RCB Playoffs: ಇಂದಿನ ಪಂದ್ಯದಲ್ಲಿ ಆರ್ಸಿಬಿ ಸೋತರೆ ಏನು ಗತಿ?: ಇಲ್ಲಿದೆ ಸಂಪೂರ್ಣ ಮಾಹಿತಿ
RCB vs GT, IPL 2023: ಆರ್ಸಿಬಿ-ಜಿಟಿ ಪಂದ್ಯಕ್ಕೂ ಮುನ್ನ ನಡೆಯುವ ಮುಂಬೈ-ಎಸ್ಆರ್ಹೆಚ್ ಕದನ ಆರ್ಸಿಬಿ ಪಾಲಿಗೆ ಮಹತ್ವ ಪಡೆದುಕೊಂಡಿದೆ. ಇದರಲ್ಲಿ ಮುಂಬೈ ಸೋತರೆ ಫಾಫ್ ಪಡೆ ಜಿಟಿ ವಿರುದ್ಧ ಕನಿಷ್ಠ ಗೆದ್ದರೆ ಪ್ಲೇ ಆಫ್ ಪ್ರವೇಶಿಸುತ್ತೆ.
1 / 7
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿಂದು ಎರಡು ಪಂದ್ಯಗಳು ನಡೆಯಲಿದ್ದು, ಎರಡೂ ಕೂಡ ರೋಚಕತೆ ಸೃಷ್ಟಿಸಿದೆ. ಮಧ್ಯಾಹ್ನ ಆಯೋಜಿಸಲಾಗಿರುವ ಮೊದಲ ಮ್ಯಾಚ್ನಲ್ಲಿ ಮುಂಬೈ ಇಂಡಿಯನ್ಸ್-ಸನ್ರೈಸರ್ಸ್ ಮುಖಾಮುಖಿ ಆದರೆ, ದ್ವಿತೀಯ ಪಂದ್ಯ ಆರ್ಸಿಬಿ-ಗುಜರಾತ್ ನಡುವೆ ನಡೆಯಲಿದೆ.
2 / 7
ಪ್ಲೇ ಆಫ್ ಪ್ರವೇಶಿಸಲು ಮುಂಬೈ ಮತ್ತು ಆರ್ಸಿಬಿಗೆ ಈ ಪಂದ್ಯ ಬಹುಮುಖ್ಯ. ಮುಂಬೈ 13 ಪಂದ್ಯಗಳಲ್ಲಿ 14 ಅಂಕಗಳನ್ನು ಗಳಿಸಿದ್ದು ಮೈನಸ್ ನೆಟ್ ರನ್ರೇಟ್ ಕಾರಣಕ್ಕೆ 6ನೇ ಸ್ಥಾನ ಪಡೆದುಕೊಂಡಿದೆ. ಆರ್ಸಿಬಿ ಕೂಡ 13 ಪಂದ್ಯಗಳಲ್ಲಿ 14 ಅಂಕ ಪಡೆದು ರನ್ರೇಟ್ ಆಧಾರದ ಮೇಲೆ 4ನೇ ಸ್ಥಾನದಲ್ಲಿದೆ. ಹಾಗಾದರೆ ಆರ್ಸಿಬಿ ಇಂದಿನ ಪಂದ್ಯದಲ್ಲಿ ಸೋತರೆ ಏನಾಗಲಿದೆ?, ಗೆದ್ದರೆ ಏನಾಗಲಿದೆ?.
3 / 7
ಆರ್ಸಿಬಿ-ಜಿಟಿ ಪಂದ್ಯಕ್ಕೂ ಮುನ್ನ ನಡೆಯುವ ಮುಂಬೈ-ಎಸ್ಆರ್ಹೆಚ್ ಕದನ ಆರ್ಸಿಬಿ ಪಾಲಿಗೆ ಮಹತ್ವ ಪಡೆದುಕೊಂಡಿದೆ. ಇದರಲ್ಲಿ ಮುಂಬೈ ಸೋತರೆ ಫಾಫ್ ಪಡೆ ಜಿಟಿ ವಿರುದ್ಧ ಕನಿಷ್ಠ ಗೆದ್ದರೆ ಪ್ಲೇ ಆಫ್ ಪ್ರವೇಶಿಸುತ್ತೆ. ಅದೇ ಮುಂಬೈ ಗೆದ್ದರೆ ಆರ್ಸಿಬಿ ಕೂಡ ದೊಡ್ಡ ಅಂತರದ ಗೆಲುವು ಸಾಧಿಸಬೇಕು.
