IPL 2023: RCB ವಿರುದ್ಧ ಸ್ಪೋಟಕ ಸೆಂಚುರಿ ಸಿಡಿಸಿ ಅಬ್ಬರಿಸಿದ ಮಾಜಿ ಆರ್​ಸಿಬಿ ಆಟಗಾರ..!

| Updated By: ಝಾಹಿರ್ ಯೂಸುಫ್

Updated on: May 18, 2023 | 9:10 PM

IPL 2023 Kannada: ಕ್ಲಾಸೆನ್ ಬ್ಯಾಟ್​ನಿಂದ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಮೂಡಿಬಂತು. ಇದು ಈ ಬಾರಿಯ ಐಪಿಎಲ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ಪರ ಮೂಡಿಬಂದ ಅತೀ ವೇಗದ ಅರ್ಧಶತಕವಾಗಿದೆ.

1 / 10
IPL 2023 SRH vs RCB: ಹೈದರಾಬಾದ್​ನಲ್ಲಿ ನಡೆದ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಎಸ್​ಆರ್​ಹೆಚ್ ತಂಡದ ಹೆನ್ರಿಕ್ ಕ್ಲಾಸೆನ್ ಸ್ಪೋಟಕ ಸೆಂಚುರಿ ಸಿಡಿಸಿ ಮಿಂಚಿದ್ದಾರೆ.

2 / 10
ಪವರ್​ಪ್ಲೇನಲ್ಲಿ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ SRH ಪರ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹೆನ್ರಿಕ್ ಕ್ಲಾಸೆನ್ ಆರಂಭದಿಂದಲೇ ಅಬ್ಬರಿಸಿದರು. ಅದರಲ್ಲೂ ಸ್ಪಿನ್ ಬೌಲರ್​ಗಳನ್ನು ಟಾರ್ಗೆಟ್ ಮಾಡಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.

3 / 10
ಪರಿಣಾಮ ಕ್ಲಾಸೆನ್ ಬ್ಯಾಟ್​ನಿಂದ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಮೂಡಿಬಂತು. ಇದು ಈ ಬಾರಿಯ ಐಪಿಎಲ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ಪರ ಮೂಡಿಬಂದ ಅತೀ ವೇಗದ ಅರ್ಧಶತಕವಾಗಿದೆ.

4 / 10
ಇನ್ನು ಅರ್ಧಶತಕದ ಬಳಿಕ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಕ್ಲಾಸೆನ್ 11ನೇ ಓವರ್​ ವೇಳೆಗೆ ತಂಡದ ಮೊತ್ತವನ್ನು 100ರ ಗಡಿದಾಟಿಸಿದರು.

5 / 10
ಅಲ್ಲದೆ ಕೇವಲ 49 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 8 ಫೋರ್​ನೊಂದಿಗೆ ಸಿಡಿಲಬ್ಬರದ ಶತಕ ಸಿಡಿಸಿ ಅಬ್ಬರಿಸಿದರು. ವಿಶೇಷ ಎಂದರೆ 98 ರನ್​ ಗಳಿಸಿದ್ದ ವೇಳೆ ಕ್ಲಾಸೆನ್ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ತಮ್ಮ ಚೊಚ್ಚಲ ಐಪಿಎಲ್ ಶತಕ ಪೂರೈಸಿದ್ದರು.

6 / 10
ಇನ್ನು 51 ಎಸೆತಗಳಲ್ಲಿ 104 ರನ್​ಗಳಿಸಿದ್ದ ವೇಳೆ ಹರ್ಷಲ್ ಪಟೇಲ್ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ಹೆನ್ರಿಕ್ ಕ್ಲಾಸೆನ್ ತಮ್ಮ ಇನಿಂಗ್ಸ್ ಅಂತ್ಯಗೊಳಿಸಿದರು.

7 / 10
ಅಂದಹಾಗೆ ಎಸ್​ಆರ್​ಹೆಚ್ ತಂಡದ ಪರ ಆಡುವ ಮುನ್ನ ಹೆನ್ರಿಕ್ ಕ್ಲಾಸೆನ್ ಐಪಿಎಲ್​ನಲ್ಲಿ ಎರಡು ತಂಡಗಳ ಭಾಗವಾಗಿದ್ದಾರೆ. ಅದರಲ್ಲೂ ಆರ್​ಸಿಬಿ ಪರ ಬ್ಯಾಟ್​ ಬೀಸಿದ್ದರು ಎಂಬುದು ವಿಶೇಷ.

8 / 10
2018 ರ ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಕ್ಲಾಸೆನ್ 4 ಪಂದ್ಯವಾಡಿದ್ದರು. ಈ ವೇಳೆ ಕಲೆಹಾಕಿದ್ದು ಕೇವಲ 57 ರನ್​ ಮಾತ್ರ. ಮರುವರ್ಷ ರಾಜಸ್ಥಾನ್ ರಾಯಲ್ಸ್ ಸೌತ್ ಆಫ್ರಿಕಾ ಆಟಗಾರನನ್ನು ಬಿಡುಗಡೆ ಮಾಡಿತ್ತು.

9 / 10
2019 ರಲ್ಲಿ ಆರ್​ಸಿಬಿ ತಂಡವು ಕ್ಲಾಸೆನ್ ಅವರನ್ನು ಖರೀದಿಸುವ ಮೂಲಕ ಗಮನ ಸೆಳೆಯಿತು. ಅಲ್ಲದೆ ಆರ್​ಸಿಬಿ ಪರ 3 ಪಂದ್ಯವಾಡಿದ್ದರೂ ಒಂದೇ ಒಂದು ಉತ್ತಮ ಇನಿಂಗ್ಸ್ ಆಡಿರಲಿಲ್ಲ. ಸಿಕ್ಕ ಅವಕಾಶದಲ್ಲಿ ಕಲೆಹಾಕಿದ್ದು ಕೇವಲ 9 ರನ್​ ಮಾತ್ರ. ಹೀಗಾಗಿ ಆರ್​ಸಿಬಿ ಕೂಡ ತಂಡದಿಂದ ಕೈಬಿಟ್ಟಿತು.

10 / 10
ಇದಾಗ್ಯೂ ಸ್ಪೋಟಕ ಬ್ಯಾಟಿಂಗ್ ಮೂಲಕ ಸೌತ್ ಆಫ್ರಿಕಾ ತಂಡದಲ್ಲಿ ಮಿಂಚಿದ್ದ ಹೆನ್ರಿಕ್ ಕ್ಲಾಸೆನ್ ಅವರನ್ನು ಈ ಬಾರಿ SRH ಫ್ರಾಂಚೈಸಿ ಬರೋಬ್ಬರಿ 5.25 ಕೋಟಿ ರೂ.ಗೆ ಖರೀದಿಸಿತ್ತು. ಅದರಂತೆ ಈ ಬಾರಿ ಎಸ್​ಆರ್​ಹೆಚ್ ಪರ 11 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಹೆನ್ರಿಕ್ ಕ್ಲಾಸೆನ್ 360+ ರನ್​ ಕಲೆಹಾಕಿದ್ದಾರೆ.

Published On - 9:06 pm, Thu, 18 May 23