IPL 2024 Auction: ಹೊಸ ತಂಡದ​ ಪಾಲಾದ ಶಾರೂಖ್ ಖಾನ್

Edited By:

Updated on: Dec 19, 2023 | 6:04 PM

IPL 2024 Auction: ಕಳೆದ ಸೀಸನ್​ನಲ್ಲಿ 9 ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್ ಪರ ಆಡಿದ್ದರು. ಆದರೆ ಈ ಬಾರಿ ರಿಲೀಸ್ ಮಾಡಿದ್ದ ಪಂಜಾಬ್ ಫ್ರಾಂಚೈಸಿ ಹರಾಜಿನ ಮೂಲಕ ಮತ್ತೆ ಖರೀದಿಸುವ ಪ್ರಯತ್ನ ನಡೆಸಿತ್ತು. ಆದರೆ ಗುಜರಾತ್ ಟೈಟಾನ್ಸ್​ ತಂಡ ಮಾಸ್ಟರ್ ಪ್ಲ್ಯಾನ್​ ಮುಂದೆ ಈ ಪ್ರಯತ್ನ ವಿಫಲವಾಗಿದೆ.

1 / 6
ಐಪಿಎಲ್ 2023 ರಲ್ಲಿ ಪಂಜಾಬ್ ಕಿಂಗ್ಸ್ ಪರ ಬ್ಯಾಟ್ ಬೀಸಿದ್ದ ಹೊಡಿಬಡಿ ದಾಂಡಿಗ ಈ ಬಾರಿ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿಯಲಿದ್ದಾರೆ. ಐಪಿಎಲ್ ಸೀಸನ್ 17 ಹರಾಜಿನಲ್ಲಿ 40 ಲಕ್ಷ ರೂ. ಮೂಲ ಬೆಲೆಯೊಂದಿಗೆ ಹೆಸರು ನೀಡಿದ್ದ ಶಾರೂಖ್ ಖರೀದಿಗೆ ಪಂಜಾಬ್ ಕಿಂಗ್ಸ್ ಆಸಕ್ತಿವಹಿಸಿತ್ತು.

ಐಪಿಎಲ್ 2023 ರಲ್ಲಿ ಪಂಜಾಬ್ ಕಿಂಗ್ಸ್ ಪರ ಬ್ಯಾಟ್ ಬೀಸಿದ್ದ ಹೊಡಿಬಡಿ ದಾಂಡಿಗ ಈ ಬಾರಿ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿಯಲಿದ್ದಾರೆ. ಐಪಿಎಲ್ ಸೀಸನ್ 17 ಹರಾಜಿನಲ್ಲಿ 40 ಲಕ್ಷ ರೂ. ಮೂಲ ಬೆಲೆಯೊಂದಿಗೆ ಹೆಸರು ನೀಡಿದ್ದ ಶಾರೂಖ್ ಖರೀದಿಗೆ ಪಂಜಾಬ್ ಕಿಂಗ್ಸ್ ಆಸಕ್ತಿವಹಿಸಿತ್ತು.

2 / 6

ಮತ್ತೊಂದೆಡೆ ಗುಜರಾತ್ ಟೈಟಾನ್ಸ್​ ಫ್ರಾಂಚೈಸಿ ಶಾರೂಖ್ ಖಾನ್ ಖರೀದಿಗಾಗಿ ವಿಶೇಷ ಯೋಜನೆ ರೂಪಿಸಿಕೊಂಡಂತಿತ್ತು. ಇದರಿಂದಾಗಿ ಆರಂಭದಲ್ಲೇ ಪಂಜಾಬ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ.

3 / 6

ಪರಿಣಾಮ ಶಾರೂಖ್ ಖಾನ್ ಮೌಲ್ಯವು ಕ್ಷಣಾರ್ಧದಲ್ಲೇ 5 ಕೋಟಿ ದಾಟಿತು. ಇದಾಗ್ಯೂ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಹಿಂದೆ ಸರಿಯಲು ಮುಂದಾಗಿರಲಿಲ್ಲ. ಇತ್ತ ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ಕೂಡ ಮಧ್ಯಮ ಕ್ರಮಾಂಕದ ಬ್ಯಾಟರ್​ಗಾಗಿ ಸತತ ಬಿಡ್ ಸಲ್ಲಿಸಿತು.

4 / 6

ಅಂತಿಮವಾಗಿ ಪಂಜಾಬ್ ಕಿಂಗ್ಸ್​ ಹಿಂದೆ ಸರಿದಿದೆ. ಈ ಮೂಲಕ 7.40 ಕೋಟಿ ರೂ.ಗೆ ಶಾರೂಖ್ ಖಾನ್​ರನ್ನು ತಮ್ಮದಾಗಿಸಿಕೊಳ್ಳುವಲ್ಲಿ ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ಯಶಸ್ವಿಯಾಗಿದೆ.

5 / 6

ಅಂದಹಾಗೆ ಕಳೆದ ಸೀಸನ್​ನಲ್ಲಿ 9 ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್ ಪರ ಆಡಿದ್ದರು. ಆದರೆ ಈ ಬಾರಿ ರಿಲೀಸ್ ಮಾಡಿದ್ದ ಪಂಜಾಬ್ ಫ್ರಾಂಚೈಸಿ ಹರಾಜಿನ ಮೂಲಕ ಮತ್ತೆ ಖರೀದಿಸುವ ಪ್ರಯತ್ನ ಮಾಡಿತ್ತು. ಆದರೆ ಈ ಪ್ರಯತ್ನ ವಿಫಲವಾಗಿದೆ. ಇತ್ತ 7.40 ಕೋಟಿಗೆ ಗುಜರಾತ್ ಟೈಟಾನ್ಸ್​ ತಮಿಳುನಾಡು ಬ್ಯಾಟರ್​ನನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ.

6 / 6

ಗುಜರಾತ್ ಟೈಟಾನ್ಸ್ ತಂಡ: ಡೇವಿಡ್ ಮಿಲ್ಲರ್, ಶುಭ್​ಮನ್ ಗಿಲ್, ಮ್ಯಾಥ್ಯೂ ವೇಡ್, ವೃದ್ಧಿಮಾನ್ ಸಹಾ, ಕೇನ್ ವಿಲಿಯಮ್ಸನ್, ಅಭಿನವ್ ಮನೋಹರ್, ಬಿ ಸಾಯಿ ಸುದರ್ಶನ್, ದರ್ಶನ್ ನಲ್ಕಂಡೆ, ವಿಜಯ್ ಶಂಕರ್, ಜಯಂತ್ ಯಾದವ್, ರಾಹುಲ್ ತೆವಾಟಿಯಾ, ಮೊಹಮ್ಮದ್ ಶಮಿ, ನೂರ್ ಅಹ್ಮದ್, ಆರ್ ಸಾಯಿ ಕಿಶೋರ್, ರಶೀದ್ ಖಾನ್, ಜೋಶ್ ಲಿಟಲ್, ಮೋಹಿತ್ ಶರ್ಮಾ, ಶಾರೂಖ್ ಖಾನ್.

TV9 Web

TV9 Kannada

Read More
Loading...
Unable to load recommendations.
Follow Us