IPL 2023: KKR ವಿರುದ್ಧದ 6 ವರ್ಷಗಳ ಹಳೆಯ ಸೇಡು ತೀರಿಸಿಕೊಳ್ಳುತ್ತಾ RCB

| Updated By: ಝಾಹಿರ್ ಯೂಸುಫ್

Updated on: Apr 05, 2023 | 7:23 PM

IPL 2023 Kannada: ಆರ್​ಸಿಬಿ ಕಲೆಹಾಕಿದ 213 ರನ್​ಗಳ ಗುರಿಯನ್ನು ಬೆನ್ನತ್ತಿದ ಕೆಕೆಆರ್ 203 ರನ್​ಗಳಿಸಿ ವಿರೋಚಿತವಾಗಿ ಸೋಲೊಪ್ಪಿಕೊಂಡಿತ್ತು.

1 / 7
IPL 2023, RCB vs KKR: ಅದು 2017, ಏಪ್ರಿಲ್ 23...ಕೊಲ್ಕತ್ತಾದ ಈಡನ್ ಗಾರ್ಡನ್ಸ್​ ಮೈದಾನದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್​ನ 27 ಪಂದ್ಯಗಳಲ್ಲಿ ಕೆಕೆಆರ್ ಹಾಗೂ ಆರ್​ಸಿಬಿ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡವು 19.3 ಓವರ್​ಗಳಲ್ಲಿ 131 ರನ್​ಗಳಿಗೆ ಸರ್ವಪತನ ಕಂಡಿತು.

2 / 7
ಇತ್ತ ಮಾರಕ ದಾಳಿ ಸಂಘಟಿಸಿದ ಆರ್​ಸಿಬಿ ತಂಡವು ಭರ್ಜರಿ ಗೆಲುವಿನ ನಿರೀಕ್ಷೆಯಲ್ಲಿತ್ತು. ಆದರೆ ಸುಲಭ ಗುರಿ ಬೆನ್ನತ್ತಿದ ಆರ್​ಸಿಬಿ ತಂಡವು ಹಿಂದೆಂದೂ ಕಂಡರಿಯದ ರೀತಿಯಲ್ಲಿ ಹೀನಾಯವಾಗಿ ಸೋಲೊಪ್ಪಿಕೊಂಡಿತ್ತು.

3 / 7
ಹೌದು, ಅಂದು ಕೆಕೆಆರ್ ಕರಾರುವಾಕ್ ದಾಳಿಗೆ ಕಂಗೆಟ್ಟ ಆರ್​ಸಿಬಿ ತಂಡವು 9.4 ಓವರ್​ಗಳಲ್ಲಿ 49 ರನ್​ಗಳಿಗೆ ಆಲೌಟ್ ಆಗಿತ್ತು. ಇದು ಐಪಿಎಲ್ ಇತಿಹಾಸದಲ್ಲೇ ತಂಡವೊಂದು ಕಲೆಹಾಕಿದ ಅತ್ಯಂತ ಕಡಿಮೆ ಸ್ಕೋರ್ ಆಗಿದೆ. ಇದೀಗ ಇದೇ ಮೈದಾನದಲ್ಲಿ ಮತ್ತೆ ಆರ್​ಸಿಬಿ ಹಾಗೂ ಕೆಕೆಆರ್ ತಂಡಗಳು ಮುಖಾಮುಖಿಯಾಗಲು ಸಜ್ಜಾಗಿದೆ.

4 / 7
ಆದರೆ ಈ ಬಾರಿ ಕೂಡ ಆರ್​ಸಿಬಿಗೆ ಗೆಲುವು ಸುಲಭವಲ್ಲ. ಏಕೆಂದರೆ ಕೆಕೆಆರ್​ ತಂಡವು ತವರಿನಲ್ಲಿ ಅತ್ಯಂತ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದೆ. ಇದಕ್ಕೆ ಸಾಕ್ಷಿಯೇ ಈ ಹಿಂದಿನ ಫಲಿತಾಂಶಗಳು. ಈ ಮೈದಾನದಲ್ಲಿ ಕೊನೆಯ ಬಾರಿ ಆರ್​ಸಿಬಿ ಹಾಗೂ ಕೆಕೆಆರ್ ಮುಖಾಮುಖಿಯಾಗಿದ್ದು 2019 ರಲ್ಲಿ. ಅಂದು ಆರ್​ಸಿಬಿ ಕಲೆಹಾಕಿದ 213 ರನ್​ಗಳ ಗುರಿಯನ್ನು ಬೆನ್ನತ್ತಿದ ಕೆಕೆಆರ್ 203 ರನ್​ಗಳಿಸಿ ವಿರೋಚಿತವಾಗಿ ಸೋಲೊಪ್ಪಿಕೊಂಡಿತ್ತು.

5 / 7
ಇನ್ನು ಈಡನ್ ಗಾರ್ಡನ್ಸ್ ಮೈದಾನದಲ್ಲಿ ಆರ್​ಸಿಬಿ ಆಡಿರುವ 9 ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ 3 ಬಾರಿ. ವಿಶೇಷ ಎಂದರೆ ಈ ಮೂರು ಪಂದ್ಯಗಳಲ್ಲೂ ಕೆಕೆಆರ್ ತಂಡದಿಂದ ಅತ್ಯುತ್ತಮ ಪ್ರದರ್ಶನ ಮೂಡಿಬಂದಿತ್ತು. ಇನ್ನು ಉಭಯ ತಂಡಗಳು ಆಡಿರುವ 30 ಪಂದ್ಯಗಳಲ್ಲಿ ಕೆಕೆಆರ್ 16 ಬಾರಿ ಜಯ ಸಾಧಿಸಿದೆ.

6 / 7
ಇದೀಗ ಏಪ್ರಿಲ್ 6 ರಂದು ನಡೆಯಲಿರುವ ಐಪಿಎಲ್​ನ 9ನೇ ಪಂದ್ಯದ ಮೂಲಕ 3 ವರ್ಷಗಳ ಬಳಿಕ ಮತ್ತೆ ಆರ್​ಸಿಬಿ ಹಾಗೂ ಕೆಕೆಆರ್ ತಂಡಗಳು ಈಡನ್ ಗಾರ್ಡನ್ಸ್​ ಮೈದಾನದಲ್ಲಿ ಮುಖಾಮುಖಿಯಾಗುತ್ತಿದೆ. ಇದರ ಬೆನ್ನಲ್ಲೇ 6 ವರ್ಷಗಳ ಹೀನಾಯ ಸೋಲಿನ ಸ್ಕೋರ್​ ಬೋರ್ಡ್​ ಕೂಡ ಮುನ್ನಲೆಗೆ ಬಂದಿದೆ.

7 / 7
ಇದರ ಬೆನ್ನಲ್ಲೇ ಈ ಬಾರಿ ಬಲಿಷ್ಠ ಪಡೆಯೊಂದಿಗೆ ಕಣಕ್ಕಿಳಿದಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡವು ಆರು ವರ್ಷಗಳ ಹಳೆಯ ಹೀನಾಯ ಸೋಲಿನ ಸೇಡು ತೀರಿಸಿಕೊಳ್ಳಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಅಲ್ಲದೆ ಕೆಕೆಆರ್ ಅನ್ನು ತವರಿನಲ್ಲೇ ಈ ಹೀನಾಯವಾಗಿ ಮಣಿಸಿ ಹಳೆಯ ಲೆಕ್ಕ ಚುಕ್ತಾ ಮಾಡಲಿ ಎಂಬುದಷ್ಟೇ ಆರ್​ಸಿಬಿ ಅಭಿಮಾನಿಗಳ ಆಶಯ.