
ಇಂಡಿಯನ್ ಪ್ರೀಮಿಯರ್ ಲೀಗ್ 2022 ರ ಸೀಸನ್ ಇಂದಿನಿಂದ ಪ್ರಾರಂಭವಾಗಲಿದ್ದು, ಪ್ರತಿ ಸೀಸನ್‌ನಂತೆ ಈ ಬಾರಿಯೂ ಬೌಂಡರಿ ಮತ್ತು ಸಿಕ್ಸರ್‌ಗಳ ಭಾರೀ ಮಳೆಯಾಗಲಿದೆ. ಇದರೊಂದಿಗೆ, ಅನೇಕ ಅತ್ಯುತ್ತಮ ಮತ್ತು ಸಂವೇದನಾಶೀಲ ಓವರ್‌ಗಳು ಸಹ ಕಂಡುಬರುತ್ತವೆ, ಅಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ರನ್ ಗಳಿಸಲು ಕಷ್ಟವಾಗುತ್ತದೆ. ಇವುಗಳ ಹೊರತಾಗಿ, ಪಂದ್ಯದ ಫಲಿತಾಂಶವನ್ನು ನಿರ್ಧರಿಸುವ ಮತ್ತೊಂದು ಪ್ರಮುಖ ಅಂಶವಿದೆ. ಅದ್ಯಾವುದೆಂದರೆ ಕ್ಯಾಚ್. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಕ್ಯಾಚ್ ಹಿಡಿದವರ ಬಗ್ಗೆ ಮಾತನಾಡುವುದಾದರೆ, ಒಬ್ಬ ಆಟಗಾರ ಮಾತ್ರ 100 ಕ್ಕೂ ಹೆಚ್ಚು ಕ್ಯಾಚ್‌ಗಳನ್ನು ತೆಗೆದುಕೊಂಡಿದ್ದಾರೆ, ಆದರೆ ಕೆಲವರು ನರ್ವಸ್ 90 ಆಸುಪಾಸಿನಲ್ಲಿದ್ದಾರೆ.

ಸುರೇಶ್ ರೈನಾ ಈ ಬಾರಿ ಐಪಿಎಲ್‌ನ ಭಾಗವಾಗಿರುವುದಿಲ್ಲ, ಆದರೆ ಅವರ ಒಂದು ದಾಖಲೆಯು ಇನ್ನೂ ಹಾಗೆ ಉಳಿದಿದೆ. ಆ ದಾಖಲೆ ಯಾವುದೆಂದರೆ, ಐಪಿಎಲ್‌ನಲ್ಲಿ ಅತಿ ಹೆಚ್ಚು ಕ್ಯಾಚ್ ಹಿಡಿದವರದ್ದಾಗಿದೆ. ಮಾಜಿ ಚೆನ್ನೈ ಸೂಪರ್ ಕಿಂಗ್ಸ್ ತಾರೆ ತಮ್ಮ ಅತ್ಯುತ್ತಮ ಫೀಲ್ಡಿಂಗ್‌ನಿಂದ 204 ಇನ್ನಿಂಗ್ಸ್‌ಗಳಲ್ಲಿ 109 ಕ್ಯಾಚ್‌ಗಳನ್ನು ಹಿಡಿದ್ದಾರೆ. 100ಕ್ಕೂ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಏಕೈಕ ಫೀಲ್ಡರ್ ರೈನಾ ಮಾತ್ರ.



Published On - 3:04 pm, Sat, 26 March 22