IPL 2023: RCB ಅಭಿಮಾನಿಗಳಿಗೆ ಗುಡ್​ ನ್ಯೂಸ್: ಇಬ್ಬರು ಆಟಗಾರರ ಎಂಟ್ರಿಗೆ ಡೇಟ್ ಫಿಕ್ಸ್

| Updated By: ಝಾಹಿರ್ ಯೂಸುಫ್

Updated on: Apr 07, 2023 | 12:30 AM

IPL 2023 Kannada: RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಮೈಕೆಲ್ ಬ್ರೇಸ್​ವೆಲ್​, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ, ಸಿದ್ಧಾರ್ಥ್​ ಕೌಲ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಜನ್ ಕುಮಾರ್.

1 / 9
IPL 2023 RCB: ಐಪಿಎಲ್​ನ ಮೊದಲ ಪಂದ್ಯದಲ್ಲಿ ಗೆದ್ದು ಶುಭಾರಂಭ ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಶೀಘ್ರದಲ್ಲೇ ಇಬ್ಬರು ಸ್ಟಾರ್ ಆಟಗಾರರ ಆಗಮನವಾಗಲಿದೆ. ಆದರೆ ಇವರು ಬದಲಿ ಆಟಗಾರರಲ್ಲ. ಬದಲಾಗಿ ಈ ಬಾರಿಯ ಹರಾಜಿಗೂ ಮುನ್ನ ಆರ್​ಸಿಬಿ ಫ್ರಾಂಚೈಸಿ ಉಳಿಸಿಕೊಂಡಿದ್ದ ಇಬ್ಬರು ಆಟಗಾರರು ಕಾರಣಾಂತರಗಳಿಂದ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದರು. ಇದೀಗ ಇಬ್ಬರು ಕೂಡ ಒಂದೇ ವಾರದೊಳಗೆ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಆರ್​ಸಿಬಿ ತಂಡದ ಡೈರೆಕ್ಟರ್ ಮೈಕ್ ಹೆಸ್ಸನ್ ಖಚಿತಪಡಿಸಿದ್ದಾರೆ.

2 / 9
ಹೌದು, ಆರ್​ಸಿಬಿ ತಂಡದ ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಿದ್ದ ಸ್ಪಿನ್ ಆಲ್​ರೌಂಡರ್ ವನಿಂದು ಹಸರಂಗ ಇದೇ ವಾರ ತಂಡವನ್ನು ಕೂಡಿಕೊಳ್ಳಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸರಣಿ ನಿಮ್ಮಿತ್ತ ಶ್ರೀಲಂಕಾ ಸ್ಪಿನ್ನರ್ ಮೊದಲ ಎರಡು ಪಂದ್ಯಗಳಿಗೆ ಗೈರಾಗಿದ್ದರು. ಇದೀಗ ಹಸರಂಗ ಅವರು ಏಪ್ರಿಲ್ 10 ರೊಳಗೆ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಹೆಸ್ಸನ್ ತಿಳಿಸಿದ್ದಾರೆ.

3 / 9
ಏಪ್ರಿಲ್ 10 ರಂದು ಆರ್​ಸಿಬಿ ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂದ್ಯವಾಡಲಿದ್ದು, ಈ ಪಂದ್ಯದ ಆಯ್ಕೆಗೆ ವನಿಂದು ಹಸರಂಗ ಲಭ್ಯರಿರಲಿದ್ದಾರೆ ಎಂದು ಆರ್​ಸಿಬಿ ನಿರ್ದೇಶಕರು ತಿಳಿಸಿದ್ದಾರೆ.

