IPL 2023: ಶುರುವಾಯಿತು ಐಪಿಎಲ್ ಫೀವರ್: ಮಿಲಿಯನ್ ಡಾಲರ್ ಟೂರ್ನಿ ಆರಂಭಕ್ಕೆ ಒಂದೇ ದಿನ ಬಾಕಿ

|

Updated on: Mar 30, 2023 | 8:12 AM

ಐಪಿಎಲ್ 2023 ರಲ್ಲಿ ಮಾರ್ಚ್ 31 ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ಮತ್ತು ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ (GT vs CSK) ಮುಖಾಮುಖಿ ಅಗಲಿದೆ.

1 / 7
ಭಾರತದ ದೇಶೀಯ ಟಿ20 ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿರುವ ಬಹುನಿರೀಕ್ಷಿಯ ಐಪಿಎಲ್ 2023ಕ್ಕೆ ಶುಕ್ರವಾರ (ಮಾ. 31) ಚಾಲನೆ ಸಿಗಲಿದೆ. ಸುಮಾರು ಎರಡು ತಿಂಗಳುಗಳ ಕಾಲ ಈ ಮಿಲಿಯನ್ ಡಾಲರ್ ಟೂರ್ನಿ ನಡೆಯಲಿದ್ದು ಒಂದು ಟ್ರೋಫಿಗಾಗಿ 10 ತಂಡಗಳು ಸೆಣೆಸಾಟ ನಡೆಸಲಿದೆ.

2 / 7
ಮಾರ್ಚ್ 31 ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ಮತ್ತು ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ (GT vs CSK) ಮುಖಾಮುಖಿ ಅಗಲಿದೆ. ಧೋನಿಗೆ ಇದು ಕೊನೆಯ ಐಪಿಎಲ್ ಆಗಿರುವುದರಿಂದ ಟೂರ್ನಿ ಮತ್ತಷ್ಟು ರೋಚಕತೆ ಸೃಷ್ಟಿಸಿದೆ.

3 / 7
ವಿಶೇಷವಾಗಿ ಈ ಬಾರಿ ಐಪಿಎಲ್ ಉದ್ಘಾಟನಾ ಸಮಾರಂಭ ಆಯೋಜಿಸಲಾಗುತ್ತಿದೆ. ಬರೋಬ್ಬರಿ 4 ವರ್ಷಗಳ ಬಳಿಕ ಓಪನಿಂಗ್ ಸೆಮನಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇದಕ್ಕೆ ಸಕಲ ಸಿದ್ಧತೆ ನಡೆಸುತ್ತಿದೆ. ಕಳೆದ ಮೂರು ವರ್ಷಗಳಿಂದ ಕೋವಿಡ್ ನಿಯಮ ಇದ್ದ ಕಾರಣ ಓಪನಿಂಗ್ ಸೆರಮನಿ ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಗಿರಲಿಲ್ಲ.

4 / 7
ಮಾಧ್ಯಮ ವರದಿಗಳ ಪ್ರಕಾರ, ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ರಶ್ಮಿಕಾ ಮಂದಣ್ಣ ಹೆಜ್ಜೆ ಹಾಕಲಿದ್ದಾರೆ. ರಶ್ಮಿಕಾ ಜೊತೆಗೆ ಬಾಲಿವುಡ್ ಹಿರಿಯ ನಟಿ ಕತ್ರಿನಾ ಕೈಫ್, ತಮನ್ನಾ ಭಾಟಿಯ ಕೂಡ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಬಾಲಿವುಡ್ ನಟ ಟೈಗರ್ ಶ್ರಾಫ್, ಗಾಯಕ ಅರಿಜಿತ್ ಸಿಂಗ್ ಪ್ರದರ್ಶನ ನೀಡಲಿದ್ದಾರೆ ಎಂದು ವರದಿಯಾಗಿದೆ.

5 / 7
ಐಪಿಎಲ್ ಮಂಡಳಿ ಕೆಲವು ನೂತನ ನಿಯಮಗಳನ್ನು ಈ ಬಾರಿ ಅಳವಡಿಸಿಕೊಳ್ಳಲು ಮುಂದಾಗಿದೆ. ಟಾಸ್ ನಂತರವೂ ಕ್ಯಾಪ್ಟನ್​ಗಳು ತಮ್ಮ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಬದಲಾವಣೆ ಮಾಡಬಹುದು. ಅಂತೆಯೆ ಐಪಿಎಲ್​ನಲ್ಲಿ ಬೌಲಿಂಗ್​ ಮಾಡುವ ವೇಳೆ ವಿಕೆಟ್ ಕೀಪರ್ ಅಥವಾ ಫೀಲ್ಡರ್​ ಸ್ಥಾನ ಪಲ್ಲಟ ಮಾಡಿದ್ದು ಕಂಡು ಬಂದರೆ ಅದನ್ನು ಡೆಡ್ ಬಾಲ್ ಎಂದು ಪರಿಗಣಿಸುವುದರ ಜೊತೆಗೆ ಐದು ರನ್​ಗಳ ಪೆನಾಲ್ಟಿ ಕೂಡ ಹಾಕಲಾಗುತ್ತದೆ.

6 / 7
ಇನ್ನು ನಿಗದಿತ ಸಮಯಕ್ಕೆ ಓವರ್​ ಮುಗಿಸದೆ ಹೊದಲ್ಲಿ ಕೇವಲ 4 ಫೀಲ್ಡರ್ ಮಾತ್ರ 30 ಯಾರ್ಡ್​ ಸರ್ಕಲ್ ಹೊರಗೆ ಫೀಲ್ಡಿಂಗ್ ಮಾಡಬೇಕಾಗುತ್ತದೆ. ಇನ್ನು ನೂತನ ಡಿಆರ್​ಎಸ್​ ನಿಯಮವನ್ನು ಜಾರಿಗೆ ತರಲಾಗಿದೆ. ಇದರಲ್ಲಿ ಈಗ ವೈಡ್‌ ಮತ್ತು ನೋ ಬಾಲ್‌ ನಿರ್ಧಾರದ ವಿರುದ್ಧವೂ ಡಿಆರ್​ಎಸ್ ಬಳಸಬಹುದಾಗಿದೆ.

7 / 7
ಐಪಿಎಲ್ 2023 ರಿಲಯನ್ಸ್ ಜಿಯೋದ ಜಿಯೋ ಸಿನಿಮಾ ಆ್ಯಪ್​ನಲ್ಲಿ ನೇರಪ್ರಸಾರ ಕಾಣಲಿದೆ. ಇಲ್ಲಿ ವಿಶೇಷ ಎಂದರೆ ಜಿಯೋ ಬಳಕೆದಾರರು ಉಚಿತವಾಗಿ ವೀಕ್ಷಿಸಬಹುದು. ಇದರ ಜೊತೆಗೆ ಐಪಿಎಲ್​ನ ಎಲ್ಲ ಪಂದ್ಯಗಳು 4K ರೆಸಲ್ಯೂಶನ್ (UltraHD) ನಲ್ಲಿ ಲೈವ್ ಸ್ಟ್ರೀಮ್ ಆಗಲಿದೆ.

Published On - 8:12 am, Thu, 30 March 23