IPL 2023: ಈ ಬಾರಿಯ ಐಪಿಎಲ್ನಿಂದ 5 ಆಟಗಾರರು ಔಟ್..!
TV9 Web | Updated By: ಝಾಹಿರ್ ಯೂಸುಫ್
Updated on:
Dec 03, 2022 | 9:24 PM
IPL 2023 Auction Kannada: ಭಾರತದ 604 ಆಟಗಾರರು ಹಾಗೂ 88 ವಿದೇಶಿ ಆಟಗಾರರು ಚೊಚ್ಚಲ ಐಪಿಎಲ್ ಅವಕಾಶ ಹೆಸರು ನೀಡಿದ್ದಾರೆ. ಆದರೆ ಕಳೆದ ಸೀಸನ್ನಲ್ಲಿ ಐಪಿಎಲ್ ಆಡಿದ್ದ ಐವರು ಆಟಗಾರರ ಹೆಸರು ಈ ಪಟ್ಟಿಯಲ್ಲಿ ಇಲ್ಲ ಎಂಬುದು ವಿಶೇಷ.
1 / 9
ಐಪಿಎಲ್ ಸೀಸನ್ 16 ಮಿನಿ ಹರಾಜಿಗಾಗಿ ವೇದಿಕೆ ಸಿದ್ಧವಾಗಿದೆ. ಡಿಸೆಂಬರ್ 23 ರಂದು ಕೊಚ್ಚಿನ್ನಲ್ಲಿ ಮುಂದಿನ ಸೀಸನ್ ಐಪಿಎಲ್ಗಾಗಿ ಭರ್ಜರಿ ಬಿಡ್ಡಿಂಗ್ ನಡೆಯಲಿದೆ. ಈ ಹರಾಜಿಗಾಗಿ ಈಗಾಗಲೇ 991 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ.
2 / 9
ಈ ಹರಾಜು ಪಟ್ಟಿಯಲ್ಲಿ 714 ಭಾರತೀಯ ಆಟಗಾರರಿದ್ದರೆ, 277 ವಿದೇಶಿ ಆಟಗಾರರಿದ್ದಾರೆ. ಇವರಲ್ಲಿ 19 ಟೀಮ್ ಇಂಡಿಯಾ ಆಟಗಾರರು, 166 ವಿದೇಶಿ ರಾಷ್ಟ್ರೀಯ ಆಟಗಾರರು ಕಾಣಿಸಿಕೊಂಡಿದ್ದಾರೆ. ಹಾಗೆಯೇ ಅಸೋಸಿಯೇಟ್ ದೇಶದ 20 ಆಟಗಾರರು ಹೆಸರು ನೀಡಿದ್ದಾರೆ.
3 / 9
ಅದೇ ರೀತಿ ಈ ಪಟ್ಟಿಯಲ್ಲಿ ರಾಷ್ಟ್ರೀಯ ತಂಡದ ಪರ ಆಡದ, ಐಪಿಎಲ್ನಲ್ಲಿ ಆಡಿದ 91 ಭಾರತೀಯ ಹಾಗೂ 3 ವಿದೇಶಿ ಆಟಗಾರರ ಹೆಸರು ಕಾಣಿಸಿಕೊಂಡಿದೆ. ಹಾಗೆಯೇ ಭಾರತದ 604 ಆಟಗಾರರು ಹಾಗೂ 88 ವಿದೇಶಿ ಆಟಗಾರರು ಚೊಚ್ಚಲ ಐಪಿಎಲ್ ಅವಕಾಶ ಹೆಸರು ನೀಡಿದ್ದಾರೆ. ಆದರೆ ಕಳೆದ ಸೀಸನ್ನಲ್ಲಿ ಐಪಿಎಲ್ ಆಡಿದ್ದ ಐವರು ಆಟಗಾರರ ಹೆಸರು ಈ ಪಟ್ಟಿಯಲ್ಲಿ ಇಲ್ಲ ಎಂಬುದು ವಿಶೇಷ.
4 / 9
ಅಂದರೆ ಕಳೆದ ಸೀಸನ್ನಲ್ಲಿ ಐಪಿಎಲ್ನಲ್ಲಿ ಅವಕಾಶ ಪಡೆದು, ಈ ಬಾರಿ ಆ ತಂಡಗಳಿಂದ ಬಿಡುಗಡೆಯಾದ ಐವರು ಆಟಗಾರರು ಈ ಬಾರಿ ಮಿನಿ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಅವರೆಂದರೆ....
