Rohit Sharma Lifestyle: 200 ಕೋಟಿ ರೂ. ಆಸ್ತಿ ಹೊಂದಿರುವ ರೋಹಿತ್ ಶರ್ಮಾ ಈಗ ಟೀಮ್ ಇಂಡಿಯಾದ ಹೊಸ ಬಾಸ್

Updated on: Feb 20, 2022 | 12:02 PM

Rohit Sharma Net Worth: ಕೇವಲ ಕ್ರಿಕೆಟ್ ಲೋಕದಿಂದ ಮಾತ್ರವಲ್ಲದೆ ರೋಹಿತ್ ಶರ್ಮಾ ಮೈದಾನದ ಹೊರಗೆಯೂ ತಮ್ಮ ಜೀವನಶೈಲಿಯಿಂದ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಸದ್ಯ ರೋಹಿತ್ ಶರ್ಮಾ 200 ಕೋಟಿಗೂ ಅಧಿಕ ಆಸ್ತಿ ಹೊಂದಿದ್ದಾರೆ. 2021 ರಲ್ಲಿ ಇವರ ವಾರ್ಷಿ ಆಧಾಯ 160 ಕೋಟಿ ರೂ. ಆಗಿತ್ತು.

1 / 9
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಆಯ್ಕೆ ಸಮಿತಿ ಶನಿವಾರ ಶ್ರೀಲಂಕಾ ವಿರುದ್ಧದ ಮೂರು ಟ್ವೆಂಟಿ-20 ಮತ್ತು ಎರಡು ಟೆಸ್ಟ್ ಪಂದ್ಯಗಳಿಗೆ ಭಾರತ ತಂಡವನ್ನು ಪ್ರಕಟಿಸಿದೆ. ಇದರಲ್ಲಿ ಕೆಲವೊಂದು ಅಚ್ಚರಿಯ ನಿರ್ಧಾರಗಳಿದ್ದವು. ಸೀನಿಯರ್ ಪ್ಲೇಯರ್​ಗಳಾದ ರಹಾನೆ, ಪೂಜಾರ, ಇಶಾಂತ್ ಶರ್ಮಾ ಮತ್ತು ವೃದ್ದಿಮಾನ್ ಸಾಹ ಅವರನ್ನು ಕೈಬಿಡಲಾಗಿದೆ. ರೋಹಿತ್ ಶರ್ಮ ಅವರನ್ನು ಟೆಸ್ಟ್ ಕ್ರಿಕೆಟ್​ನ ನೂತನ ನಾಯಕನಾಗಿ ಘೋಷಣೆ ಮಾಡಲಾಗಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಆಯ್ಕೆ ಸಮಿತಿ ಶನಿವಾರ ಶ್ರೀಲಂಕಾ ವಿರುದ್ಧದ ಮೂರು ಟ್ವೆಂಟಿ-20 ಮತ್ತು ಎರಡು ಟೆಸ್ಟ್ ಪಂದ್ಯಗಳಿಗೆ ಭಾರತ ತಂಡವನ್ನು ಪ್ರಕಟಿಸಿದೆ. ಇದರಲ್ಲಿ ಕೆಲವೊಂದು ಅಚ್ಚರಿಯ ನಿರ್ಧಾರಗಳಿದ್ದವು. ಸೀನಿಯರ್ ಪ್ಲೇಯರ್​ಗಳಾದ ರಹಾನೆ, ಪೂಜಾರ, ಇಶಾಂತ್ ಶರ್ಮಾ ಮತ್ತು ವೃದ್ದಿಮಾನ್ ಸಾಹ ಅವರನ್ನು ಕೈಬಿಡಲಾಗಿದೆ. ರೋಹಿತ್ ಶರ್ಮ ಅವರನ್ನು ಟೆಸ್ಟ್ ಕ್ರಿಕೆಟ್​ನ ನೂತನ ನಾಯಕನಾಗಿ ಘೋಷಣೆ ಮಾಡಲಾಗಿದೆ.

2 / 9

ಹೌದು, ಇದೀಗ ODI ಮತ್ತು T20 ನಂತರ ರೋಹಿತ್ ಶರ್ಮಾಗೆ ಟೆಸ್ಟ್ ತಂಡದ ನಾಯಕತ್ವ ನೀಡಲಾಗಿದೆ. ಈ ಮೂಲಕ ರೋಹಿತ್ ಶರ್ಮಾ ಈಗ ಎಲ್ಲಾ ಮೂರು ಮಾದರಿಗಳಲ್ಲಿ ಭಾರತ ತಂಡದ ನೂತನ ನಾಯಕರಾಗಿದ್ದಾರೆ.

3 / 9

ಏಕದಿನದಲ್ಲಿ ಮೂರು ದ್ವಿಶತಕ ಸಿಡಿಸಿರುವ ರೋಹಿತ್ ಶರ್ಮಾ ವಿಶ್ವದ ಏಕೈಕ ಬ್ಯಾಟ್ಸ್​ಮನ್​. 2014ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ರೋಹಿತ್ 264 ರನ್ ಗಳಿಸಿದ್ದರು. ಇದು ವಿಶ್ವ ದಾಖಲೆಯೂ ಹೌದು.

