IPL 2023: CSK ತಂಡದ ಮುಂದಿನ ನಾಯಕ ಯಾರೆಂಬ ಸುಳಿವು ನೀಡಿದ ಮೈಕೆಲ್ ಹಸ್ಸಿ

Edited By:

Updated on: Dec 03, 2022 | 8:59 PM

IPL 2023: ಶಾಂತ ಸ್ವಭಾವ, ಆತನ ಗಮನಹರಿಸುವಿಕೆ ಹಾಗೂ ವ್ಯಕ್ತಿತ್ವದಿಂದ ಇತರರು ಅವನತ್ತ ಆಕರ್ಷಿತರಾಗುತ್ತಾರೆ. ಅಲ್ಲದೆ ಆತನೊಂದಿಗೆ ಸಮಯ ಕಳೆಯಲು ಇಷ್ಟಪಡುತ್ತಾರೆ.

1 / 7
ಮಹೇಂದ್ರ ಸಿಂಗ್ ಧೋನಿಯ ನಿರ್ಗಮನದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಯಾರು ಮುನ್ನಡೆಸುವವರು ಯಾರು? ಈ ಪ್ರಶ್ನೆಗೆ ಸಿಎಸ್​ಕೆ ಕಳೆದ ಸೀಸನ್​​ನಲ್ಲಿ ಉತ್ತರ ನೀಡುವ ಪ್ರಯತ್ನ ಮಾಡಿತು.

ಮಹೇಂದ್ರ ಸಿಂಗ್ ಧೋನಿಯ ನಿರ್ಗಮನದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಯಾರು ಮುನ್ನಡೆಸುವವರು ಯಾರು? ಈ ಪ್ರಶ್ನೆಗೆ ಸಿಎಸ್​ಕೆ ಕಳೆದ ಸೀಸನ್​​ನಲ್ಲಿ ಉತ್ತರ ನೀಡುವ ಪ್ರಯತ್ನ ಮಾಡಿತು.

2 / 7

ತಂಡದ ಹೊಸ ನಾಯಕನಾಗಿ ರವೀಂದ್ರ ಜಡೇಜಾ ಅವರನ್ನು ಆಯ್ಕೆಯಾಗಿದ್ದರು. ಅದರಂತೆ 5 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದ ಜಡೇಜಾ ಗೆಲುವಿನ ರುಚಿ ನೋಡಿದ್ದು ಕೇವಲ 1 ಪಂದ್ಯದಲ್ಲಿ ಮಾತ್ರ.

3 / 7

ಇದೀಗ 41 ವರ್ಷದ ಧೋನಿ ನಿವೃತ್ತಿ ಅಂಚಿನಲ್ಲಿದ್ದಾರೆ. ಅದರಲ್ಲೂ ಈ ಬಾರಿಯ ಐಪಿಎಲ್​ ಮೂಲಕ MSD ವಿದಾಯ ಹೇಳಲಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿಯೇ ಸಿಎಸ್​ಕೆ ತಂಡದ ಮುಂದಿನ ನಾಯಕ ಯಾರೆಂಬ ಪ್ರಶ್ನೆ ಮತ್ತೆ ಉದ್ಭವಿಸಿದೆ.

4 / 7

ಈ ಪ್ರಶ್ನೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಕೋಚ್ ಮೈಕೆಲ್ ಹಸ್ಸಿ ಉತ್ತರಿಸಿದ್ದಾರೆ. CSK ತಂಡದ ಭವಿಷ್ಯದ ಯೋಜನೆಗಳೇನು ಎಂಬುದರ ಬಗ್ಗೆ ನನಗೆ ಖಚಿತತೆ ಇಲ್ಲ. ಆದರೆ ಧೋನಿಯಂತಹ ಆಟಗಾರ ಚೆನ್ನೈ ಸೂಪರ್ ಕಿಂಗ್ಸ್​ ತಂಡದಲ್ಲಿದ್ದಾರೆ. ಹೀಗಾಗಿ ಅವರಿಗೆ ನಾಯಕತ್ವ ಒಲಿಯಲಿದೆ ಎಂದಿದ್ದಾರೆ ಹಸ್ಸಿ.

5 / 7

ಅಷ್ಟಕ್ಕೂ ಹಸ್ಸಿ ಧೋನಿಯಂತಹ ಆಟಗಾರ ಎಂದು ಹೆಸರಿಸಿದ್ದು ಯುವ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಅವರನ್ನು. ರುತುರಾಜ್ ಧೋನಿಯಂತೆ ಶಾಂತ ಸ್ವಭಾವದವರು. MSD ಯಂತೆ ಆತ ಕೂಡ ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಒತ್ತಡದ ಸಂದರ್ಭಗಳಲ್ಲಿ ಗಾಯಕ್ವಾಡ್ ಕೂಡ ಶಾಂತವಾಗಿರುತ್ತಾರೆ.

6 / 7

ಶಾಂತ ಸ್ವಭಾವ, ಆತನ ಗಮನಹರಿಸುವಿಕೆ ಹಾಗೂ ವ್ಯಕ್ತಿತ್ವದಿಂದ ಇತರರು ಅವನತ್ತ ಆಕರ್ಷಿತರಾಗುತ್ತಾರೆ. ಅಲ್ಲದೆ ಆತನೊಂದಿಗೆ ಸಮಯ ಕಳೆಯಲು ಇಷ್ಟಪಡುತ್ತಾರೆ. ಅಷ್ಟೇ ಅಲ್ಲದೆ ರುತುರಾಜ್ ಗಾಯಕ್ವಾಡ್​ ಅತ್ಯುತ್ತಮ ನಾಯಕತ್ವದ ಗುಣಗಳನ್ನು ಹೊಂದಿದ್ದಾರೆ. ಹೀಗಾಗಿ ಧೋನಿಯ ಉತ್ತರಾಧಿಕಾರಿಯಾಗಿ ರುತುರಾಜ್ ಗಾಯಕ್ವಾಡ್ ನೇಮಕವಾಗಬಹುದು ಎಂದು ಮೈಕೆಲ್ ಹಸ್ಸಿ ತಿಳಿಸಿದ್ದಾರೆ.

7 / 7

ವಿಶೇಷ ಎಂದರೆ ರುತುರಾಜ್ ಗಾಯಕ್ವಾಡ್ ಈಗಾಗಲೇ ದೇಶೀಯ ಅಂಗಳದಲ್ಲಿ ನಾಯಕನಾಗಿ ಮಿಂಚಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟೂರ್ನಿ, ವಿಜಯ್ ಹಜಾರೆ ಟೂರ್ನಿಗಳಲ್ಲಿ ಮಹಾರಾಷ್ಟ್ರ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಅದರಲ್ಲೂ ಈ ಬಾರಿಯ ವಿಜಯ್ ಹಜಾರೆ ಟೂರ್ನಿಯಲ್ಲಿ ರುತುರಾಜ್ ನಾಯಕತ್ವದ ಮಹಾರಾಷ್ಟ್ರ ತಂಡವು ಫೈನಲ್​ ಆಡಿ ರನ್ನರ್ ಅಪ್ ಆಗಿತ್ತು. ಹೀಗಾಗಿ ಮುಂದಿನ ದಿನಗಳಲ್ಲಿ ಸಿಎಸ್​ಕೆ ತಂಡದ ನಾಯಕನಾಗಿ 25 ವರ್ಷದ ರುತುರಾಜ್ ಗಾಯಕ್ವಾಡ್ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.

TV9 Web

TV9 Kannada

Read More
Loading...
Unable to load recommendations.
Follow Us