IPL 2024: ಅಂಗ್‌ಕ್ರಿಶ್ ರಘುವಂಶಿ ಆಟಕ್ಕೆ 16 ವರ್ಷಗಳ ಹಳೆಯ ದಾಖಲೆ ಉಡೀಸ್..!

Updated on: Apr 04, 2024 | 4:12 PM

IPL 2024 Angkrish Raghuvanshi: ಕೆಆರ್ ಪರ ಮೊದಲ ಐಪಿಎಲ್ ಪಂದ್ಯವನ್ನಾಡಿದ 18ರ ಹರೆಯದ ಅಂಗ್‌ಕ್ರಿಶ್ ರಘುವಂಶಿ 27 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 54 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ ಐಪಿಎಲ್​ನಲ್ಲಿ 16 ವರ್ಷಗಳ ಹಿಂದೆ ದಾಖಲಾಗಿದ್ದ ಅಪರೂಪದ ದಾಖಲೆಯನ್ನು ಮುರಿದರು.

1 / 7
ವಿಶಾಖಪಟ್ಟಣದಲ್ಲಿ ನಡೆದ ಕೆಕೆಆರ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ  16ನೇ ಪಂದ್ಯದಲ್ಲಿ ಕೆಕೆಆರ್ ತಂಡದ ಆಲ್​ರೌಂಡರ್ ಆಟಕ್ಕೆ ಶರಣಾದ ಡೆಲ್ಲಿ ತಂಡ ಬರೋಬ್ಬರಿ 100ಕ್ಕೂ ಅಧಿಕ ರನ್​ಗಳಿಂದ ಸೋಲು ಕಂಡಿತು. ಇತ್ತ ಡೆಲ್ಲಿ ತಂಡವನ್ನು ಬೃಹತ್ ಅಂತರದಿಂದ ಮಣಿಸಿದ ಕೆಕೆಆರ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ವಿಶಾಖಪಟ್ಟಣದಲ್ಲಿ ನಡೆದ ಕೆಕೆಆರ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ 16ನೇ ಪಂದ್ಯದಲ್ಲಿ ಕೆಕೆಆರ್ ತಂಡದ ಆಲ್​ರೌಂಡರ್ ಆಟಕ್ಕೆ ಶರಣಾದ ಡೆಲ್ಲಿ ತಂಡ ಬರೋಬ್ಬರಿ 100ಕ್ಕೂ ಅಧಿಕ ರನ್​ಗಳಿಂದ ಸೋಲು ಕಂಡಿತು. ಇತ್ತ ಡೆಲ್ಲಿ ತಂಡವನ್ನು ಬೃಹತ್ ಅಂತರದಿಂದ ಮಣಿಸಿದ ಕೆಕೆಆರ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

2 / 7

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ಪರ ತಂಡದ ಬ್ಯಾಟಿಂಗ್ ವಿಭಾಗ ಅದ್ಭುತ ಪ್ರದರ್ಶನ ನೀಡಿತು. ಅದರಲ್ಲೂ ಆರಂಭಿಕರಾಗಿ ಕಣಕ್ಕಿಳಿದಿದ್ದ ಸುನೀಲ್ ನರೈನ್ ಸ್ಫೋಟಕ ಬ್ಯಾಟಿಂಗ್ ನಡೆಸಿ 39 ಎಸೆತಗಳಲ್ಲಿ 7 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 85 ರನ್ ಕಲೆಹಾಕಿದರು.

3 / 7

ನರೈನ್ ಜೊತೆಗೆ ಕೆಕೆಆರ್ ಪರ ಮೊದಲ ಐಪಿಎಲ್ ಪಂದ್ಯವನ್ನಾಡಿದ 18ರ ಹರೆಯದ ಅಂಗ್‌ಕ್ರಿಶ್ ರಘುವಂಶಿ 27 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 54 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ ಐಪಿಎಲ್​ನಲ್ಲಿ 16 ವರ್ಷಗಳ ಹಿಂದೆ ದಾಖಲಾಗಿದ್ದ ಅಪರೂಪದ ದಾಖಲೆಯನ್ನು ಮುರಿದರು.

4 / 7

ಡೆಲ್ಲಿ ವಿರುದ್ಧ ಅರ್ಧಶತಕ ಸಿಡಿಸಿದ ಅಂಗ್‌ಕ್ರಿಶ್ ರಘುವಂಶಿ, ಐಪಿಎಲ್‌ನ ಮೊದಲ ಇನ್ನಿಂಗ್ಸ್‌ನಲ್ಲೇ ಅರ್ಧಶತಕ ಸಿಡಿಸಿದ ಅತಿ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆಂಗ್‌ಕ್ರಿಶ್ 18 ವರ್ಷ, 303 ದಿನಗಳಲ್ಲಿ ಈ ಸಾಧನೆ ಮಾಡಿದರು.

5 / 7

ಅಂಗ್‌ಕ್ರಿಶ್ ರಘುವಂಶಿಗೂ ಮೊದಲು ಈ ದಾಖಲೆ ಶ್ರೀವತ್ಸ ಗೋಸ್ವಾಮಿ ಹೆಸರಿನಲ್ಲಿತ್ತು. ಶ್ರೀವತ್ಸ ಗೋಸ್ವಾಮಿ ಅವರು 2008 ರಲ್ಲಿ ತಮ್ಮ ಮೊದಲ ಐಪಿಎಲ್ ಇನ್ನಿಂಗ್ಸ್‌ನಲ್ಲಿ 19 ವರ್ಷ, 1 ದಿನದಲ್ಲಿ ಅರ್ಧಶತಕ ಸಿಡಿಸಿ, ಈ ದಾಖಲೆ ಸೃಷ್ಟಿಸಿದ್ದರು.

6 / 7

ಇದಲ್ಲದೆ ಕೇವಲ 25 ಎಸೆತಗಳಲ್ಲಿ ತಮ್ಮ ಮೊದಲ ಐಪಿಎಲ್ ಅರ್ಧಶತಕ ಬಾರಿಸಿದ ಅಂಗ್‌ಕ್ರಿಶ್ ರಘುವಂಶಿ, ಇದರೊಂದಿಗೆ 200 ಸ್ಟ್ರೈಕ್ ರೇಟ್‌ನೊಂದಿಗೆ ಐಪಿಎಲ್ ಅರ್ಧಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

7 / 7

ಅಲ್ಲದೆ, ಇದು ಐಪಿಎಲ್ ವೃತ್ತಿಜೀವನದ ಮೊದಲ ಇನ್ನಿಂಗ್ಸ್‌ನಲ್ಲಿ ಗಳಿಸಿದ ಎರಡನೇ ವೇಗದ ಅರ್ಧಶತಕ ಎಂಬ ದಾಖಲೆಯನ್ನು ಬರೆಯಿತು. ಇದಕ್ಕೂ ಮುನ್ನ 2008ರಲ್ಲಿ ಜೇಮ್ಸ್ ಹೋಪ್ಸ್ ತಮ್ಮ ಮೊದಲ ಐಪಿಎಲ್ ಇನ್ನಿಂಗ್ಸ್‌ನಲ್ಲಿ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು.

Published On - 4:12 pm, Thu, 4 April 24

Loading...
Unable to load recommendations.
Follow Us