MS Dhoni: ಫೈನಲ್ ಪಂದ್ಯದಲ್ಲಿ ಕಣಕ್ಕಿಳಿದು ಹಲವು ದಾಖಲೆ ನಿರ್ಮಿಸಿದ ಎಂಎಸ್ ಧೋನಿ

| Updated By: ಝಾಹಿರ್ ಯೂಸುಫ್

Updated on: May 29, 2023 | 9:14 PM

IPL 2023 Final CSK vs GT: ಗುಜರಾತ್ ಟೈಟಾನ್ಸ್ ವಿರುದ್ಧದ ಈ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದಂತೆ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ಇತಿಹಾಸದಲ್ಲಿ ಯಾರು ಮಾಡದ ವಿಶೇಷ ಸಾಧನೆ ಬರೆದರು.

1 / 6
IPL 2023 Final CSK vs GT: ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಮಹೇಂದ್ರ ಸಿಂಗ್ ಧೋನಿ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

2 / 6
ಗುಜರಾತ್ ಟೈಟಾನ್ಸ್ ವಿರುದ್ಧದ ಈ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದಂತೆ ಐಪಿಎಲ್ ಇತಿಹಾಸದಲ್ಲಿ 250 ಪಂದ್ಯಗಳನ್ನಾಡಿದ ಮೊದಲ ಆಟಗಾರ ಎಂಬ ದಾಖಲೆಯನ್ನು ಬರೆದರು.

3 / 6
ಹಾಗೆಯೇ ಅತೀ ಹೆಚ್ಚು ಐಪಿಎಲ್ ಫೈನಲ್ ಆಡಿದ ಆಟಗಾರ ಎಂಬ ಹೆಗ್ಗಳಿಕೆಗೂ ಧೋನಿ ಪಾತ್ರರಾದರು. ಧೋನಿ ಸಿಎಸ್​ಕೆ ಪರ ಒಟ್ಟು 10 ಫೈನಲ್​ ಪಂದ್ಯಗಳನ್ನಾಡಿದ್ದಾರೆ. ಹಾಗೆಯೇ ರೈಸಿಂಗ್ ಪುಣೆ ಜೈಂಟ್ಸ್​ ಪರ 1 ಫೈನಲ್ ಪಂದ್ಯವಾಡಿದ್ದರು.

4 / 6
ಇನ್ನು ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಪ್ಲೇಆಫ್ಸ್ ಪಂದ್ಯಗಳನ್ನಾಡಿದ ದಾಖಲೆ ಕೂಡ ಧೋನಿ ಹೆಸರಿನಲ್ಲಿದೆ. ಎಂಎಸ್​ಡಿ ಒಟ್ಟು 28 ಪ್ಲೇಆಫ್ಸ್ ಪಂದ್ಯಗಳನ್ನಾಡಿದರೆ, 2ನೇ ಸ್ಥಾನದಲ್ಲಿರುವ ಸುರೇಶ್ ರೈನಾ 24 ಪ್ಲೇಆಫ್ಸ್ ಪಂದ್ಯಗಳನ್ನಾಡಿದ್ದಾರೆ.

5 / 6
ಇದಲ್ಲದೆ ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಬಾರಿ ಫೈನಲ್ ಆಡಿದ ಕ್ಯಾಪ್ಟನ್ ಎಂಬ ದಾಖಲೆ ಕೂಡ ಧೋನಿ ಪಾಲಾಗಿದೆ. ಎಂಎಸ್​ಡಿ ಒಟ್ಟು 10 ಬಾರಿ ಸಿಎಸ್​ಕೆ ತಂಡವನ್ನು ಫೈನಲ್ ಪಂದ್ಯದಲ್ಲಿ ಮುನ್ನಡೆಸಿದ್ದಾರೆ.

6 / 6
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್​ಕೆ ತಂಡವು ಮೊದಲು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್​ ಕಲೆಹಾಕಿದೆ.