
ಐಪಿಎಲ್ 2022 ರಾಜಸ್ಥಾನ ರಾಯಲ್ಸ್‌ಗೆ ಸ್ಮರಣೀಯ ಋತುವಾಗಿದೆ. 14 ವರ್ಷಗಳ ಬಳಿಕ ತಂಡ ಫೈನಲ್‌ಗೆ ತಲುಪಿದೆ. ರಾಜಸ್ಥಾನದ ಈ ಯಶಸ್ಸಿನ ಹಿಂದೆ ಓಪನರ್ ಜೋಸ್ ಬಟ್ಲರ್ ದೊಡ್ಡ ಕೊಡುಗೆ ಇದೆ. ಇಂಗ್ಲೆಂಡಿನ ಭರ್ಜರಿ ಓಪನರ್ ಈ ಋತುವಿನಲ್ಲಿ ತನ್ನ ಬ್ಯಾಟ್‌ನಿಂದ ಬೌಲರ್‌ಗಳನ್ನು ಹೊಡೆದುರುಳಿಸಿದ್ದಾರೆ. ಜೊತೆಗೆ ಈಗ ಕೇವಲ ಇಬ್ಬರೂ ದೈತ್ಯರು ಮಾಡಿರುವ ದಾಖಲೆಯನ್ನು ಸರಿಗಟ್ಟುವ ಯತ್ನದಲ್ಲಿದ್ದಾರೆ.

ಈ ಋತುವಿನಲ್ಲಿ ಈಗಾಗಲೇ 800 ಕ್ಕೂ ಹೆಚ್ಚು ರನ್ ಗಳಿಸುವ ಮೂಲಕ ಅದ್ಭುತಗಳನ್ನು ಮಾಡಿರುವ ಬಟ್ಲರ್, ಮೇ 29 ರ ಭಾನುವಾರದಂದು ಗುಜರಾತ್ ಟೈಟಾನ್ಸ್ ವಿರುದ್ಧದ ಫೈನಲ್‌ನಲ್ಲಿ ತಮ್ಮ ಅರ್ಧಶತಕ ಸಿಕ್ಸರ್‌ಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಲಿದ್ದಾರೆ.



Published On - 3:53 pm, Sun, 29 May 22