IPL 2023: ಮೊದಲ ಐಪಿಎಲ್​ ಪಂದ್ಯದಲ್ಲೇ 15 ವರ್ಷಗಳ ಹಳೆಯ ದಾಖಲೆ ಮುರಿದ ವಿವ್ರಾಂತ್..!

Updated on: May 22, 2023 | 8:30 PM

IPL 2023: 15 ವರ್ಷಗಳಲ್ಲೇ ಐಪಿಎಲ್​ನಲ್ಲಿ ಪಾದಾರ್ಪಣೆ ಪಂದ್ಯದಲ್ಲಿ ಅತ್ಯಧಿಕ ರನ್ ಬಾರಿಸಿದ ಭಾರತೀಯ ಆಟಗಾರನಾಗಿ ವಿವ್ರಾಂತ್​ ದಾಖಲೆ ಪುಟ ಸೇರಿದ್ದಾರೆ.

1 / 7
ಈ ಬಾರಿಯ ಐಪಿಎಲ್​ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ತಂಡದಲ್ಲಿ ಹೆಸರಾಂತ ಆಟಗಾರರ ದಂಡೆ ಇದ್ದರು, ತಂಡ ಪ್ಲೇ ಆಫ್​ಗೇರಲು ವಿಫಲವಾಯಿತು. ಆದರೆ ತಂಡದ ಪರ ಚೊಚ್ಚಲ ಅವಕಾಶ ಪಡೆದ ಯುವ ಕ್ರಿಕೆಟರ್ ವಿವ್ರಾಂತ್ ಶರ್ಮಾ 15 ವರ್ಷಗಳ ಹಳೆಯ ದಾಖಲೆ ಮುರಿದಿದ್ದಾರೆ.

ಈ ಬಾರಿಯ ಐಪಿಎಲ್​ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ತಂಡದಲ್ಲಿ ಹೆಸರಾಂತ ಆಟಗಾರರ ದಂಡೆ ಇದ್ದರು, ತಂಡ ಪ್ಲೇ ಆಫ್​ಗೇರಲು ವಿಫಲವಾಯಿತು. ಆದರೆ ತಂಡದ ಪರ ಚೊಚ್ಚಲ ಅವಕಾಶ ಪಡೆದ ಯುವ ಕ್ರಿಕೆಟರ್ ವಿವ್ರಾಂತ್ ಶರ್ಮಾ 15 ವರ್ಷಗಳ ಹಳೆಯ ದಾಖಲೆ ಮುರಿದಿದ್ದಾರೆ.

2 / 7

ಐಪಿಎಲ್ 2023ರಲ್ಲಿ ಅವರಿಗೆ ಹೆಚ್ಚಿನ ಅವಕಾಶ ಸಿಗಲಿಲ್ಲ. ಎರಡು ಪಂದ್ಯಗಳಲ್ಲಿ ವಿವ್ರಾಂತ್​ಗೆ ಆಡುವ ಅವಕಾಶ ಸಿಕ್ಕಿರಲಿಲ್ಲ. ಮೂರನೇ ಪಂದ್ಯದಲ್ಲಿ ಅವರಿಗೆ ಅವಕಾಶ ಸಿಕ್ಕಿದ್ದು, ಅದನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಸೀಸನ್​ನ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆಡಿದ್ದ ವಿವ್ರಾಂತ್, ಅದ್ಭುತ ಅರ್ಧಶತಕ ಬಾರಿಸಿ ದಾಖಲೆ ಬರೆದಿದ್ದಾರೆ.

3 / 7

ಜಮ್ಮು ಮತ್ತು ಕಾಶ್ಮೀರ ಪರ ದೇಶೀ ಕ್ರಿಕೆಟ್ ಆಡುತ್ತಿರುವ ವಿವ್ರಾಂತ್, ಮುಂಬೈ ವಿರುದ್ಧದ ಪಂದ್ಯದಲ್ಲಿ ಓಪನರ್ ಆಗಿ ಕಣಕ್ಕಿಳಿದು ಕೇವಲ 36 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು.

4 / 7

ಔಟಾಗುವ ಮುನ್ನ 69 ರನ್ ಬಾರಿಸಿದ್ದ ವಿವ್ರಾಂತ್ ಅವರ ಇನ್ನಿಂಗ್ಸ್​ನಲ್ಲಿ 9 ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳು ಸೇರಿದ್ದವು. ಈ ಇನ್ನಿಂಗ್ಸ್ ಮಾಡುವ ಮೂಲಕ15 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು. ಐಪಿಎಲ್ ಇತಿಹಾಸದಲ್ಲಿ ಆಟಗಾರನೊಬ್ಬ ಚೊಚ್ಚಲ ಪಂದ್ಯದಲ್ಲೇ ಅತಿ ಹೆಚ್ಚು ಅಂದರೆ, 69 ರನ್ ಬಾರಿಸಿದ ದಾಖಲೆಯನ್ನು ವಿವ್ರಾಂತ್ ಬರೆದಿದ್ದಾರೆ. ಇದಕ್ಕೂ ಮುನ್ನ ಸ್ವಪ್ನಿಲ್ 60 ರನ್ ಬಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.

5 / 7

ಇನ್ನು 2008 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಮೊದಲ ಪಂದ್ಯವನ್ನಾಡಿದ್ದ ಸ್ವಪ್ನಿಲ್ ಅಸ್ನೋಡ್ಕರ್ 60 ರನ್ ಬಾರಿಸಿ ಮೊದಲ ಪಂದ್ಯದಲ್ಲೇ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ ಎಂಬ ದಾಖಲೆ ಬರೆದಿದ್ದರು.

6 / 7

ಇವರಿಬ್ಬರ ಬಳಿಕ 2008 ರಲ್ಲಿ ತಮ್ಮ ಚೊಚ್ಚಲ ಇನ್ನಿಂಗ್ಸ್‌ನಲ್ಲಿ 58* ರನ್ ಬಾರಿಸಿದ್ದ ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

7 / 7

ಇನ್ನು ನಾಲ್ಕನೇ ಸ್ಥಾನದಲ್ಲಿರುವ ಕನ್ನಡಿಗ ದೇವದತ್ ಪಡಿಕ್ಕಲ್ ದುಬೈನಲ್ಲಿ ನಡೆದ 2020 ರ ಆವೃತ್ತಿಯಲ್ಲಿ ಮೊದಲ ಪಂದ್ಯದಲ್ಲೇ 56 ರನ್ ಬಾರಿಸಿ ದಾಖಲೆ ಬರೆದಿದ್ದರು.

Loading...
Unable to load recommendations.
Follow Us