INDW vs SAW: 20 ವರ್ಷಗಳ ಹಳೆಯ ದಾಖಲೆ ಮುರಿದ ಭಾರತ ವನಿತಾ ಪಡೆ..!

|

Updated on: Jun 19, 2024 | 7:52 PM

INDW vs SAW: ಹರ್ಮನ್​ಪ್ರೀತ್ ಕೌರ್ ಹಾಗೂ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಅವರ ಶತಕದ ನೆರವಿನಿಂದ ಟೀಂ ಇಂಡಿಯಾ ತಂಡ ತನ್ನ ಹೆಸರಿನಲ್ಲಿ ಹಲವು ದಾಖಲೆಗಳನ್ನು ಸೃಷ್ಟಿಸಿದೆ. ಇದೇ ಮೊದಲ ಬಾರಿಗೆ ಮಹಿಳಾ ತಂಡ ತನ್ನದೇ ನೆಲದಲ್ಲಿ ಏಕದಿನದಲ್ಲಿ 300 ಪ್ಲಸ್ ರನ್ ಬಾರಿಸಿರುವ ಟೀಂ ಇಂಡಿಯಾ 325 ರನ್ ಗಳಿಸುವ ಮೂಲಕ ತನ್ನ 20 ವರ್ಷಗಳ ಹಳೆಯ ದಾಖಲೆ ಮುರಿದಿದೆ.

1 / 6
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಎರಡನೇ ಏಕದಿನ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಾಯಕಿ ಹರ್ಮನ್​ಪ್ರೀತ್ ಕೌರ್ ಹಾಗೂ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಅವರ ಶತಕದ ನೆರವಿನಿಂದ ನಿಗದಿತ 50 ಓವರ್​​ಗಳಲ್ಲಿ 3 ವಿಕೆಟ್ ಕಳೆದುಕೊಂಡು ದಾಖಲೆಯ 325 ರನ್ ಕಲೆಹಾಕಿದೆ.

2 / 6
ಈ ಇಬ್ಬರ ಅಮೋಘ ಪ್ರದರ್ಶನದಿಂದಾಗಿ ಟೀಂ ಇಂಡಿಯಾ ತಂಡ ತನ್ನ ಹೆಸರಿನಲ್ಲಿ ಹಲವು ದಾಖಲೆಗಳನ್ನು ಸೃಷ್ಟಿಸಿದೆ. ಇದೇ ಮೊದಲ ಬಾರಿಗೆ ಮಹಿಳಾ ತಂಡ ತನ್ನದೇ ನೆಲದಲ್ಲಿ ಏಕದಿನದಲ್ಲಿ 300 ಪ್ಲಸ್ ರನ್ ಬಾರಿಸಿರುವ ಟೀಂ ಇಂಡಿಯಾ 325 ರನ್ ಗಳಿಸುವ ಮೂಲಕ ತನ್ನ 20 ವರ್ಷಗಳ ಹಳೆಯ ದಾಖಲೆ ಮುರಿದಿದೆ.

3 / 6
ವಾಸ್ತವವಾಗಿ ಭಾರತ ಮಹಿಳಾ ತಂಡವು 2004 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 298 ರನ್ ಗಳಿಸಿತ್ತು, ಇದು ಭಾರತದ ನೆಲದಲ್ಲಿ ತಂಡದ ಅತ್ಯಧಿಕ ಮೊತ್ತವಾಗಿತ್ತು. ಆದರೆ ಇದೀಗ, ಸ್ಮೃತಿ ಮಂಧಾನ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಶತಕಗಳ ಆಧಾರದ ಮೇಲೆ ಭಾರತ ಮಹಿಳಾ ತಂಡವು ಇತಿಹಾಸವನ್ನು ಸೃಷ್ಟಿಸಿದ್ದು, 20 ವರ್ಷಗಳ ನಂತರ ಈ ದಾಖಲೆಯನ್ನು ಮುರಿದಿದೆ.

4 / 6
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಮೊದಲು ಬ್ಯಾಟ್ ಮಾಡಿ 325 ರನ್ ಗಳಿಸಿತ್ತು. ಇದು ಏಕದಿನ ಕ್ರಿಕೆಟ್‌ನಲ್ಲಿ ಭಾರತ ಮಹಿಳಾ ತಂಡದ ಮೂರನೇ ಗರಿಷ್ಠ ಸ್ಕೋರ್ ಆಗಿದೆ. 2017ರಲ್ಲಿ ಐರ್ಲೆಂಡ್‌ ವಿರುದ್ಧ ಭಾರತ ಮಹಿಳಾ ತಂಡ ಬಾರಿಸಿದ್ದ 358 ರನ್‌, ಏಕದಿನ ಪಂದ್ಯದಲ್ಲಿ ಗಳಿಸಿದ ಅತ್ಯುತ್ತಮ ಮೊತ್ತವಾಗಿದೆ.

5 / 6
ಇದರ ನಂತರ 2022 ರಲ್ಲಿ ಭಾರತ ವನಿತಾ ಪಡೆ ಇಂಗ್ಲೆಂಡ್ ವಿರುದ್ಧ 333 ರನ್ ಕಲೆಹಾಕಿತ್ತು. ಇದು ಏಕದಿನದಲ್ಲಿ ಮಹಿಳಾ ಪಡೆ ಕಲೆಹಾಕಿದ್ದ ಎರಡನೇ ಅತ್ಯಧಿಕ ಮೊತ್ತವಾಗಿದೆ.

6 / 6
ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಪರ ಸ್ಮೃತಿ ಮಂಧಾನ 136 ರನ್ ಗಳಿಸಿದ್ದರು. ಇದು ಏಕದಿನ ಮಾದರಿಯಲ್ಲಿ ಅವರ 7ನೇ ಶತಕವಾಗಿದೆ. ನಾಯಕಿ ಹರ್ಮನ್‌ಪ್ರೀತ್ ಕೌರ್ 103 ರನ್‌ಗಳ ಇನಿಂಗ್ಸ್‌ ಆಡಿದರು. ಇದಲ್ಲದೇ ರಿಚಾ ಘೋಷ್ 13 ಎಸೆತಗಳಲ್ಲಿ 25 ರನ್ ಗಳಿಸಿದರು. ಈ ಆಟಗಾರ್ತಿಯರಿಂದಲೇ ಭಾರತ ಮಹಿಳಾ ತಂಡ 325 ರನ್ ಗಳಿಸುವಲ್ಲಿ ಯಶಸ್ವಿಯಾಯಿತು.