4 / 9
ಇನ್ನು ಮೊಣಕಾಲಿನ ಗಾಯದ ಸಮಸ್ಯೆಯ ಕಾರಣ ಆರ್​ಸಿಬಿ ತಂಡದಿಂದ ಹೊರಗುಳಿದಿರುವ ಆಸ್ಟ್ರೇಲಿಯಾ ವೇಗಿ ಜೋಶ್ ಹ್ಯಾಝಲ್​ವುಡ್ ಏಪ್ರಿಲ್ 14 ರಂದು ತಂಡವನ್ನು ಸೇರಿಕೊಳ್ಳುವುದನ್ನು ಎಂದು ಮೈಕ್ ಹೆಸ್ಸನ್ ಖಚಿತಪಡಿಸಿದ್ದಾರೆ.

5 / 9
 ಏಪ್ರಿಲ್ 15 ರಂದು ಆರ್​ಸಿಬಿ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯವಾಡಲಿದ್ದು, ಈ ಪಂದ್ಯದಲ್ಲಿ ಜೋಶ್ ಹ್ಯಾಝಲ್​ವುಡ್ ಕಣಕ್ಕಿಳಿಯುವ ವಿಶ್ವಾಸವಿದೆ ಎಂದು ಮೈಕ್ ಹೆಸ್ಸನ್ ತಿಳಿಸಿದ್ದಾರೆ.

6 / 9
ಇತ್ತ ಆರ್​ಸಿಬಿ ವೇಗಿ ರೀಸ್ ಟೋಪ್ಲಿ ಗಾಯಗೊಂಡಿದ್ದು, ಕೆಕೆಆರ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದಾರೆ. ಇದರ ನಡುವೆ ತಂಡದ ಪ್ರಮುಖ ವೇಗಿ ಜೋಶ್ ಹ್ಯಾಝಲ್​ವುಡ್ ತಂಡಕ್ಕೆ ಆಗಮಿಸುತ್ತಿರುವುದು ಆರ್​ಸಿಬಿ ಪಾಲಿಗೆ ಶುಭ ಸೂಚನೆ ಎನ್ನಬಹುದು.

7 / 9
ಇನ್ನು ವನಿಂದು ಹಸರಂಗ ತಂಡವನ್ನು ಕೂಡಿಕೊಂಡರೆ, ಪ್ಲೇಯಿಂಗ್ ಇಲೆವೆನ್​ನಿಂದ ಮೈಕೆಲ್ ಬ್ರೇಸ್​ವೆಲ್ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ. ಏಕೆಂದರೆ ಕಳೆದ ಸೀಸನ್​ನಲ್ಲಿ ಹಸರಂಗ (26) ಆರ್​ಸಿಬಿ ಪರ ಅತ್ಯಧಿಕ ವಿಕೆಟ್ ಪಡೆದಿದ್ದರು. ಹೀಗಾಗಿ ಅವರಿಗೆ ಪ್ಲೇಯಿಂಗ್ ಇಲೆವೆನ್​ನಲ್ಲಿ ಅವಕಾಶ ಸಿಗುವುದು ಖಚಿತ ಎನ್ನಬಹುದು.

8 / 9
ಒಟ್ಟಿನಲ್ಲಿ ಮೊದಲ ಪಂದ್ಯದಲ್ಲೇ ಭರ್ಜರಿ ಜಯ ಸಾಧಿಸಿ ಹೊಸ ಹುಮ್ಮಸ್ಸಿನಲ್ಲಿರುವ ಆರ್​ಸಿಬಿ ತಂಡಕ್ಕೆ ಇಬ್ಬರು ಪ್ರಮುಖ ಆಟಗಾರರ ಎಂಟ್ರಿ ಕೊಟ್ಟರೆ ಫಾಫ್ ಡುಪ್ಲೆಸಿಸ್ ಪಡೆಯು ಮತ್ತಷ್ಟು ಬಲಿಷ್ಠವಾಗಲಿದೆ.

9 / 9
RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಮೈಕೆಲ್ ಬ್ರೇಸ್​ವೆಲ್​, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ, ಸಿದ್ಧಾರ್ಥ್​ ಕೌಲ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್​ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್.