5 / 9
1- ಕೀರನ್ ಪೊಲಾರ್ಡ್: ಐಪಿಎಲ್ 2022 ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಪೊಲಾರ್ಡ್ ಅವರನ್ನು ಈ ಬಾರಿ ರಿಲೀಸ್ ಮಾಡಿತ್ತು. ಇದರ ಬೆನ್ನಲ್ಲೇ ವೆಸ್ಟ್ ಇಂಡೀಸ್ ಆಟಗಾರ ಐಪಿಎಲ್ಗೆ ವಿದಾಯ ಹೇಳಿದ್ದರು. ಹೀಗಾಗಿ ಈ ಬಾರಿಯ ಮಿನಿ ಹರಾಜಿಗೆ ಹೆಸರು ನೀಡಿಲ್ಲ. ಇದಾಗ್ಯೂ ಅವರು ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
6 / 9
2- ಡ್ವೇನ್ ಬ್ರಾವೊ: ಚೆನ್ನೈ ಸೂಪರ್ ಕಿಂಗ್ಸ್ ತಂಡವು ತಮ್ಮ ಸ್ಟಾರ್ ಆಲ್ರೌಂಡರ್ ಡ್ವೇನ್ ಬ್ರಾವೊ ಅವರನ್ನು ಈ ಬಾರಿ ಬಿಡುಗಡೆ ಮಾಡಿತ್ತು. ಆದರೆ ಈ ಬಾರಿ ಬ್ರಾವೊ ಕೂಡ ಮಿನಿ ಹರಾಜಿಗೆ ಹೆಸರು ನೀಡಿಲ್ಲ. ಬದಲಾಗಿ ಸಿಎಸ್ಕೆ ತಂಡದ ಬೌಲಿಂಗ್ ಕೋಚ್ ಆಗಿ ಕಾಣಿಸಿಕೊಳ್ಳಲು ಒಪ್ಪಂದ ಮಾಡಿಕೊಂಡಿದ್ದಾರೆ.
7 / 9
3- ಸ್ಯಾಮ್ ಬಿಲ್ಲಿಂಗ್: ಇಂಗ್ಲೆಂಡ್ ತಂಡದ ಆಟಗಾರ ಸ್ಯಾಮ್ ಬಿಲ್ಲಿಂಗ್ ಕಳೆದ ಸೀಸನ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿದ್ದರು. ಆದರೆ ಈ ಬಾರಿ ಕೆಕೆಆರ್ ತಂಡವು ಬಿಲ್ಲಿಂಗ್ಸ್ ಅವರನ್ನು ರಿಲೀಸ್ ಮಾಡಿದೆ. ಇದಾಗ್ಯೂ ಅವರು ಮಿನಿ ಹರಾಜಿಗೆ ಹೆಸರು ನೀಡಿಲ್ಲ ಎಂಬುದು ವಿಶೇಷ.
8 / 9
4- ಪ್ಯಾಟ್ ಕಮಿನ್ಸ್: ಐಪಿಎಲ್ ಸೀಸನ್ 15 ನಲ್ಲಿ ಕೆಕೆಆರ್ ತಂಡದಲ್ಲಿ ಕಾಣಿಸಿಕೊಂಡಿದ್ದ ಪ್ಯಾಟ್ ಕಮಿನ್ಸ್ ಈ ಬಾರಿಯ ಐಪಿಎಲ್ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಹೀಗಾಗಿ ಈ ಬಾರಿಯ ಹರಾಜಿನಲ್ಲಿ ಹೆಸರು ನೋಂದಾಯಿಸಿಕೊಂಡಿಲ್ಲ.
9 / 9
5- ಅಲೆಕ್ಸ್ ಹೇಲ್ಸ್: ಐಪಿಎಲ್ 2022 ರಲ್ಲಿ ಕೆಕೆಆರ್ ತಂಡಕ್ಕೆ ಆಯ್ಕೆಯಾಗಿದ್ದ ಅಲೆಕ್ಸ್ ಹೇಲ್ಸ್ ಅವರು ಕಾರಣಾಂತರಗಳಿಂದ ಟೂರ್ನಿಯನ್ನು ತಪ್ಪಿಸಿಕೊಂಡಿದ್ದರು. ಹೀಗಾಗಿ ಈ ಬಾರಿ ಕೆಕೆಆರ್ ತಂಡವು ಅವರನ್ನು ರಿಲೀಸ್ ಮಾಡಿತ್ತು. ಇದಾಗ್ಯೂ ಹೇಲ್ಸ್ ಈ ಬಾರಿ ಮಿನಿ ಹರಾಜಿಗಾಗಿ ಹೆಸರು ನೀಡಿಲ್ಲ ಎಂಬುದು ವಿಶೇಷ.