IPL 2023: ಕೆಎಲ್ ರಾಹುಲ್ ಅಬ್ಬರಕ್ಕೆ ಕ್ರಿಸ್ ಗೇಲ್ ದಾಖಲೆ ಉಡೀಸ್

| Updated By: ಝಾಹಿರ್ ಯೂಸುಫ್

Updated on: Apr 16, 2023 | 6:23 PM

IPL 2023 Kannada: ಐಪಿಎಲ್​ನಲ್ಲಿ ಅತೀ ವೇಗವಾಗಿ 4000 ರನ್​ ಕಲೆಹಾಕಿದ ಬ್ಯಾಟರ್​ ಎನಿಸಿಕೊಂಡಿದ್ದಾರೆ. ಇನ್ನು ಐಪಿಎಲ್​ನಲ್ಲಿ ವೇಗವಾಗಿ 4 ಸಾವಿರ ರನ್​ ಪೂರೈಸಿದ ಟಾಪ್-5 ಬ್ಯಾಟರ್​ಗಳ ಪಟ್ಟಿ ಈ ಕೆಳಗಿನಂತಿದೆ...

1 / 10
IPL 2023: ಲಕ್ನೋದಲ್ಲಿ ನಡೆದ ಐಪಿಎಲ್​ನ 21ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್​ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಬಾರಿಸುವ ಮೂಲಕ ಕೆಎಲ್ ರಾಹುಲ್ ಐಪಿಎಲ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿರುವುದು ವಿಶೇಷ.

2 / 10
ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಲಕ್ನೋ ಸೂಪರ್ ಜೈಂಟ್ಸ್ ಪರ ಕೆಎಲ್ ರಾಹುಲ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಮಾಡಿದ ರಾಹುಲ್ ಆ ಬಳಿ ಬಿರುಸಿನ ಆಟಕ್ಕೆ ಒತ್ತು ನೀಡಿದರು.

3 / 10
ಪರಿಣಾಮ 56 ಎಸೆತಗಳಲ್ಲಿ 1 ಭರ್ಜರಿ ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ ಕೆಎಲ್ ರಾಹುಲ್ 74 ರನ್​ ಬಾರಿಸಿದರು. ಇದರೊಂದಿಗೆ ಐಪಿಎಲ್​ನಲ್ಲಿ ವೇಗವಾಗಿ 4 ಸಾವಿರ ರನ್​ ಪೂರೈಸಿದ ವಿಶೇಷ ದಾಖಲೆ ಬರೆದರು. ಅದು ಕೂಡ ಕ್ರಿಸ್ ಗೇಲ್ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

4 / 10
ಅಂದರೆ ಈ ಹಿಂದೆ ಐಪಿಎಲ್​ನಲ್ಲಿ ಅತೀ ವೇಗವಾಗಿ 4 ಸಾವಿರ ರನ್​ ಪೂರೈಸಿದ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿತ್ತು. ಗೇಲ್ 112 ಇನಿಂಗ್ಸ್​ಗಳ ಮೂಲಕ 4000 ರನ್ ಕಲೆಹಾಕಿದ್ದರು. ಆದರೀಗ ಈ ದಾಖಲೆಯನ್ನು ಮುರಿದು ಕೆಎಲ್ ರಾಹುಲ್ ಹೊಸ ಇತಿಹಾಸ ಬರೆದಿದ್ದಾರೆ.

5 / 10
ಕೆಎಲ್ ರಾಹುಲ್ ಕೇವಲ 105 ಇನಿಂಗ್ಸ್​​ ಮೂಲಕ 4 ಸಾವಿರ ರನ್​ ಪೂರೈಸಿದ್ದು, ಈ ಮೂಲಕ ಐಪಿಎಲ್​ನಲ್ಲಿ ಅತೀ ವೇಗವಾಗಿ 4000 ರನ್​ ಕಲೆಹಾಕಿದ ಬ್ಯಾಟರ್​ ಎನಿಸಿಕೊಂಡಿದ್ದಾರೆ. ಇನ್ನು ಐಪಿಎಲ್​ನಲ್ಲಿ ವೇಗವಾಗಿ 4 ಸಾವಿರ ರನ್​ ಪೂರೈಸಿದ ಟಾಪ್-5 ಬ್ಯಾಟರ್​ಗಳ ಪಟ್ಟಿ ಈ ಕೆಳಗಿನಂತಿದೆ...

6 / 10
1- ಕೆಎಲ್ ರಾಹುಲ್: ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಕೇವಲ 105 ಇನಿಂಗ್ಸ್​ ಮೂಲಕ 4 ಸಾವಿರ ರನ್​ ಕಲೆಹಾಕಿ ಹೊಸ ದಾಖಲೆ ಬರೆದಿದ್ದಾರೆ.

7 / 10
2- ಕ್ರಿಸ್ ಗೇಲ್: ಕೆಕೆಆರ್, ಆರ್​ಸಿಬಿ, ಪಂಜಾಬ್ ಕಿಂಗ್ಸ್ ಪರ ಆಡಿರುವ ಕ್ರಿಸ್ ಗೇಲ್ 112 ಇನಿಂಗ್ಸ್ ಮೂಲಕ 4 ಸಾವಿರ ರನ್ ಪೂರೈಸಿದ್ದರು.

8 / 10
3- ಡೇವಿಡ್ ವಾರ್ನರ್: ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಒಟ್ಟು 114 ಇನಿಂಗ್ಸ್​ಗಳಲ್ಲಿ 4000 ರನ್​ ಕಲೆಹಾಕಿದ್ದರು.

9 / 10
4- ವಿರಾಟ್ ಕೊಹ್ಲಿ: ಆರ್​ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ 128 ಇನಿಂಗ್ಸ್​ಗಳಲ್ಲಿ 4 ಸಾವಿರ ರನ್​ ಪೂರೈಸಿದ್ದರು.

10 / 10
5- ಎಬಿ ಡಿವಿಲಿಯರ್ಸ್: ಮಾಜಿ ಆರ್​ಸಿಬಿ ತಂಡದ ಅಟಗಾರ ಎಬಿ ಡಿವಿಲಿಯರ್ಸ್ 131 ಇನಿಂಗ್ಸ್​ಗಳ ಮೂಲಕ 4 ಸಾವಿರ ರನ್ ಕಲೆಹಾಕಿದ್ದರು.

Published On - 6:23 pm, Sun, 16 April 23