IPL 2021: ದುಬೈನಲ್ಲಿ ಮುಂಬೈ ಪ್ಲೇಯರ್ಸ್ ತಂಗಿರುವ ಹೋಟೆಲ್ನ ಒಂದು ದಿನದ ಬಾಡಿಗೆ ಕೇಳಿದ್ರೆ ಶಾಕ್ ಆಗ್ತೀರಾ!
TV9 Web | Updated By: Vinay Bhat
Updated on:
Aug 14, 2021 | 11:23 AM
IPL 2021 Phase 2: ದುಬೈನಲ್ಲಿ ಮುಂಬೈ ತಂಡದ ಆಟಗಾರರು ಇಸ್ಲ್ಯಾಂಡ್ನ ಪ್ರಸಿದ್ಧ ಸ್ಯಾಂಟ್ ರೆಜಿಸ್ ಸಾದಿಯತ್ ರೆಸಾರ್ಟ್ನಲ್ಲಿ ಉಳಿದುಕೊಳ್ಳುತ್ತಿದ್ದಾರೆ. ದುಬೈನಲ್ಲಿ ದುಬಾರಿ ಹೋಟೆಲ್ಗಳ ಪಟ್ಟಿಯಲ್ಲಿ ಇದುಕೂಡ ಒಂದಾಗಿದ್ದು ಸಾಕಷ್ಟು ವಿಶೇಷತೆಗಳಿಂದ ಕೂಡಿದೆ.
1 / 10
ಅರ್ಧಕ್ಕೆ ನಿಂತಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2021) 14ನೇ ಆವೃತ್ತಿಗೆ ಮತ್ತೆ ಚಾಲನೆ ಸಿಗುತ್ತಿದ್ದು, ಸೆಪ್ಟೆಂಬರ್ 19 ರಿಂದ ಆರಂಭವಾಗಲಿದೆ. ಅಕ್ಟೋಬರ್ 13ರ ವರೆಗೆ ಒಟ್ಟು 31 ಪಂದ್ಯಗಳು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ನಡೆಯಲಿವೆ.
2 / 10
ಇದರ ಸಲುವಾಗಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡ ಯುಎಇಗೆ ತಲುಪಿದೆ. ಪ್ರಮುಖ ಆಟಗಾರ ಇಶಾನ್ ಕಿಶನ್ ಸಾಮಾಜಿಕ ಜಾಲತಾಣದ ಮೂಲಕ ತಂಡ ಯುಎಇ ತಲುಪಿರುವುದನ್ನು ಖಾತರಿಪಡಿಸಿದ್ದಾರೆ.
3 / 10
ಮುಂಬೈ ಇಂಡಿಯನ್ಸ್: ಹಾರ್ದಿಕ್ ಪಾಂಡ್ಯ ಅವರ ಕಳಪೆ ಫಾರ್ಮ್ ರೋಹಿತ್ ಶರ್ಮಾ ಅವರನ್ನು ಚಿಂತೆಗೀಡು ಮಾಡಿದೆ. ಮೊದಲ ಹಂತದಲ್ಲಿ ಹಾರ್ದಿಕ್ 6 ಪಂದ್ಯಗಳಲ್ಲಿ ಕೇವಲ 52 ರನ್ ಮಾತ್ರ ಗಳಿಸಿದ್ದರು. ಇನ್ನು ಬೌಲಿಂಗ್ ಮಾಡಲು ಸಂಪೂರ್ಣ ಫಿಟ್ ಆಗಿಲ್ಲ. ಹೀಗಾಗಿ ಹಾರ್ದಿಕ್ ಪಾಂಡ್ಯ ಅವರ ಆಲ್ರೌಂಡರ್ ಪ್ರದರ್ಶನದ ಬಗ್ಗೆ ಮುಂಬೈ ಹೆಚ್ಚು ಚಿಂತಿತವಾಗಿದೆ. ಇನ್ನು ಮುಂಬೈ ತಂಡಕ್ಕೆ ಕೆಳ ಕ್ರಮಾಂಕದಲ್ಲಿ ಹಾರ್ದಿಕ್ ಸ್ಪೋಟಕ ಇನಿಂಗ್ಸ್ ಕೂಡ ಅತ್ಯಗತ್ಯ. ಹೀಗಾಗಿ ದ್ವಿತಿಯಾರ್ಧದಲ್ಲಿ ಹಾರ್ದಿಕ್ ಕಂಬ್ಯಾಕ್ನ್ನು ಮುಂಬೈ ಇಂಡಿಯನ್ಸ್ ನಿರೀಕ್ಷಿಸುತ್ತಿದೆ.
