IPL 2024: ಗುಜರಾತ್ ತಂಡಕ್ಕೆ ಬಿಗ್ ಶಾಕ್; ಮೂವರು ಸ್ಟಾರ್ ಆಟಗಾರರಿಗೆ ಇಂಜುರಿ!

|

Updated on: Jan 15, 2024 | 3:06 PM

IPL 2024: 2024 ರ ಐಪಿಎಲ್ ಹರಾಜಿಗೂ ಮುನ್ನ ತಂಡದ ನಾಯಕನನೇ ಕೈಬಿಟ್ಟು ಸಖತ್ ಸುದ್ದಿ ಮಾಡಿದ್ದ ಗುಜರಾತ್ ಟೈಟಾನ್ಸ್ ತಂಡಕ್ಕೆ ಇದೀಗ ಐಪಿಎಲ್ ಆರಂಭಕ್ಕೂ ಮುನ್ನ ಬಿಗ್ ಶಾಕ್ ಎದುರಾಗಿದೆ. ತಂಡದ ಮೂವರು ಸ್ಟಾರ್ ಆಟಗಾರರು ಇಂಜುರಿಯಿಂದ ಬಳಲುತ್ತಿದ್ದು ತಂಡದ ಆಧಾರ ಸ್ತಂಭವಾಗಿರುವ ಈ ಆಟಗಾರರು ಐಪಿಎಲ್​ಗೆ ಅಲಭ್ಯರಾದರೆ ಗುಜರಾತ್ ತಂಡಕ್ಕೆ ಸೋಲು ಕಟ್ಟಿಟ್ಟ ಬುತ್ತಿಯಾಗಿದೆ.

1 / 8
2024 ರ ಐಪಿಎಲ್ ಹರಾಜಿಗೂ ಮುನ್ನ ತಂಡದ ನಾಯಕನನೇ ಕೈಬಿಟ್ಟು ಸಖತ್ ಸುದ್ದಿ ಮಾಡಿದ್ದ ಗುಜರಾತ್ ಟೈಟಾನ್ಸ್ ತಂಡಕ್ಕೆ ಇದೀಗ ಐಪಿಎಲ್ ಆರಂಭಕ್ಕೂ ಮುನ್ನ ಬಿಗ್ ಶಾಕ್ ಎದುರಾಗಿದೆ. ತಂಡದ ಮೂವರು ಸ್ಟಾರ್ ಆಟಗಾರರು ಇಂಜುರಿಯಿಂದ ಬಳಲುತ್ತಿದ್ದು ತಂಡದ ಆಧಾರ ಸ್ತಂಭವಾಗಿರುವ ಈ ಆಟಗಾರರು ಐಪಿಎಲ್​ಗೆ ಅಲಭ್ಯರಾದರೆ ಗುಜರಾತ್ ತಂಡಕ್ಕೆ ಸೋಲು ಕಟ್ಟಿಟ್ಟ ಬುತ್ತಿಯಾಗಿದೆ.

2 / 8
ವಾಸ್ತವವಾಗಿ ಐಪಿಎಲ್ ಹರಾಜಿಗೂ ಮುನ್ನ ತಂಡದ ಖಾಯಂ ನಾಯಕ ಹಾರ್ದಿಕ್ ಪಾಂಡ್ಯರನ್ನು ಮುಂಬೈ ಇಂಡಿಯನ್ಸ್ ತಂಡಕ್ಕೆ ಬಿಟ್ಟುಕೊಟ್ಟಿದ್ದ ಗುಜರಾತ್, ಆ ಬಳಿಕ ತಂಡದ ನಾಯಕತ್ವವನ್ನು ಶುಭ್​ಮನ್​ ಗಿಲ್​ಗೆ ಹಸ್ತಾಂತರಿಸಿತ್ತು. ಆ ನಂತರ ಹರಾಜಿಗೆ ಎಂಟ್ರಿಕೊಟ್ಟಿದ್ದ ಈ ಫ್ರಾಂಚೈಸಿ ಹರಾಜಿನಲ್ಲೂ ಯಾವುದೇ ಸ್ಟಾರ್ ಕ್ರಿಕೆಟಿಗನನ್ನು ಖರೀದಿಸಲಿಲ್ಲ.

3 / 8
ತಂಡದಲ್ಲಿ ಈಗಾಗಲೇ ಇರುವವರಿಂದಲೇ ಅದ್ಭುತ ಪ್ರದರ್ಶನವನ್ನು ಹೊರತೆಗೆಯುವ ಗುರಿ ಹಾಕಿಕೊಂಡಿದ್ದ ಗುಜರಾತ್ ತಂಡಕ್ಕೆ ಈಗ ಆಟಗಾರರ ಇಂಜುರಿಯಿಂದ ಸಂಕಷ್ಟಕ್ಕೆ ಸಿಲುಕಿದೆ. ಇದೀಗ ಗಾಯಗೊಂಡಿರುವ ಮೂವರು ಪ್ರಮುಖ ಆಟಗಾರರೆಂದರೆ ಕೇನ್ ವಿಲಿಯಮ್ಸನ್, ಮೊಹಮ್ಮದ್ ಶಮಿ ಹಾಗೂ ರಶೀದ್ ಖಾನ್.

