IPL 2021: ರೋಹಿತ್ ಶರ್ಮಾ ಕಣಕ್ಕಿಳಿಯದಿರಲು ಇದುವೇ ಅಸಲಿ ಕಾರಣ
TV9 Web | Updated By: ಝಾಹಿರ್ ಯೂಸುಫ್
Updated on:
Sep 19, 2021 | 8:51 PM
IPL 2021: ಇಂಗ್ಲೆಂಡ್ನಿಂದ ಯುಎಇಗೆ ಬಂದಿಳಿದ ಟೀಮ್ ಇಂಡಿಯಾ ಆಟಗಾರರು 6 ದಿನಗಳ ಕಾಲ ಕ್ವಾರಂಟೈನ್ನಲ್ಲಿದ್ದರು. ಅದರಂತೆ ರೋಹಿತ್ ಶರ್ಮಾ ಸೆಪ್ಟೆಂಬರ್ 18 ರಂದು ಕ್ವಾರಂಟೈನ್ ಮುಗಿಸಿ ಹೊರಬಂದಿದ್ದರು.
1 / 5
ಯುಎಇನಲ್ಲಿ ಐಪಿಎಲ್ ದ್ವಿತಿಯಾರ್ಧಕ್ಕೆ ಚಾಲನೆ ಸಿಕ್ಕಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಿತ್ತು. ಈ ಪಂದ್ಯದ ಟಾಸ್ ವೇಳೆ ಎಲ್ಲರಿಗೂ ಅಚ್ಚರಿ ಕಾದಿತ್ತು. ಏಕೆಂದರೆ ಟಾಸ್ಗಾಗಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಬದಲಿಗೆ ಹಂಗಾಮಿ ನಾಯಕ ಕೀರನ್ ಪೊಲಾರ್ಡ್ ಆಗಮಿಸಿದ್ದರು.
2 / 5
ಇದರ ಬೆನ್ನಲ್ಲೇ ಮೊದಲ ಪಂದ್ಯದಿಂದ ಹಿಟ್ಮ್ಯಾನ್ ಹೊರಗುಳಿಯಲು ಕಾರಣವೇನು ಎಂಬ ಚರ್ಚೆಗಳು ಶುರುವಾಗಿದೆ. ಏಕೆಂದರೆ ಪಂದ್ಯ ಆರಂಭಕ್ಕೂ ಮುನ್ನ ರೋಹಿತ್ ಶರ್ಮಾ ಮೈದಾನದಲ್ಲಿ ಕಾಣಿಸಿಕೊಂಡಿದ್ದರು. ಇದಾಗ್ಯೂ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಂಡಿರಲಿಲ್ಲ. ಈ ಬಗ್ಗೆ ಮಾತನಾಡಿದ್ದ ಕೀರನ್ ಪೊಲಾರ್ಡ್ ರೋಹಿತ್ ಶರ್ಮಾ ಹೊರಗುಳಿಯಲು ನಿರ್ಧರಿಸಿದ್ದಾರೆ. ಹೀಗಾಗಿ ನಾನು ತಂಡವನ್ನು ಮುನ್ನಡೆಸುತ್ತಿದ್ದೇನೆ ಎಂದಷ್ಟೇ ತಿಳಿಸಿದ್ದರು.
3 / 5
ಇದಾಗ್ಯೂ ರೋಹಿತ್ ಶರ್ಮಾ ಮೊದಲ ಪಂದ್ಯದಿಂದ ಹೊರಗುಳಿಯಲು ಕಾರಣ ಹಳೆಯ ಗಾಯ ಎನ್ನಲಾಗಿದೆ. ಏಕೆಂದರೆ ಇಂಗ್ಲೆಂಡ್ ವಿರುದ್ದ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿದ್ದರು. ಇದೇ ವೇಳೆ ಹಲವು ಬಾರಿ ಚೆಂಡು ತೊಡೆ ಭಾಗಕ್ಕೆ ತಾಗಿದ್ದರಿಂದ ರಕ್ತ ಹೆಪ್ಪುಗಟ್ಟಿತ್ತು. ಇದಾದ ಬಳಿಕ ಹಿಟ್ಮ್ಯಾನ್ ಅಭ್ಯಾಸ ನಡೆಸಿರಲಿಲ್ಲ.
4 / 5
ಇಂಗ್ಲೆಂಡ್ನಿಂದ ಯುಎಇಗೆ ಬಂದಿಳಿದ ಟೀಮ್ ಇಂಡಿಯಾ ಆಟಗಾರರು 6 ದಿನಗಳ ಕಾಲ ಕ್ವಾರಂಟೈನ್ನಲ್ಲಿದ್ದರು. ಅದರಂತೆ ರೋಹಿತ್ ಶರ್ಮಾ ಸೆಪ್ಟೆಂಬರ್ 18 ರಂದು ಕ್ವಾರಂಟೈನ್ ಮುಗಿಸಿ ಹೊರಬಂದಿದ್ದರು. ಇತ್ತ 10 ದಿನಗಳಿಗೂ ಹೆಚ್ಚಿನ ದಿನ ಮೈದಾನದಿಂದ ಹೊರಗುಳಿದಿದ್ದ ಕಾರಣ ರೋಹಿತ್ ಶರ್ಮಾ ಸಂಪೂರ್ಣ ಅಭ್ಯಾಸ ಆರಂಭಿಸಿ ಕಣಕ್ಕಿಳಿಯಲು ಬಯಸಿದ್ದಾರೆ.
5 / 5
ಹಾಗೆಯೇ ಸಂಪೂರ್ಣ ಫಿಟ್ನೆಸ್ನೊಂದಿಗೆ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಏಕೆಂದರೆ ಮುಂಬರುವ ಟಿ20 ವಿಶ್ವಕಪ್ ಅನ್ನು ಗಮನದಲ್ಲಿರಿಸಿ ಯಾವುದೇ ಗಾಯ ಉಲ್ಬಣಗೊಳ್ಳದಂತೆ ಮುನ್ನೆಚ್ಚರಿಕೆವಹಿಸಬೇಕಾಗುತ್ತದೆ. ಹೀಗಾಗಿ ಮೊದಲ ಪಂದ್ಯದಿಂದ ಹೊರಗುಳಿದು ಹಿಟ್ಮ್ಯಾನ್ 2ನೇ ಪಂದ್ಯದ ವೇಳೆ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.
Published On - 8:02 pm, Sun, 19 September 21