4 / 7
ಎಲ್ಲಾದರು ಮುಂಬೈ ಗೆದ್ದು ಆರ್ಸಿಬಿ ಸೋತರೆ ಬೆಂಗಳೂರು ತಂಡ ಟೂರ್ನಿಯಿಂದ ಹೊರಬೀಳಲಿದೆ. ಮುಂಬೈ-ಆರ್ಸಿಬಿ ಎರಡೂ ತಂಡ ಸೋತರೆ ಅತ್ತ ರಾಜಸ್ಥಾನ್ ಕೂಡ ಪ್ಲೇ ಆಫ್ ಪ್ರವೇಶಿಸುವ ಅವಕಾಶವಿದೆ. ರನ್ರೇಟ್ ಆಧಾರದ ಮೇಲೆ ಈ ಮೂರು ತಂಡಗಳ ಪೈಕಿ ಒಂದು ಟೀಮ್ ಕ್ವಾಲಿಫೈ ಆಗಲಿದೆ.
5 / 7
ಹೀಗಾಗಿ ಆರ್ಸಿಬಿಗೆ ಇಂದಿನ ಪಂದ್ಯ ಮಾಡು ಇಲ್ಲವೇ ಮಡಿ ಆಗಿದೆ. ಫಾಫ್ ಪಡೆಗೆ ಗೆದ್ದರಷ್ಟೆ ಉಳಿಗಾಲ ಎಂದು ಹೇಳಬಹುದು.
6 / 7
ಇದರ ನಡುವೆ ಆರ್ಸಿಬಿ-ಜಿಟಿ ಪಂದ್ಯಕ್ಕೆ ವರುಣನ ಭೀತಿ ಎದುರಾಗಿದೆ. ಬೆಂಗಳೂರಿನಲ್ಲಿ ನಿನ್ನೆ ಸಂಜೆ ಮಳೆ ಸುರಿದಿತ್ತು. ಇಂದೂ ಕೂಡಾ ಮಳೆಯಾಗುವ ಸಾಧ‍್ಯತೆಯಿದೆ. ಹೀಗಾಗಿ ಸಂಜೆ ವೇಳೆ ಮಳೆ ಸುರಿದು ಪಂದ್ಯ ರದ್ದಾದರೆ ಎರಡೂ ತಂಡಗಳು ತಲಾ 1 ಅಂಕ ಹಂಚಿಕೊಳ್ಳಬೇಕಾಗುತ್ತದೆ.
7 / 7
ಮಳೆ ಬಂದು ಪಂದ್ಯ ರದ್ದಾದರೆ ಆರ್ಸಿಬಿ 15 ಅಂಕ ಸಂಪಾದಿಸುತ್ತದೆ. ಇಲ್ಲುಕೂಡ ಮುಂಬೈ ಸೋತರಷ್ಟೆ ಆರ್ಸಿಬಿಗೆ ಪ್ಲೇ ಆಫ್ ಪ್ರವೇಶಿಸುವ ಅವಕಾಶ ಸಿಗಲಿದೆ. ಆರ್ಸಿಬಿ ಯಾವುದೇ ಟೆನ್ಶನ್ ಇಲ್ಲದೆ ಪ್ಲೇ ಆಫ್ ಪ್ರವೇಶಿಸಬೇಕು ಎಂದಾದರೆ ಮುಂಬೈ ವಿರುದ್ಧ ಎಸ್ಆರ್ಹೆಚ್ ಗೆಲ್ಲುವುದು ಮುಖ್ಯ.