AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

INDW vs AUSW: ಹರ್ಮನ್-ಜೆಮಿಮಾ ಕೆಚ್ಚೆದೆಯ ಹೋರಾಟಕ್ಕೆ ಮನಸೋತ ಭಾರತೀಯರು: ಫೋಟೋ ನೋಡಿ

Harmanpreet Kaur and Jemimah Rodrigues: ಐಸಿಸಿ ಮಹಿಳಾ ಟಿ20 ವಿಶ್ವಕಪ್​ನ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲು ಕಂಡರೂ ಹರ್ಮನ್​ಪ್ರೀತ್ ಕೌರ್ ಹಾಗೂ ಜೆಮಿಮಾ ರೋಡ್ರಿಗಸ್ ಆಡಿದ ಆಟಕ್ಕೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮನಸೋತರು.

Vinay Bhat
|

Updated on:Feb 24, 2023 | 7:47 AM

Share
ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಐಸಿಸಿ ಮಹಿಳೆ ಟಿ20 ವಿಶ್ವಕಪ್​ನಲ್ಲಿ ಫೈನಲ್​ಗೇರಲು ಭಾರತ ಮಹಿಳಾ ತಂಡ ವಿಫಲವಾಗಿದೆ. ನ್ಯೂಲೆಂಡ್ಸ್​ನ ಕೇಪ್​ಟೌನ್​ನಲ್ಲಿ ಆಸ್ಟ್ರೇಲಿಯಾ ವನಿತೆಯರ ವಿರುದ್ಧ ಗುರುವಾರ ನಡೆದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಹರ್ಮನ್ ಪಡೆಯ ವಿಶ್ವಕಪ್​ ಗೆಲ್ಲುವ ಕನಸು ನುಚ್ಚುನೂರಾಯಿತು.

1 / 8
ಕೊನೆಯ ಓವರ್ ವರೆಗೂ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಭಾರತ ಗೆಲುವಿಗಾಗಿ ಹೋರಾಟ ನಡೆಸಿತು. ಅದರಲ್ಲೂ 28 ರನ್​ಗೆ 3 ವಿಕೆಟ್ ಕಳೆದುಕೊಂಡ ಸಂದರ್ಭ ನಾಯಕಿ ಹರ್ಮನ್​ಪ್ರೀತ್ ಕೌರ್ ಹಾಗೂ ಜೆಮಿಮಾ ರೋಡ್ರಿಗಸ್ ಜೊತೆಯಾಗಿ ಇನ್ನಿಂಗ್ಸ್ ಕಟ್ಟಿದ ರೀತಿ ಅದ್ಭುತವಾಗಿತ್ತು.

2 / 8
4ನೇ ಓವರ್ ಹೊತ್ತಿಗೆ ಜೊತೆಯಾದ ಕೌರ್-ಜೆಮಿಮಾ 10.2 ಓವರ್ ವರೆಗೂ ಆಡಿದರು. 69 ರನ್​ಗಳ ಕಾಣಿಕೆ ನೀಡಿ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದ್ದರು. ಪ್ರತಿಯೊಂದು ಎಸೆತದಲ್ಲೂ ರನ್ ಹುಡುಕಿದ ಇವರು ಡಾಟ್ ಮಾಡಿದ್ದು ಕೇವಲ 2 ಎಸೆತಗಳನ್ನು ಮಾತ್ರ. ಇವರಿಬ್ಬರ ಕೆಚ್ಚೆದೆಯ ಹೋರಾಟಕ್ಕೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮನಸೋತರು.

3 / 8
ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಓಪನರ್​ಗಳಾದ ಬೆತ್ ಮೂನಿ ಮತ್ತು ಅಲಿಸ್ಸಾ ಹೀಲಿ ಭರ್ಜರಿ ಆರಂಭ ಒದಗಿಸಿ ಅರ್ಧಶತಕದ ಜೊತೆಯಾಟ ಆಡಿದರು. ಹೀಲಿ 26 ಎಸೆತಗಳಲ್ಲಿ 25 ರನ್ ಗಳಿಸಿದರೆ, ಮೂನಿ 37 ಎಸೆತಗಳಲ್​ಲಿ 54 ರನ್ ಸಿಡಿಸಿದರು.

