IPL 2023: ಬರೋಬ್ಬರಿ 827 ರನ್ಸ್​: ಐಪಿಎಲ್​ನಲ್ಲಿ ಹೊಸ ಇತಿಹಾಸ ಸೃಷ್ಟಿ..!

| Updated By: ಝಾಹಿರ್ ಯೂಸುಫ್

Updated on: May 01, 2023 | 3:57 PM

IPL 2023 Kannada: 201 ರನ್​ಗಳ ಬೃಹತ್ ಟಾರ್ಗೆಟ್ ಪಡೆದ ಪಂಜಾಬ್ ಕಿಂಗ್ಸ್ ಬ್ಯಾಟ್ಸ್​ಮನ್​ಗಳು ಕೂಡ ಭರ್ಜರಿ ಪ್ರದರ್ಶನ ನೀಡಿದ್ದರು. ಪರಿಣಾಮ ಪಂದ್ಯವು ಅಂತಿಮ ಓವರ್​ನತ್ತ ಸಾಗಿತು.

1 / 10
IPL 2023: ಕಳೆದ 15 ಸೀಸನ್​ ಐಪಿಎಲ್​ನಲ್ಲಿ ಕಂಡರಿಯದ ಹಾಗೂ ಕೇಳರಿಯದ ವಿಶೇಷ ದಾಖಲೆಯೊಂದು ಭಾನುವಾರ ಸೃಷ್ಟಿಯಾಗಿದೆ. ಅದು ಅಂತಿಂಥ ದಾಖಲೆಯಲ್ಲ. ಬದಲಾಗಿ ಒಂದೇ ದಿನ 827 ರನ್​ಗಳ ಐತಿಹಾಸಿಕ ದಾಖಲೆ.

2 / 10
ಒಂದು ತಂಡವು 200 ಅಥವಾ ಅದಕ್ಕಿಂತ ಹೆಚ್ಚಿನ ರನ್​ಗಳಿಸಿದರೆ ಪಂದ್ಯವು ಏಕಮುಖದತ್ತ ಸಾಗುವುದು ಸಾಮಾನ್ಯ. ಆದರೆ ಐಪಿಎಲ್​ನಲ್ಲಿ ಭಾನುವಾರ ನಡೆದ 41ನೇ ಹಾಗೂ 42ನೇ ಪಂದ್ಯಗಳು ಇದಕ್ಕೆ ತದ್ವಿರುದ್ಧವಾಗಿತ್ತು. ಎರಡೂ ಪಂದ್ಯಗಳು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಯಿತು.

3 / 10
ಐಪಿಎಲ್​ನ 41ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಇಲ್ಲಿ ಟಾಸ್ ಗೆದ್ದ ಸಿಎಸ್​ಕೆ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಅದರಂತೆ ಡೆವೊನ್ ಕಾನ್ವೆ ಅವರ ಅಜೇಯ 92 ರನ್​ಗಳ ನೆರವಿನಿಂದ ಸಿಎಸ್​ಕೆ ತಂಡವು 4 ವಿಕೆಟ್ ನಷ್ಟಕ್ಕೆ 200 ರನ್ ಕಲೆಹಾಕಿತು.

4 / 10
201 ರನ್​ಗಳ ಬೃಹತ್ ಟಾರ್ಗೆಟ್ ಪಡೆದ ಪಂಜಾಬ್ ಕಿಂಗ್ಸ್ ಬ್ಯಾಟ್ಸ್​ಮನ್​ಗಳು ಕೂಡ ಭರ್ಜರಿ ಪ್ರದರ್ಶನ ನೀಡಿದ್ದರು. ಪರಿಣಾಮ ಪಂದ್ಯವು ಅಂತಿಮ ಓವರ್​ನತ್ತ ಸಾಗಿತು. ಕೊನೆಯ ಓವರ್​ನಲ್ಲಿ 9 ರನ್​ಗಳ ಟಾರ್ಗೆಟ್ ಪಡೆದ ಪಂಜಾಬ್ ಕಿಂಗ್ಸ್​ ಅತ್ಯುತ್ತಮ ಹೋರಾಟ ನಡೆಸಿದರು. ಪರಿಣಾಮ ಕೊನೆಯ ಎಸೆತಗಳಲ್ಲಿ 3 ರನ್​ಗಳ ಅವಶ್ಯಕತೆ, ಈ ಹಂತದಲ್ಲಿ ಪತಿರಾನ ಎಸೆತವನ್ನು ಲೆಗ್ ಸೈಡ್​ನತ್ತ ಬಾರಿಸಿ ಸಿಕಂದರ್ ರಾಝ 3 ರನ್ ಓಡಿದರು. ಇದರೊಂದಿಗೆ ಪಂಜಾಬ್ ಕಿಂಗ್ಸ್ 4 ವಿಕೆಟ್​ಗಳ ರೋಚಕ ಜಯ ಸಾಧಿಸಿತು.

