IPL 2024: 20 ಲಕ್ಷ ರೂ. ಮೂಲ ಬೆಲೆಯ ಯುವ ಆಟಗಾರನಿಗೆ ಸಿಕ್ತು 8.40 ಕೋಟಿ ರೂ.

| Updated By: ಝಾಹಿರ್ ಯೂಸುಫ್

Updated on: Dec 19, 2023 | 5:42 PM

IPL 2024 Auction: ಸಮೀರ್ ರಿಝ್ವಿ ಸ್ಪೋಟಕ ಬ್ಯಾಟ್ಸ್​ಮನ್. ಈಗಾಗಲೇ ದೇಶೀಯ ಅಂಗಳದಲ್ಲಿ ತನ್ನ ಬಿರುಸಿನ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಅದರಲ್ಲೂ ಯುಪಿ ಟಿ20 ಲೀಗ್​ನಲ್ಲಿ ಅತೀ ವೇಗದ ಶತಕ ಸಿಡಿಸಿದ ದಾಖಲೆ ಸಮೀರ್ ರಿಝ್ವಿ ಹೆಸರಿನಲ್ಲಿದೆ.

1 / 5
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ಕ್ಕಾಗಿ ನಡೆದ ಮಿನಿ ಹರಾಜಿನಲ್ಲಿ ಉತ್ತರ ಪ್ರದೇಶದ ಯುವ ದಾಂಡಿಗ ಸಮೀರ್ ರಿಝ್ವಿಯನ್ನು ಬರೋಬ್ಬರಿ 8.40 ಕೋಟಿ ರೂ.ಗೆ ಖರೀದಿಸಲಾಗಿದೆ.

2 / 5
20 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಸಮೀರ್​ಗಾಗಿ ಸಿಎಸ್​ಕೆ ಮೊದಲ ಬಿಡ್ ಸಲ್ಲಿಸಿತು. ಇದರ ಬೆನ್ನಲ್ಲೇ ಗುಜರಾತ್ ಟೈಟಾನ್ಸ್ ಕೂಡ ಪೈಪೋಟಿ ಆರಂಭಿಸಿತು. ಉಭಯ ತಂಡಗಳ ಪೈಪೋಟಿಯಿಂದಾಗಿ ಏಕಾಏಕಿ ಯುವ ದಾಂಡಿಗನ ಮೌಲ್ಯ 5 ಕೋಟಿ ರೂ. ದಾಟಿತು.

3 / 5
ಇದಾಗ್ಯೂ ಸಿಎಸ್​ಕೆ ಫ್ರಾಂಚೈಸಿ ಹಿಂದೆ ಸರಿಯಲು ಮುಂದಾಗಲಿಲ್ಲ. ಅತ್ತ ಗುಜರಾತ್ ಟೈಟಾನ್ಸ್ ಕೂಡ ರಿಝ್ವಿಯನ್ನು ಪಡೆಯಲು ಸತತ ಬಿಡ್ಡಿಂಗ್ ನಡೆಸಿತು. ಆದರೆ ಅಂತಿಮ ಹಂತದಲ್ಲಿ 8.40 ಕೋಟಿ ರೂ.ಗೆ ಬಿಡ್ಡಿಂಗ್ ಫೈನಲ್ ಮಾಡುವ ಮೂಲಕ ಸಿಎಸ್​ಕೆ ಫ್ರಾಂಚೈಸಿ ಸಮೀರ್ ರಿಝ್ವಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

4 / 5
20 ವರ್ಷದ ಸಮೀರ್ ರಿಝ್ವಿ ಸ್ಪೋಟಕ ಬ್ಯಾಟ್ಸ್​ಮನ್. ಈಗಾಗಲೇ ದೇಶೀಯ ಅಂಗಳದಲ್ಲಿ ತನ್ನ ಬಿರುಸಿನ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಅದರಲ್ಲೂ ಯುಪಿ ಟಿ20 ಲೀಗ್​ನಲ್ಲಿ ಅತೀ ವೇಗದ ಶತಕ ಸಿಡಿಸಿದ ದಾಖಲೆ ಸಮೀರ್ ರಿಝ್ವಿ ಹೆಸರಿನಲ್ಲಿದೆ. ಈ ಎಲ್ಲಾ ಕಾರಣಗಳಿಂದಾಗಿ ಸಮೀರ್ ರಿಝ್ವಿ ಖರೀದಿಗೆ ಸಿಎಸ್​ಕೆ ಫ್ರಾಂಚೈಸಿ ಹೆಚ್ಚಿನ ಆಸಕ್ತಿವಹಿಸಿತ್ತು.

5 / 5
ಚೆನ್ನೈ ಸೂಪರ್ ಕಿಂಗ್ಸ್ ತಂಡ: ಎಂಎಸ್ ಧೋನಿ, ರವೀಂದ್ರ ಜಡೇಜಾ, ಡೆವೊನ್ ಕಾನ್ವೇ, ರುತುರಾಜ್ ಗಾಯಕ್ವಾಡ್, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಮಥೀಶ ಪತಿರಾಣ, ಸಿಮರ್ಜೀತ್ ಸಿಂಗ್, ಪ್ರಶಾಂತ್ ಸೋಲಂಕಿ, ಮಹೀಶ್ ತೀಕ್ಷಣ, ಅಜಿಂಕ್ಯ ರಹಾನೆ, ಶೇಕ್ ರಶೀದ್, ನಿಶಾಂತ್ ಸಿಂಧು, ಅಜಯ್ ಮಂಡಲ್, ರಚಿನ್ ರವೀಂದ್ರ, ಶಾರ್ದೂಲ್ ಠಾಕೂರ್, ಡೇರಿಲ್ ಮಿಚೆಲ್, ಸಮೀರ್ ರಿಝ್ವಿ