Updated on: Sep 12, 2021 | 9:45 PM
ಐಪಿಎಲ್ನ ದ್ವಿತಿಯಾರ್ಧಕ್ಕೆ ಭಾನುವಾರ ಚಾಲನೆ ದೊರೆಯಲಿದೆ. ಟೂರ್ನಿಯ ಉಳಿದ 31 ಪಂದ್ಯಗಳನ್ನು ಯುಎಇನ ಶಾರ್ಜಾ, ಅಬುಧಾಬಿ ಹಾಗೂ ದುಬೈ ಕ್ರಿಕೆಟ್ ಮೈದಾನದಲ್ಲಿ ಆಡಲಾಗುತ್ತದೆ. ಆದರೆ ದ್ವಿತಿಯಾರ್ಧ ಆರಂಭಕ್ಕೂ ಮುನ್ನವೇ ಈ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ತಂಡವನ್ನು ಹೆಸರಿಸಿದ್ದಾರೆ ಟೀಮ್ ಇಂಡಿಯಾ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್.
ಶಿಖರ್ ಧವನ್: ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಆರಂಭಿಕನೆಂದರೆ ಶಿಖರ್ ಧವನ್. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್ರೈರ್ಸರ್ ಹೈದರಾಬಾದ್ ಪರ ಆಡಿರುವ ಧವನ್ ಆರಂಭಿಕರಾಗಿ ಒಟ್ಟು 5170 ರನ್ ಗಳಿಸಿದ್ದಾರೆ. ಇದರಲ್ಲಿ ಎರಡೂ ಶತಕಗಳೂ ಕೂಡ ಒಳಗೊಂಡಿವೆ.
ಡೇವಿಡ್ ವಾರ್ನರ್: ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅತ್ಯಂತ ಯಶಸ್ವಿ ಐಪಿಎಲ್ ಓಪನರ್ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಡೆಲ್ಲಿ ಡೇರ್ ಡೆವಿಲ್ಸ್ (ಈಗ ಡೆಲ್ಲಿ ಕ್ಯಾಪಿಟಲ್ಸ್) ಹಾಗೂ ಸನ್ರೈಸರ್ಸ್ ಹೈದರಾಬಾದ್ ಪರ ಆಡಿರುವ ವಾರ್ನರ್ ಆರಂಭಿಕರಾಗಿ 4792 ರನ್ ಕಲೆಹಾಕಿದ್ದಾರೆ.
ಕ್ರಿಸ್ ಗೇಲ್: ವೆಸ್ಟ್ ಇಂಡೀಸ್ ದಂತಕಥೆ ಕ್ರಿಸ್ ಗೇಲ್ ಐಪಿಎಲ್ನ ಡೇಂಜರಸ್ ಬ್ಯಾಟ್ಸ್ಮನ್ ಪ್ರಸ್ತುತ ಪಂಜಾಬ್ ಕಿಂಗ್ಸ್ ಪರ 3ನೇ ಕ್ರಮಾಂಕದಲ್ಲಿ ಆಡುತ್ತಿದ್ದಾರೆ. ಇದಕ್ಕೂ ಮುನ್ನ ಗೇಲ್ ಕೆಕೆಆರ್, ಆರ್ಸಿಬಿ ಹಾಗೂ ಪಂಜಾಬ್ ಪರ ಇನಿಂಗ್ಸ್ ಆರಂಭಿಸಿದ್ದರು. ಈ ವೇಳೆ ಆರಂಭಿಕರಾಗಿ 6 ಶತಕಗಳೊಂದಿಗೆ ಒಟ್ಟು 4480 ರನ್ ಗಳಿಸಿದ್ದಾರೆ. ಈ ಮೂಲಕ ಐಪಿಎಲ್ನ ಬೆಸ್ಟ್ ಓಪನರ್ಗಳ ಪಟ್ಟಿಯಲ್ಲಿ 3ನೇ ಸ್ಥಾನ ಅಲಂಕರಿಸಿದ್ದಾರೆ.
ಗೌತಮ್ ಗಂಭೀರ್: ಕ್ರಿಕೆಟ್ ವೃತ್ತಿಜೀವನಕ್ಕೆ ಗುಡ್ ಬೈ ಹೇಳಿರುವ ಟೀಮ್ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಕೂಡ ಬೆಸ್ಟ್ ಓಪನರ್ ಪಟ್ಟಿಯಲ್ಲಿದ್ದಾರೆ. ಡೆಲ್ಲಿ, ಕೆಕೆಆರ್ ಪರ ಆರಂಭಿಕರಾಗಿ ಆಡಿರುವ ಗೌತಮ್ ಗಂಭೀರ್ 3597 ರನ್ಗಳಿಸಿ ಅತ್ಯಂತ ಯಶಸ್ವಿ ಆರಂಭಿಕರ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.
ಅಜಿಂಕ್ಯ ರಹಾನೆ: ಬೆಸ್ಟ್ ಆರಂಭಿಕರ ಪಟ್ಟಿಯಲ್ಲಿ ರಹಾನೆ ಹೆಸರು ಅಚ್ಚರಿ ಮೂಡಿಸಬಹುದು. ಆದರೆ ರಾಜಸ್ಥಾನ್ ರಾಯಲ್ಸ್ , ಪುಣೆ ಸೂಪರ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿರುವ ಅಜಿಂಕ್ಯ ರಹಾನೆ ಆರಂಭಿಕರಾಗಿ ಯಶಸ್ವಿಯಾಗಿದ್ದರು. ಇದಕ್ಕೆ ಸಾಕ್ಷಿಯಾಗಿಯೇ ಅವರು ಓಪನರ್ ಆಗಿ 3462 ರನ್ ಗಳಿಸಿರುವುದು. ಈ ವೇಳೆ ರಹಾನೆ ಎರಡು ಶತಕಗಳನ್ನು ಕೂಡ ಬಾರಿಸಿದ್ದರು ಎಂಬುದು ವಿಶೇಷ.