4 / 8
ಕಳೆದ ಆವೃತ್ತಿಯಲ್ಲಿ ಗುಜರಾತ್ ತಂಡದ ಉಪನಾಯಕತ್ವವನ್ನು ನಿರ್ವಹಿಸಿದ್ದ ರಶೀದ್ ಖಾನ್ ಸದ್ಯ ಇಂಜುರಿಯಿಂದ ಬಳಲುತ್ತಿದ್ದಾರೆ. ಏಕದಿನ ವಿಶ್ವಕಪ್ ಬಳಿಕ ತಂಡದಿಂದ ಹೊರಗುಳಿದಿರುವ ಅವರು ಭಾರತ ವಿರುದ್ಧದ ಸರಣಿಯಿಂದಲೂ ಹೊರಗುಳಿದಿದ್ದಾರೆ.

5 / 8
ಏತನ್ಮಧ್ಯೆ, ಟೀಂ ಇಂಡಿಯಾ ಮತ್ತು ಗುಜರಾತ್ ಟೈಟಾನ್ಸ್‌ನ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಕೂಡ ವಿಶ್ವಕಪ್ ನಂತರ ಮೈದಾನಕ್ಕೆ ಇಳಿದಿಲ್ಲ. ಪ್ರಸ್ತುತ ಅಫ್ಘಾನ್ ವಿರುದ್ಧದ ಟಿ20 ಸರಣಿಯಿಂದ ಹೊರಗಿರುವ ಶಮಿ, ಮುಂಬರುವ ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಿಗೂ ಆಯ್ಕೆಯಾಗಿಲ್ಲ.

6 / 8
ಇದೀಗ ಕೇನ್ ವಿಲಿಯಮ್ಸನ್ ರೂಪದಲ್ಲಿ ತಂಡಕ್ಕೆ ಮೂರನೇ ಬಿದ್ದಿದೆ. ಗಾಯದ ಸಮಸ್ಯೆಯಿಂದಾಗಿ ವಿಲಿಯಮ್ಸನ್ ಈಗ ಪಾಕಿಸ್ತಾನ ಸರಣಿಯಿಂದ ಹೊರಗುಳಿದಿದ್ದಾರೆ ಎಂಬ ಅಪ್‌ಡೇಟ್‌ ಬರುತ್ತಿದೆ.2023ರ ಐಪಿಎಲ್​ನ ಮೊದಲ ಪಂದ್ಯದಲ್ಲೇ ಇಂಜುರಿಗೆ ತುತ್ತಾಗಿದ್ದ ಕೇನ್ ಆ ನಂತರ ಐಪಿಎಲ್​ನಿಂದಲೇ ಹೊರಬಿದ್ದಿದ್ದರು.

7 / 8
ಇದಾದ ನಂತರ ಅವರ ಮೊಣಕಾಲಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ನಂತರ 2023 ರ ವಿಶ್ವಕಪ್​ನಲ್ಲಿ ತಂಡದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಪಾಕಿಸ್ತಾನ ವಿರುದ್ಧ ಸ್ವದೇಶದಲ್ಲಿ ನಡೆಯುತ್ತಿರುವ ಟಿ20 ಸರಣಿಯ ಎರಡನೇ ಟಿ20ಯಲ್ಲಿ ಕೇನ್ ಮತ್ತೊಮ್ಮೆ ಗಾಯಗೊಂಡಿದ್ದಾರೆ.

8 / 8
ಮುಂಬರುವ ಪಂದ್ಯಗಳಲ್ಲಿ ಕೇನ್ ಆಡುವ ಬಗ್ಗೆ ಅನುಮಾನವಿದೆ. ಏಕೆಂದರೆ ಈ ವರ್ಷ ಜೂನ್ 1 ರಿಂದ ಪ್ರಾರಂಭವಾಗುವ ಟಿ20 ವಿಶ್ವಕಪ್‌ಗೆ ವಿಲಿಯಮ್ಸನ್ ತನ್ನನ್ನು ತಾನು ಫಿಟ್ ಆಗಿಟ್ಟುಕೊಳ್ಳಲು ಚಿಂತಿಸುತ್ತಿದ್ದಾರೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ, ಅವರು ಐಪಿಎಲ್ 2024 ರಿಂದ ತಮ್ಮ ಹೆಸರನ್ನು ಹಿಂಪಡೆಯುವ ಸಾಧ್ಯತೆಗಳಿವೆ. ಅದೇ ಸಮಯದಲ್ಲಿ, ಪಾಕಿಸ್ತಾನ ಸರಣಿಯ ನಂತರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಅವರು ಆಡುವ ಬಗ್ಗೆ ಸಸ್ಪೆನ್ಸ್ ಇದೆ.