4 / 10
ದುಬೈನಲ್ಲಿ ಮುಂಬೈ ತಂಡದ ಆಟಗಾರರು ಇಸ್ಲ್ಯಾಂಡ್ನ ಪ್ರಸಿದ್ಧ ಸ್ಯಾಂಟ್ ರೆಜಿಸ್ ಸಾದಿಯತ್ ರೆಸಾರ್ಟ್ನಲ್ಲಿ ಉಳಿದುಕೊಳ್ಳುತ್ತಿದ್ದಾರೆ. ದುಬೈನಲ್ಲಿರುವ ದುಬಾರಿ ಹೋಟೆಲ್ಗಳ ಪಟ್ಟಿಯಲ್ಲಿ ಇದುಕೂಡ ಒಂದಾಗಿದ್ದು ಸಾಕಷ್ಟು ವಿಶೇಷತೆಗಳಿಂದ ಕೂಡಿದೆ.
5 / 10
ಅಬುದಾಬಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 20 ನಿಮಿಷಗಳಲ್ಲಿ ಸ್ಯಾಂಟ್ ರೆಜಿಸ್ ಸಾದಿಯತ್ ರೆಸಾರ್ಟ್ ಇದ್ದು, ಮುಂಬೈ ಆಟಗಾರರು ವಿಮಾನ ನಿಲ್ದಾಣದಿಂದ ನೇರವಾಗಿ ಇಲ್ಲಿಗೆ ತಲುಪಿದ್ದಾರೆ.
6 / 10
ಒಟ್ಟು 8 ಮಹಡಿಗಳ ಈ ಹೋಟೆಲ್ನಲ್ಲಿ 312 ಕೊಠಡಿಗಳಿವೆ. 64 ಸ್ಯೂಟ್ಸ್ ಮತ್ತು 14 ಮೀಟಿಂಗ್ ರೂಮ್ಗಳಿವೆಯಂತೆ. ಅಚ್ಚರಿ ಎಂದರೆ ಈ ಹೋಟೆಲ್ನ ಒಂದು ದಿನದ ಬಾಡಿಗೆ ಭಾರತ ಪ್ರಕಾರ ಬರೋಬ್ಬರಿ 25,000 ರೂ.
7 / 10
ಮುಂಬೈ ಇಂಡಿಯನ್ಸ್ ಆಟಗಾರರಿರುವ ಸ್ಯಾಂಟ್ ರೆಜಿಸ್ ಸಾದಿಯತ್ ರೆಸಾರ್ಟ್ನಲ್ಲಿ ಸ್ಪಾ, ದೊಡ್ಡದಾದ ಇಂಡೋರ್ ಲ್ಯಾಪ್ ಪೂಲ್, ಅಥ್ಲೆಟಿಕ್ ಕ್ಲಬ್, ಔಟ್ಡೋರ್ ಪೂಲ್, ಪ್ರೈವೇಟ್ ಬೀಚ್ ಸೇರಿದಂತೆ ನಾನಾ ಸೌಲಭ್ಯವಿದೆ.
8 / 10
ಮುಂಬೈ ಇಂಡಿಯನ್ಸ್ ತಂಡದ ಆಟಗಾರರು ತಂಗಿರುವ ಹೋಟೆಲ್.
9 / 10
ಇಂಗ್ಲೆಂಡ್ನಿಂದ ಯುಎಇಗೆ ಬಂದಿಳಿದ ಟೀಮ್ ಇಂಡಿಯಾ ಆಟಗಾರರು 6 ದಿನಗಳ ಕಾಲ ಕ್ವಾರಂಟೈನ್ನಲ್ಲಿದ್ದರು. ಅದರಂತೆ ರೋಹಿತ್ ಶರ್ಮಾ ಸೆಪ್ಟೆಂಬರ್ 18 ರಂದು ಕ್ವಾರಂಟೈನ್ ಮುಗಿಸಿ ಹೊರಬಂದಿದ್ದರು. ಇತ್ತ 10 ದಿನಗಳಿಗೂ ಹೆಚ್ಚಿನ ದಿನ ಮೈದಾನದಿಂದ ಹೊರಗುಳಿದಿದ್ದ ಕಾರಣ ರೋಹಿತ್ ಶರ್ಮಾ ಸಂಪೂರ್ಣ ಅಭ್ಯಾಸ ಆರಂಭಿಸಿ ಕಣಕ್ಕಿಳಿಯಲು ಬಯಸಿದ್ದಾರೆ.
10 / 10
ಇನ್ನೂ ಐಪಿಎಲ್ ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಗಸ್ಟ್ 13ರಂದು ಐಪಿಎಲ್ಗಾಗಿ ಯುಎಇಗೆ ತೆರಳಿದೆ. ಯುಎಇಗೆ ತೆರಳುವುದಕ್ಕೂ ಮುನ್ನ ಎಲ್ಲಾ 8 ತಂಡಗಳ ಆಟಗಾರರು ಕೋವಿಡ್-19 ವ್ಯಾಕ್ಸಿನೇಶನ್ ಮುಗಿಸಿರಬೇಕು ಎಂದು ಬಿಸಿಸಿಐ ಖಡಕ್ ಆಗಿ ಸೂಚಿಸಿದೆ.