IPL 2024: ‘ತಂಡದಿಂದ ಹೊರಗಿಡಿ’; ಧೋನಿ ವಿರುದ್ಧ ಗುಡುಗಿದ ಟರ್ಬನೇಟರ್..!
IPL 2024: ಗೆಲುವಿನ ಹೊರತಾಗಿಯೂ ಚೆನ್ನೈ ತಂಡದ ಮಾಜಿ ನಾಯಕ ಎಂಎಸ್ ಧೋನಿ ವಿರುದ್ಧ ತಂಡದ ಮಾಜಿ ಆಟಗಾರ ಹರ್ಭಜನ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ. ಸತತ ವಿಕೆಟ್ಗಳ ಪತನದ ನಡುವೆವೂ ಧೋನಿ ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬರದಿರುವುದು ಟರ್ಬನೇಟರ್ ಕೋಪಕ್ಕೆ ಕಾರಣವಾಗಿದೆ.
1 / 8
ನಿನ್ನೆ ನಡೆದ ಐಪಿಎಲ್ 53 ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 28 ರನ್ಗಳಿಂದ ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಗೆಲುವಿಗೆ 167 ರನ್ಗಳ ಸಾಧಾರಣ ಗುರಿ ಪಡೆದ ಹೊರತಾಗಿಯೂ ಪಂಜಾಬ್ಗೆ ಗೆಲುವು ದಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ.
2 / 8
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ ತಂಡ ನಿಯಮಿತ ಅಂತರದಲ್ಲಿ ವಿಕೆಟ್ ಕಳೆದುಕೊಳ್ಳುತ್ತ ಅಲ್ಪ ಮೊತ್ತ ಕಲೆಹಾಕುವ ಆತಂಕದಲ್ಲಿತ್ತು. ಆದರೆ ತಂಡದ ಪರ ಏಕಾಂಗಿಯಾಗಿ ಹೋರಾಡಿದ ರವೀಂದ್ರ ಜಡೇಜಾ ಗೆಲುವಿನ ಇನ್ನಿಂಗ್ಸ್ ಆಡಿದರು. ಹಾಗೆಯೇ ಬೌಲಿಂಗ್ನಲ್ಲೂ ಕಮಾಲ್ ಮಾಡಿದರು. ಇದು ಚೆನ್ನೈ ತಂಡವನ್ನು ಗೆಲುವಿನ ದಡ ಸೇರಿತು.
3 / 8
ಈ ಗೆಲುವಿನ ಹೊರತಾಗಿಯೂ ಚೆನ್ನೈ ತಂಡದ ಮಾಜಿ ನಾಯಕ ಎಂಎಸ್ ಧೋನಿ ವಿರುದ್ಧ ತಂಡದ ಮಾಜಿ ಆಟಗಾರ ಹರ್ಭಜನ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ. ಸತತ ವಿಕೆಟ್ಗಳ ಪತನದ ನಡುವೆವೂ ಧೋನಿ ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬರದಿರುವುದು ಟರ್ಬನೇಟರ್ ಕೋಪಕ್ಕೆ ಕಾರಣವಾಗಿದೆ.
4 / 8
ವಾಸ್ತವವಾಗಿ ಚೆನ್ನೈ ತಂಡ 101 ರನ್ಗಳಿಗೆ 5ನೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಹೀಗಾಗಿ ಧೋನಿ ಬ್ಯಾಟಿಂಗ್‌ಗೆ ಬರುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದರು. ಆದರೆ ಧೋನಿ, ಸ್ಯಾಂಟ್ನರ್ ಅವರನ್ನು ಬ್ಯಾಟಿಂಗ್‌ಗೆ ಕಳುಹಿಸಿದರು. ಸ್ಯಾಂಟ್ನರ್ ಔಟಾದ ಬಳಿಕ ಶಾರ್ದೂಲ್ ಠಾಕೂರ್ ಬ್ಯಾಟಿಂಗ್‌ಗೆ ಬಂದರು.
5 / 8
ಈ ಇಬ್ಬರು ಹೇಳಿಕೊಳ್ಳುವಂತಹ ಕೊಡುಗೆ ನೀಡಲಿಲ್ಲ. ಈ ಇಬ್ಬರ ವಿಕೆಟ್ ಪತನದ ಬಳಿಕ ಧೋನಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದರು. ತಂಡ ಸಂಕಷ್ಟದ ಸಮಯದಲ್ಲಿದ್ದಾಗ ಧೋನಿ ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬರದಿರುವುದು ಹರ್ಭಜನ್ರನ್ನು ಅಸಮಾಧಾನಗೊಳ್ಳುವಂತೆ ಮಾಡಿದೆ.
6 / 8
ಈ ಕುರಿತು ಮಾತನಾಡಿದ ಟೀಂ ಇಂಡಿಯಾದ ಮಾಜಿ ಸ್ಪಿನ್ ಬೌಲರ್ ಹರ್ಭಜನ್ ಸಿಂಗ್, ಈ ಸೀಸನ್‌ನಲ್ಲಿ ಧೋನಿ ಸಿಎಸ್‌ಕೆ ಪರ ವೇಗವಾಗಿ ರನ್ ಗಳಿಸಿದ್ದಾರೆ. ಆದರೆ ಪಂಜಾಬ್ ಕಿಂಗ್ಸ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಅವರು 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ನಿರ್ಧಾರ ಸರಿ ಇರಲಿಲ್ಲ. ಈ ಪಂದ್ಯದಲ್ಲಿ ಸಿಎಸ್‌ಕೆ ಗೆದ್ದಿರಬಹುದು. ಆದರೆ ನಾನು ಧೋನಿ ಮಾಡಿದ್ದು ತಪ್ಪು ಎಂದೇ ಹೇಳುತ್ತೇನೆ.
7 / 8
ಧೋನಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದಾದರೆ ಅವರು ಇನ್ನು ಮುಂದೆ ತಂಡದಲ್ಲಿ ಆಡಬಾರದು. ಅವರ ಬದಲಿಗೆ ಸಿಎಸ್‌ಕೆ ಫ್ರಾಂಚೈಸಿ ವೇಗದ ಬೌಲರ್ನನ್ನು ಆಡಿಸಬೇಕು ಎಂದು ಭಜ್ಜಿ ಹೇಳಿದ್ದಾರೆ.
8 / 8
ಇನ್ನು ಪಂಜಾಬ್ ವಿರುದ್ಧ ಮೊದಲ ಬಾರಿಗೆ ಧೋನಿ 9 ನೇ ಸ್ಥಾನದಲ್ಲಿ ಬ್ಯಾಟಿಂಗ್‌ಗೆ ಬಂದರೂ ವಿಶೇಷವಾದುದ್ದು ಏನನ್ನು ಮಾಡಲು ಸಾಧ್ಯವಾಗಲಿಲ್ಲ. ಹರ್ಷಲ್ ಪಟೇಲ್ ಎಸೆದ ಮೊದಲ ಎಸೆತದಲ್ಲಿ ಮಹಿ ಔಟಾದರು.