4 / 9

ಕೇವಲ ಕ್ರಿಕೆಟ್ ಲೋಕದಿಂದ ಮಾತ್ರವಲ್ಲದೆ ರೋಹಿತ್ ಶರ್ಮಾ ಮೈದಾನದ ಹೊರಗೆಯೂ ತಮ್ಮ ಜೀವನಶೈಲಿಯಿಂದ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಹಿಟ್​ಮ್ಯಾನ್ ಬಳಿ ದುಬಾರಿ ಕಾರುಗಳಿವೆ. ತಮ್ಮ ಕುಟುಂಬದೊಂದಿಗೆ ಈ ಕಾರುಗಳಲ್ಲಿ ಸಾಗುತ್ತಾ ಸಾಕಷ್ಟು ಸಮಯವನ್ನು ಕಳೆಯುತ್ತಾರೆ.

5 / 9

ಸದ್ಯ ರೋಹಿತ್ ಶರ್ಮಾ 200 ಕೋಟಿಗೂ ಅಧಿಕ ಆಸ್ತಿ ಹೊಂದಿದ್ದಾರೆ. 2021 ರಲ್ಲಿ ಇವರ ವಾರ್ಷಿ ಆಧಾಯ 160 ಕೋಟಿ ರೂ. ಆಗಿತ್ತು. ಐಪಿಎಲ್ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ಈ ಬಾರಿ ಮೆಗಾ ಹರಾಜಿಗೂ ಮುನ್ನ ರೋಹಿತ್ ಶರ್ಮಾ ಅವರನ್ನು ಬರೋಬ್ಬರಿ 16 ಕೋಟಿ ರೂ. ಗೆ ಉಳಿಸಿಕೊಂಡಿತ್ತು.

6 / 9

ರೋಹಿತ್ ಶರ್ಮಾ BMW 5M ಸರಣಿಯ ಕಾರು ಹೊಂದಿದ್ದಾರೆ. ಈ ಕಾರಿನ ಬೆಲೆ ಸುಮಾರು 1.6 ಕೋಟಿ ರೂ. ಆಗಿದೆ. ಇದರ ಜೊತೆಗೆ ಮರ್ಸಿಡಿಸ್, ಆಡಿ, ಸ್ಕೋಡಾ ಲಾರಾ, ಟೊಯೊಟಾ ಫಾರ್ಚೂನ್​​ನಂತಹ ದುಬಾರಿ ಕಾರುಗಳನ್ನು ಹೊಂದಿದ್ದಾರೆ.

7 / 9

ರೋಹಿತ್ ಶರ್ಮಾ ಮುಂಬೈನ ವರ್ಲಿಯಲ್ಲಿ ಐಷಾರಾಮಿ ಫ್ಲ್ಯಾಟ್ ಹೊಂದಿದ್ದಾರೆ. ಅಹುಜಾ ಟವರ್ ಕಟ್ಟಡದ 29ನೇ ಮಹಡಿಯಲ್ಲಿ ವಾಸಿಸುತ್ತಿದ್ದಾರೆ. ಫ್ಲ್ಯಾಟ್​ನ ಮೌಲ್ಯ 30 ಕೋಟಿ ರೂ. ಅಂತೆ.

8 / 9

ರೋಹಿತ್ ಅವರು ಮದುವೆಗೂ ಮುನ್ನ ಇಂಗ್ಲಿಷ್ ಗಾಯಕಿ ಸೋಫಿಯಾ ಹಯಾತ್ ಜೊತೆ ಡೇಟಿಂಗ್ ಮಾಡುತ್ತಿದ್ದರು ಎಂಬ ಸುದ್ದಿಯಿತ್ತು. ನಂತರ ರೋಹಿತ್ 13 ಡಿಸೆಂಬರ್ 2015 ರಂದು ರಿತಿಕಾ ಸಜ್ದೇ ಅವರನ್ನು ವಿವಾಹವಾದರು.ಇವರ ಮಗಳು ಸಮೀರ ಶರ್ಮಾ.

9 / 9

ರೋಹಿತ್ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಸತತ ಐದು ಬಾರಿ ಪ್ರಶಸ್ತಿ ಜಯಿಸಿದ ಸಾಧನೆ ಮಾಡಿದೆ. ಕ್ರಿಕೆಟ್ ಜೊತೆಗೆ ರೋಹಿತ್ ಶರ್ಮಾ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ತಮ್ಮ ಕುಟುಂಬದ ಜೊತೆಗಿನ ಫೋಟೋವನ್ನು ಹಂಚಿಕೊಳ್ಳುತ್ತಿರುತ್ತಾರೆ.

Published On - 11:39 am, Sun, 20 February 22

Loading...
Unable to load recommendations.
Follow Us