Updated on: Apr 05, 2023 | 11:45 PM
IPL 2023: ಐಪಿಎಲ್ನ 8ನೇ ಪಂದ್ಯದಲ್ಲಿ 1 ವಿಕೆಟ್ ಪಡೆಯುವ ಮೂಲಕ ಯುಜ್ವೇಂದ್ರ ಚಹಾಲ್ ಹೊಸ ಇತಿಹಾಸ ಬರೆದಿದ್ದಾರೆ. ಅದು ಕೂಡ ಯಾರ್ಕರ್ ಮಾಂತ್ರಿಕ ಲಸಿತ್ ಮಾಲಿಂಗ ಅವರನ್ನು ಹಿಂದಿಕ್ಕುವ ಮೂಲಕ ಎಂಬುದು ವಿಶೇಷ.
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಜಿತೇಶ್ ಶರ್ಮಾ ವಿಕೆಟ್ ಪಡೆಯುವ ಮೂಲಕ ಚಹಾಲ್ ಐಪಿಎಲ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದರು. ಇದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ತಂಡದ ಮಾಜಿ ವೇಗಿ ಲಸಿತ್ ಮಾಲಿಂಗ ದ್ವಿತೀಯ ಸ್ಥಾನದಲ್ಲಿದ್ದರು.
ಇದೀಗ ಒಟ್ಟು 171 ವಿಕೆಟ್ ಕಬಳಿಸುವ ಮೂಲಕ ಯುಜ್ವೇಂದ್ರ ಚಹಾಲ್ ಐಪಿಎಲ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ. ಹಾಗೆಯೇ ಅತೀ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಹಾಗಿದ್ರೆ ಐಪಿಎಲ್ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಟಾಪ್-5 ಬೌಲರ್ಗಳು ಯಾರೆಲ್ಲಾ ಎಂದು ನೋಡೋಣ...
1- ಡ್ವೇನ್ ಬ್ರಾವೊ: ಐಪಿಎಲ್ನಲ್ಲಿ 161 ಪಂದ್ಯಗಳನ್ನಾಡಿರುವ ಬ್ರಾವೊ ಒಟ್ಟು 183 ವಿಕೆಟ್ ಕಬಳಿಸಿ ದಾಖಲೆ ನಿರ್ಮಿಸಿದ್ದಾರೆ.
2- ಯುಜ್ವೇಂದ್ರ ಚಹಾಲ್: ಐಪಿಎಲ್ ಟೂರ್ನಿಯಲ್ಲಿ 133 ಪಂದ್ಯಗಳನ್ನಾಡಿರುವ ಚಹಾಲ್ ಇದುವರೆಗೆ 171 ವಿಕೆಟ್ ಕಬಳಿಸಿ ಮಿಂಚಿದ್ದಾರೆ.
3- ಲಸಿತ್ ಮಾಲಿಂಗ: ಐಪಿಎಲ್ನಲ್ಲಿ 122 ಪಂದ್ಯಗಳನ್ನಾಡಿರುವ ಲಸಿತ್ ಮಾಲಿಂಗ 171 ವಿಕೆಟ್ ಪಡೆಯುವ ಮೂಲಕ ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಅಲಂಕರಿಸಿದ್ದಾರೆ.
4- ಅಮಿತ್ ಮಿಶ್ರಾ: 154 ಐಪಿಎಲ್ ಪಂದ್ಯಗಳನ್ನಾಡಿರುವ ಅಮಿತ್ ಮಿಶ್ರಾ ಒಟ್ಟು 166 ವಿಕೆಟ್ ಪಡೆದಿದ್ದಾರೆ.
5- ರವಿಚಂದ್ರನ್ ಅಶ್ವಿನ್: ಐಪಿಎಲ್ನಲ್ಲಿ 186 ಪಂದ್ಯಗಳನ್ನಾಡಿರುವ ಅಶ್ವಿನ್ ಇದುವರೆಗೆ 159 ವಿಕೆಟ್ ಕಬಳಿಸಿದ್ದಾರೆ.
ಸದ್ಯ ವಿಕೆಟ್ ಅತೀ ಹೆಚ್ಚು ವಿಕೆಟ್ ಟೇಕರ್ಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಯುಜ್ವೇಂದ್ರ ಚಹಾಲ್ಗೆ ಈ ಬಾರಿ ಅಗ್ರಸ್ಥಾನಕ್ಕೇರುವ ಉತ್ತಮ ಅವಕಾಶವಿದೆ. ಇದಕ್ಕಾಗಿ ಬೇಕಿರುವುದು ಕೇವಲ 13 ವಿಕೆಟ್ಗಳು ಮಾತ್ರ. ಹೀಗಾಗಿ ಈ ಬಾರಿಯ ಐಪಿಎಲ್ ಮೂಲಕ ಚಹಾಲ್ ಹೊಸ ದಾಖಲೆ ನಿರ್ಮಿಸಿದರೂ ಅಚ್ಚರಿಪಡಬೇಕಿಲ್ಲ.