IPL 2023: ಇಂದಿನ ಫೈನಲ್ ಪಂದ್ಯದಲ್ಲಿ ಸೃಷ್ಟಿಯಾಗಲ್ಲಿರುವ ಪ್ರಮುಖ 7 ದಾಖಲೆಗಳಿವು
IPL 2023: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು 16ನೇ ಆವೃತ್ತಿಯ ಐಪಿಎಲ್ ಪ್ರಶಸ್ತಿಗಾಗಿ ಇಂದು ಸೆಣಸಾಡುತ್ತಿವೆ. ಚೆನ್ನೈ 5ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದು, ಗುಜರಾತ್ ತಂಡ ಸತತ ಎರಡನೇ ಬಾರಿ ಚಾಂಪಿಯನ್ ಆಗುವ ಉದ್ದೇಶದಿಂದ ಮೈದಾನಕ್ಕಿಳಿಯಲಿದೆ.
1 / 8
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು 16ನೇ ಆವೃತ್ತಿಯ ಐಪಿಎಲ್ ಪ್ರಶಸ್ತಿಗಾಗಿ ಇಂದು ಸೆಣಸಾಡುತ್ತಿವೆ. ಚೆನ್ನೈ 5ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದು, ಗುಜರಾತ್ ತಂಡ ಸತತ ಎರಡನೇ ಬಾರಿ ಚಾಂಪಿಯನ್ ಆಗುವ ಉದ್ದೇಶದಿಂದ ಮೈದಾನಕ್ಕಿಳಿಯಲಿದೆ. ಇದೆಲ್ಲದರ ನಡುವೆ ಈ ಪಂದ್ಯದಲ್ಲಿ ಹಲವು ಆಟಗಾರರು ತಮ್ಮದೇ ಆದ ದಾಖಲೆ ಸೃಷ್ಟಿಸುವ ತವಕದಲ್ಲಿದ್ದು, ಈ ಪಂದ್ಯದಲ್ಲಿ ದಾಖಲಾಗುವ ಪ್ರಮುಖ 7 ದಾಖಲೆಗಳ ವಿವರ ಇಲ್ಲಿದೆ.
2 / 8
ಇಂದಿನ ಫೈನಲ್‌ನಲ್ಲಿ ಮೈದಾನಕ್ಕಿಳಿದ ತಕ್ಷಣ ಚೆನ್ನೈ ನಾಯಕ ಧೋನಿ ಪ್ರಮುಖ ದಾಖಲೆಯೊಂದನ್ನು ನಿರ್ಮಿಸಲಿದ್ದಾರೆ. ಇಂದಿನ ಪಂದ್ಯ ಧೋನಿ ಅವರ 250ನೇ ಐಪಿಎಲ್ ಪಂದ್ಯವಾಗಿದ್ದು, ಟೂರ್ನಿಯಲ್ಲಿ ಇಷ್ಟು ಪಂದ್ಯಗಳನ್ನು ಆಡಿದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ. ಅಲ್ಲದೆ, 11 ಐಪಿಎಲ್ ಫೈನಲ್‌ಗಳನ್ನು ಆಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾಗಲಿದ್ದಾರೆ.
3 / 8
ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಟಿ20 ಕ್ರಿಕೆಟ್‌ನಲ್ಲಿ 150 ವಿಕೆಟ್ ಪೂರೈಸುವ ಸನಿಹದಲ್ಲಿದ್ದಾರೆ. ಈ ಅಂಕಿ ಅಂಶವನ್ನು ಮುಟ್ಟಲು ಅವರಿಗೆ ಎರಡು ವಿಕೆಟ್‌ಗಳ ಅಗತ್ಯವಿದೆ.
4 / 8
ಸ್ಟಾರ್ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ಗುಜರಾತ್ ಟೈಟಾನ್ಸ್ ಪರ 50 ಸಿಕ್ಸರ್‌ಗಳನ್ನು ಬಾರಿಸುವ ಹೊಸ್ತಿಲಲ್ಲಿದ್ದಾರೆ. ಅಲ್ಲದೆ ಒಂದು ಸೀಸನ್ನಲ್ಲಿ 900 ರನ್ ಗಳಿಸಿದ ಎರಡನೇ ಆಟಗಾರನೆನಿಸಿಕೊಳ್ಳಲು ಗಿಲ್ಗೆ (851) 49 ರನ್‌ಗಳ ಅಗತ್ಯವಿದೆ.
5 / 8
ಅನುಭವಿ ವೇಗಿ ಮೊಹಮ್ಮದ್ ಶಮಿ ಗುಜರಾತ್ ಪರ 50 ವಿಕೆಟ್ ಪೂರೈಸುವ ಸನಿಹದಲ್ಲಿದ್ದಾರೆ. ಇದಕ್ಕಾಗಿ ಅವರಿಗೆ ಕೇವಲ ಎರಡು ವಿಕೆಟ್‌ಗಳ ಅಗತ್ಯವಿದೆ.
6 / 8
ಸಿಎಸ್‌ಕೆ ಆಲ್‌ರೌಂಡರ್ ರವೀಂದ್ರ ಜಡೇಜಾ ಐಪಿಎಲ್‌ನಲ್ಲಿ 100 ಸಿಕ್ಸರ್‌ಗಳನ್ನು ಬಾರಿಸಲು ಎರಡು ಹೆಜ್ಜೆ ದೂರದಲ್ಲಿದ್ದಾರೆ. 225 ಪಂದ್ಯಗಳಲ್ಲಿ ಜಡೇಜಾ 98 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
7 / 8
ಇದು ಮೋಹಿತ್ ಶರ್ಮಾ ಅವರ 100ನೇ ಐಪಿಎಲ್ ಪಂದ್ಯವಾಗಿದ್ದು, ಈ ಪಂದ್ಯದಲ್ಲಿ ಅವರು ಮೂರು ವಿಕೆಟ್‌ಗಳನ್ನು ಕಬಳಿಸುವಲ್ಲಿ ಯಶಸ್ವಿಯಾದರೆ ಟಿ20 ಕ್ರಿಕೆಟ್‌ನಲ್ಲಿ 150 ವಿಕೆಟ್‌ಗಳನ್ನು ಪೂರೈಸಲಿದ್ದಾರೆ.
8 / 8
ಚೆನ್ನೈ ವೇಗಿ ದೀಪಕ್ ಚಹಾರ್‌ಗೆ ಟಿ20 ಕ್ರಿಕೆಟ್‌ನಲ್ಲಿ 150 ವಿಕೆಟ್‌ಗಳನ್ನು ಪೂರೈಸಲು ಕೇವಲ ಒಂದು ವಿಕೆಟ್ ಅಗತ್ಯವಿದೆ.