5 / 10
ಅಂದರೆ ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಐಪಿಎಲ್​ನ 41ನೇ ಪಂದ್ಯದಲ್ಲಿ ಉಭಯ ತಂಡಗಳಿಂದ ಮೂಡಿಬಂದ ಒಟ್ಟು ಸ್ಕೋರ್ 401 ರನ್​ಗಳು.

6 / 10
ಇನ್ನು ಐಪಿಎಲ್​ನ 42ನೇ ಪಂದ್ಯದಲ್ಲೂ ಇಂತಹದ್ದೇ ಕುತೂಹಲಕಾರಿ ಪೈಪೋಟಿಗೆ ಮುಂಬೈನ ವಾಂಖೆಡೆ ಸ್ಟೇಡಿಯಂ ಸಾಕ್ಷಿಯಾಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡವು ಮೊದಲು ಬ್ಯಾಟಿಂಗ್ ಮಾಡಿತು.

7 / 10
ಆರ್​ಆರ್​ ಪರ ಕಣಕ್ಕಿಳಿದ ಯುವ ಆರಂಭಿಕ ದಾಂಡಿಗ ಯಶಸ್ವಿ ಜೈಸ್ವಾಲ್ ಕೇವಲ 53 ಎಸೆತಗಳಲ್ಲಿ ಶತಕ ಸಿಡಿಸಿದರು. ಅಲ್ಲದೆ 62 ಎಸೆತಗಳಲ್ಲಿ 124 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 7 ವಿಕೆಟ್ ನಷ್ಟಕ್ಕೆ 212 ಕ್ಕೆ ತಂದು ನಿಲ್ಲಿಸಿದರು.

8 / 10
213 ರನ್​ಗಳ ಕಠಿಣ ಗುರಿ ಪಡೆದ ಮುಂಬೈ ಇಂಡಿಯನ್ಸ್ ಬ್ಯಾಟ್ಸ್​ಮನ್​ಗಳು ಸಾಂಘಿಕ ಪ್ರದರ್ಶನ ನೀಡಿದರು. ಅದರಲ್ಲೂ ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ 29 ಎಸೆತಗಳಲ್ಲಿ 55 ರನ್​ ಬಾರಿಸಿ ಅಬ್ಬರಿಸಿದರು. ಪರಿಣಾಮ ಕೊನೆಯ ಓವರ್​ನಲ್ಲಿ 17 ರನ್​ಗಳ ಅವಶ್ಯಕತೆ. ಜೇಸನ್ ಹೋಲ್ಡರ್​ ಎಸೆದ ಅಂತಿಮ ಓವರ್​ನ ಮೊದಲ 3 ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸುವ ಮೂಲಕ  ಟಿಮ್ ಡೇವಿಡ್ ಮುಂಬೈ ಇಂಡಿಯನ್ಸ್ ತಂಡಕ್ಕೆ 6 ವಿಕೆಟ್​ಗಳ ಜಯ ತಂದುಕೊಟ್ಟರು.

9 / 10
ಇಲ್ಲಿ ಮುಂಬೈ ಇಂಡಿಯನ್ಸ್ (214) ಹಾಗೂ ರಾಜಸ್ಥಾನ್ ರಾಯಲ್ಸ್ (212) ನಡುವಣ ಪಂದ್ಯದಲ್ಲಿ ಮೂಡಿಬಂದ ಒಟ್ಟು ಸ್ಕೋರ್ 426. ಅತ್ತ ಸಿಎಸ್​ಕೆ (200) ಹಾಗೂ ಪಂಜಾಬ್ ಕಿಂಗ್ಸ್ (201) ಕಲೆಹಾಕಿದ್ದು 401 ರನ್​ಗಳು. ನಾಲ್ಕು ತಂಡಗಳ ಒಟ್ಟಾರೆ ಸ್ಕೋರ್ 827 ರನ್​ಗಳು.

10 / 10
ಇದು ಐಪಿಎಲ್​ ಇತಿಹಾಸದಲ್ಲೇ ಒಂದು ದಿನದಲ್ಲಿ ಮೂಡಿಬಂದ ಅತ್ಯಧಿಕ ಸ್ಕೋರ್ ಆಗಿದೆ. ಅಂದರೆ ಕಳೆದ 15 ಸೀಸನ್​ ಐಪಿಎಲ್​ನಲ್ಲಿ ಒಂದೇ ದಿನ ನಾಲ್ಕು ತಂಡಗಳು 200 ರನ್​ ಕಲೆಹಾಕಿರಲಿಲ್ಲ. ಇದೀಗ ಮುಂಬೈ ಇಂಡಿಯನ್ಸ್, ರಾಜಸ್ಥಾನ್ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ಒಟ್ಟು 827 ರನ್​ಗಳಿಸಿ ಐಪಿಎಲ್​ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.