆಸ್ಟ್ ಪಂದ್ಯಗಳನ್ನು ಆಡಬೇಕಿದೆ.

3 / 7

ಟೀಂ ಇಂಡಿಯಾದ ಮುಂದಿನ ಸರಣಿಯು ಬಾಂಗ್ಲಾದೇಶದ ವಿರುದ್ಧ ನಡೆಯಲಿದೆ. ಉಭಯ ತಂಡಗಳ ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಲ್ಲಿದೆ. ಈ ಸರಣಿಯು ಸೆಪ್ಟೆಂಬರ್ 19 ರಿಂದ ಆರಂಭವಾಗಲಿದ್ದು, ಸರಣಿಯ ಮೊದಲ ಪಂದ್ಯ ಚೆನ್ನೈನಲ್ಲಿ ಸೆಪ್ಟೆಂಬರ್ 19 ರಿಂದ 23 ರವರೆಗೆ ಮತ್ತು ಎರಡನೇ ಟೆಸ್ಟ್ ಪಂದ್ಯ ಕಾನ್ಪುರದಲ್ಲಿ ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 1 ರವರೆಗೆ ನಡೆಯಲಿದೆ.

4 / 7

ಬಾಂಗ್ಲಾದೇಶದ ನಂತರ ಟೀಂ ಇಂಡಿಯಾ ತನ್ನ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಆಡಬೇಕಿದೆ. ಅಕ್ಟೋಬರ್ 16 ರಿಂದ ಎರಡು ತಂಡಗಳ ನಡುವೆ 3 ಪಂದ್ಯಗಳು ನಡೆಯಲಿವೆ. ಸರಣಿಯ ಮೊದಲ ಟೆಸ್ಟ್ ಪಂದ್ಯ ಬೆಂಗಳೂರಿನಲ್ಲಿ ಅಕ್ಟೋಬರ್ 16 ರಿಂದ 20 ರವರೆಗೆ ನಡೆಯಲಿದೆ. ಇದರ ನಂತರ ಎರಡನೇ ಟೆಸ್ಟ್ ಅಕ್ಟೋಬರ್ 24 ರಿಂದ 28 ರವರೆಗೆ ಪುಣೆಯಲ್ಲಿ ನಡೆಯಲಿದೆ. ಮೂರನೇ ಮತ್ತು ಕೊನೆಯ ಟೆಸ್ಟ್ ನವೆಂಬರ್ 1 ರಿಂದ 5 ರವರೆಗೆ ಮುಂಬೈನಲ್ಲಿ ನಡೆಯಲಿದೆ.

5 / 7

ಗೌತಮ್ ಗಂಭೀರ್ ಅವರ ಅತಿದೊಡ್ಡ ಟೆಸ್ಟ್ ಈ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿದ್ದು, ಅಲ್ಲಿ ಎರಡು ತಂಡಗಳ ನಡುವೆ 5 ಟೆಸ್ಟ್ ಪಂದ್ಯಗಳ ಬಾರ್ಡರ್ ಗವಾಸ್ಕರ್ ಸರಣಿ ನಡೆಯಲಿದೆ. ಇದರಲ್ಲಿ ಡೇ ನೈಟ್ ಟೆಸ್ಟ್ ಪಂದ್ಯವೂ ಸೇರಿದೆ. ಈ ಸರಣಿಯು ನವೆಂಬರ್ 22 ರಿಂದ ಪ್ರಾರಂಭವಾಗಲಿದ್ದು, ಮುಂದಿನ ವರ್ಷದ ಆರಂಭದವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಟೀಂ ಇಂಡಿಯಾ ಪರ್ತ್, ಅಡಿಲೇಡ್, ಬ್ರಿಸ್ಬೇನ್, ಮೆಲ್ಬೋರ್ನ್ ಮತ್ತು ಸಿಡ್ನಿ ಮೈದಾನಗಳಲ್ಲಿ ಟೆಸ್ಟ್ ಪಂದ್ಯಗಳನ್ನು ಆಡಲಿದೆ.

6 / 7

ಟೀಂ ಇಂಡಿಯಾ ಮುಂದಿನ ವರ್ಷ ಇಂಗ್ಲೆಂಡ್‌ನಲ್ಲಿ ತನ್ನ ಮೊದಲ ಟೆಸ್ಟ್ ಸರಣಿಯನ್ನು ಆಡಲಿದೆ. ಉಭಯ ತಂಡಗಳ ನಡುವೆ 5 ಟೆಸ್ಟ್ ಪಂದ್ಯಗಳು ನಡೆಯಲಿವೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಜೂನ್ 20 ರಿಂದ ಲೀಡ್ಸ್‌ನಲ್ಲಿ ನಡೆಯಲಿದ್ದು, ಕೊನೆಯ ಟೆಸ್ಟ್ ಜುಲೈ 31 ರಂದು ನಡೆಯಲಿದೆ.

7 / 7

ಆದರೆ ಈ ಸರಣಿಗೂ ಮುನ್ನ 2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ ಪಂದ್ಯ ನಡೆಯಲ್ಲಿದ್ದು, ಒಂದು ವೇಳೆ ಟೀಂ ಇಂಡಿಯಾ ಫೈನಲ್​ಗೆ ಅರ್ಹತೆ ಪಡೆದರೆ, ಗಂಭೀರ್ ಸಾರಥ್ಯದಲ್ಲಿ ಟೀಂ ಇಂಡಿಯಾಕ್ಕೆ ಐಸಿಸಿ ಟ್ರೋಫಿ ಗೆಲ್ಲುವ ಅವಕಾಶ ಒದಗಿಬರಲಿದೆ.

Loading...
Unable to load recommendations.
Follow Us