4 / 8
ನಾಯಕಿ ಮೆಗ್ ಲ್ಯಾನಿಂಗ್ ಕೂಡ ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು. ಇವರು 34 ಎಸೆತಗಳಲ್ಲಿ 49 ರನ್ ಚಚ್ಚಿ ಅಜೇಯರಾಗಿ ಉಳಿದರು.  ಆಶ್ಲೀಗ್ ಗಾರ್ಡ್ನರ್ ಕೇವಲ 18 ಎಸೆತಗಳಲ್ಲಿ 31 ರನ್ ಕಲೆಹಾಕಿದರು. ಅಂತಿಮವಾಗಿ ಆಸ್ಟ್ರೇಲಿಯಾ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು. ಭಾರತ ಪರ ಶಿಖಾ ಪಾಂಡೆ 2 ವಿಕೆಟ್ ಪಡೆದರು.

5 / 8
ಕಠಿಣ ಟಾರ್ಗೆಟ್ ಬೆನ್ನಟ್ಟಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಪ್ರಮುಖ ಪಂದ್ಯದಲ್ಲೇ ಶಫಾಲಿ ವರ್ಮಾ (9), ಸ್ಮೃತಿ ಮಂಧಾನ (2) ಹಾಗೂ ಯಸ್ತಿಕಾ ಬಾಟಿಯಾ (4) ಬೇಗನೆ ನಿರ್ಗಮಿಸಿ ನಿರಾಸೆ ಮೂಡಿಸಿದರು. ಈ ಸಂದರ್ಭ ತಂಡಕ್ಕೆ ಆಸರೆಯಾದ ನಾಯಕಿ ಹರ್ಮನ್ ಹಾಗೂ ಜೆಮಿಮಾ ಗೆಲುವಿಗೆ ಹೋರಾಡಿದರು.

6 / 8
ಜೆಮಿಮಾ 24 ಎಸೆತಗಳಲ್ಲಿ 43 ರನ್ ಗಳಿಸಿದರೆ, ಹರ್ಮನ್ 34 ಎಸೆತಗಳಲ್ಲಿ 54 ರನ್ ಗಳಿಸಿ ರನೌಟ್​ಗೆ ಬಲಿಯಾದರು. ಕೌರ್ ಕ್ರೀಸ್​ನಲ್ಲಿ ಇರುವ ವರೆಗೆ ಗೆಲುವು ಭಾರತದ ಕಡೆಯೇ ಇತ್ತು. ಆದರೆ, ಇವರ ನಿರ್ಗಮನದ ಬೆನ್ನಲ್ಲೇ ರಿಚ್ಚಾ ಘೊಷ್ (12) ಕೂಡ ಔಟಾಗಿದ್ದು ಮತ್ತಷ್ಟು ಹೊಡೆತ ಬಿದ್ದಿತು.

7 / 8
ಕೊನೆಯ 2 ಓವರ್​ಗಳಲ್ಲಿ ಭಾರತದ ಗೆಲುವಿಗೆ 20 ರನ್​ಗಳು ಬೇಕಿತ್ತು. ಆದರೆ, ಅನುಭವಿ ಬ್ಯಾಟರ್​ಗಳೆಲ್ಲ ಪೆವಿಲಿಯನ್ ಸೇರಿದ್ದರಿಂದ ಗೆಲುವು ಸಾಧ್ಯವಾಗಲಿಲ್ಲ. ದೀಪ್ತಿ ಶರ್ಮಾ ಅಜೇಯ 20 ರನ್ ಕಲೆಹಾಕಿದರೂ ಸಾಕಾಗಲಿಲ್ಲ. ಭಾರತ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿ ಸೋಲುಂಡಿತು. ಆಸೀಸ್ 5 ರನ್​ಗಳ ರೋಚಕ ಜಯದೊಂದಿಗೆ ಫೈನಲ್​ಗೇರಿದೆ.

8 / 8

Published On - 7:08 am, Fri, 24 February 23

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು

ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ

ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!

ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು

ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