IPL 2023: ಐಪಿಎಲ್ನಲ್ಲಿ ಹೊಸ ನಿಯಮಗಳು; ಟಾಸ್ ನಂತರವೂ ತಂಡ ಬದಲಿಸಬಹುದು..!
IPL 2023 New Rules: ಅಂಪೈರ್ ನೀಡಿದ ವೈಡ್ ಮತ್ತು ನೋ ಬಾಲ್ ನಿರ್ಧಾರವನ್ನು ಪರಿಶೀಲಿಸುವ ನಿಯಮವನ್ನು ಜಾರಿಗೆ ತಂದಿದ್ದ ಐಪಿಎಲ್ ಮಂಡಳಿ ಇದೀಗ ಕೆಲವು ನೂತನ ನಿಯಮಗಳನ್ನು ಐಪಿಎಲ್ನಲ್ಲಿ ಅಳವಡಿಸಿಕೊಳ್ಳಲು ಮುಂದಾಗಿದೆ.
1 / 7
ಕೆಲವು ದಿನಗಳ ಹಿಂದೆ, ಅಂಪೈರ್ ನೀಡಿದ ವೈಡ್ ಮತ್ತು ನೋ ಬಾಲ್ ನಿರ್ಧಾರವನ್ನು ಪರಿಶೀಲಿಸುವ ನಿಯಮವನ್ನು ಜಾರಿಗೆ ತಂದಿದ್ದ ಐಪಿಎಲ್ ಮಂಡಳಿ ಇದೀಗ ಕೆಲವು ನೂತನ ನಿಯಮಗಳನ್ನು ಐಪಿಎಲ್ನಲ್ಲಿ ಅಳವಡಿಸಿಕೊಳ್ಳಲು ಮುಂದಾಗಿದೆ.
2 / 7
ವರದಿ ಪ್ರಕಾರ, ಇನ್ನು ಮುಂದೆ ಟಾಸ್ ನಂತರವೂ ತಂಡದ ನಾಯಕರು ತಮ್ಮ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಬದಲಾವಣೆ ಮಾಡುವ ಹೊಸ ನಿಮಯಮನ್ನು ಜಾರಿಗೆ ತರಲು ಮಂಡಳಿ ನಿರ್ಧರಿಸಿದೆ ಎಂದು ವರದಿಯಾಗಿದೆ.
3 / 7
ಈ ಹಿಂದೆ ಉಭಯ ತಂಡಗಳ ಆಟಗಾರರು ಟಾಸ್ಗೂ ಮುನ್ನ ತಮ್ಮ ತಮ್ಮ ತಂಡದ ಆಡುವ ಹನ್ನೊಂದರ ಬಳಗದ ಪಟ್ಟಿಯನ್ನು ವಿನಿಮಯ ಮಾಡಿಕೊಳ್ಳಬೇಕಿತ್ತು. ಆದರೆ ಇದೀಗ ಈ ನಿಯಮ ಜಾರಿಯಾದರೆ, ಟಾಸ್ ನಂತರ, ಟಾಸ್ನ ಅನುಗುಣವಾಗಿ ತಂಡದ ನಾಯಕ ತಂಡವನ್ನು ಬದಲಿಸಬಹುದಾಗಿದೆ.
4 / 7
ಐಪಿಎಲ್ಗೂ ಮುನ್ನ ಈ ನಿಯಮವನ್ನು ದಕ್ಷಿಣ ಆಫ್ರಿಕಾದಲ್ಲಿ ಈ ವರ್ಷದಿಂದ ಆರಂಭವಾದ ಎಸ್ಎ ಟಿ20 ಲೀಗ್ನಲ್ಲಿ ಅಳವಡಿಸಿಕೊಳ್ಳಲಾಗಿತ್ತು. ಆ ಟೂರ್ನಿಯಲ್ಲಿ ಸಿಕ್ಕ ಯಶಸ್ಸಿನ ಬಳಿಕ ಈ ನಿಯಮವನ್ನು ಐಪಿಎಲ್ನಲ್ಲಿ ಜಾರಿಗೆ ತರಲು ಮಂಡಳಿ ಮುಂದಾಗಿದೆ.
5 / 7
ಇದಲ್ಲದೆ, ಬೌಲಿಂಗ್ ಮಾಡುವ ವೇಳೆ ವಿಕೆಟ್ ಕೀಪರ್ ಅಥವಾ ಫೀಲ್ಡರ್ ಸ್ಥಾನ ಪಲ್ಲಟ ಮಾಡಿದ್ದು ಕಂಡು ಬಂದರೆ ಅದನ್ನು ಡೆಡ್ ಬಾಲ್ ಎಂದು ಪರಿಗಣಿಸುವುದರ ಜೊತೆಗೆ ಐದು ರನ್ಗಳ ಪೆನಾಲ್ಟಿ ಕೂಡ ಹಾಕಲಾಗುತ್ತದೆ.
6 / 7
ಹಾಗೆಯೇ ನಿಗದಿತ ಸಮಯಕ್ಕೆ ಓವರ್ ಮುಗಿಸದೆ ಹೊದಲ್ಲಿ ಕೇವಲ 4 ಫೀಲ್ಡರ್ ಮಾತ್ರ 30 ಯಾರ್ಡ್ ಸರ್ಕಲ್ ಹೊರಗೆ ಫೀಲ್ಡಿಂಗ್ ಮಾಡಬೇಕಾಗುತ್ತದೆ.
7 / 7
ಈ ನಿಯಮಕ್ಕೂ ಮುನ್ನ ಐಪಿಎಲ್ನಲ್ಲಿ ನೂತನ ಡಿಆರ್‌ಎಸ್ ನಿಯಮವನ್ನು ಜಾರಿಗೆ ತರಲಾಗಿದೆ. ಇದರಲ್ಲಿ ಈಗ ವೈಡ್ ಮತ್ತು ನೋ ಬಾಲ್ ನಿರ್ಧಾರದ ವಿರುದ್ಧವೂ ಡಿಆರ್‌ಎಸ್ ಬಳಸಬಹುದಾಗಿದೆ. ಆದರೆ, ಲೆಗ್ ಬೈ ನಿರ್ಧಾರಕ್ಕೆ ಡಿಆರ್‌ಎಸ್ ತೆಗೆದುಕೊಳ್ಳಲು ಅವಕಾಶ ನೀಡಲಾಗಿಲ್ಲ. ಈ ಹಿಂದೆ ಅಂಪೈರ್ ನೀಡಿದ ಔಟ್ ನಿರ್ಣಯದ ವಿರುದ್ಧ ಮಾತ್ರ ಡಿಆರ್‌ಎಸ್ ತೆಗದುಕೊಳ್ಳಲಾಗುತ್ತಿತ್ತು.
Published On - 5:14 pm, Wed, 22 March 23