IPL 2024: ಹೀಗಾದ್ರೆ RCB ಮತ್ತು CSK, ಎರಡೂ ತಂಡಗಳು ಪ್ಲೇಆಫ್ಗೆ..!
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2024) 68ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ. ಮೇ 18 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಉಭಯ ತಂಡಗಳ ಪಾಲಿಗೆ ನಿರ್ಣಾಯಕ. ಹೀಗಾಗಿ ಈ ಮ್ಯಾಚ್ನಲ್ಲಿ ರಣರೋಚಕ ಹೋರಾಟವನ್ನು ನಿರೀಕ್ಷಿಸಬಹುದು.
1 / 7
ಐಪಿಎಲ್ (IPL 2024) ಸೀಸನ್ 17 ರ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಇನ್ನು ಉಳಿದಿರುವುದು ಕೇವಲ 5 ಮ್ಯಾಚ್ಗಳು ಮಾತ್ರ. ಈ ಐದು ಪಂದ್ಯಗಳಲ್ಲಿ ಪ್ಲೇಆಫ್ ಆಡಲಿರುವ 4 ತಂಡಗಳಾವುವು ಎಂಬುದು ನಿರ್ಧಾರವಾಗಲಿದೆ. ಈಗಾಗಲೇ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಪ್ಲೇಆಫ್ಗೆ ಎಂಟ್ರಿ ಕೊಟ್ಟಿದೆ. ಇನ್ನುಳಿದಿರುವ 2 ಸ್ಥಾನಗಳಿಗಾಗಿ 3 ತಂಡಗಳ ನಡುವೆ ನೇರ ಪೈಪೋಟಿ ಇದೆ.
2 / 7
ಇಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ 2 ಪಂದ್ಯಗಳಿದ್ದು, ಈ ಪಂದ್ಯಗಳಲ್ಲಿ ಒಂದು ಮ್ಯಾಚ್ನಲ್ಲಿ ಜಯ ಸಾಧಿಸಿ 16 ಅಂಕಗಳೊಂದಿಗೆ ಪ್ಲೇಆಫ್ ಪ್ರವೇಶಿಸುವ ಅವಕಾಶವಿದೆ. ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಣ ಪಂದ್ಯವು ಉಭಯ ತಂಡಗಳ ಪಾಲಿಗೆ ಪ್ಲೇಆಫ್ ಪ್ರವೇಶಿಸಲು ನಿರ್ಣಾಯಕವಾಗಿದೆ.
3 / 7
ಇಂಟ್ರೆಸ್ಟಿಂಗ್ ವಿಷಯ ಎಂದರೆ, ಆರ್ಸಿಬಿ ಮತ್ತು ಸಿಎಸ್ಕೆ ತಂಡಗಳು ನಿರ್ಣಾಯಕ ಪಂದ್ಯವಾಡುತ್ತಿದ್ದರೂ ಉಭಯ ತಂಡಗಳಿಗೂ ಪ್ಲೇಆಫ್ ಪ್ರವೇಶಿಸಲು ಅವಕಾಶವಿದೆ. ಅಂದರೆ ಇಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಫಲಿತಾಂಶದ ಮೇಲೆ ಇದು ನಿರ್ಧಾರವಾಗಲಿದೆ.
4 / 7
ಸನ್ರೈಸರ್ಸ್ ಹೈದರಾಬಾದ್ ತಂಡವು ಗುಜರಾತ್ ಟೈಟಾನ್ಸ್ ಹಾಗೂ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯಗಳಲ್ಲಿ ಸೋತರೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್ಗೆ ಎಂಟ್ರಿ ಕೊಡಲಿದೆ. ಅದು ಹೇಗೆಂದರೆ...
5 / 7
+0.406 ನೆಟ್ ರನ್ ರೇಟ್ ಹೊಂದಿರುವ ಎಸ್ಆರ್ಹೆಚ್ ತಂಡವು ಮುಂದಿನ 2 ಮ್ಯಾಚ್ಗಳಲ್ಲಿ ಸೋತರೆ ನೆಟ್ ರನ್ ರೇಟ್ ಕಡಿಮೆಯಾಗಲಿದೆ. ಇದೇ ವೇಳೆ +0.387 ನೆಟ್ ರನ್ ರೇಟ್ ಹೊಂದಿರುವ ಆರ್ಸಿಬಿ ಸಿಎಸ್ಕೆ ತಂಡವನ್ನು 11 ಎಸೆತಗಳು ಬಾಕಿಯಿರುವಂತೆ ಅಥವಾ 18 ರನ್ಗಳಿಂದ ಮಣಿಸಿದರೆ ನೆಟ್ ರನ್ ರೇಟ್ +0.530 ಕ್ಕೇರಲಿದೆ. ಅತ್ತ ಸಿಎಸ್ಕೆ ತಂಡ ಸೋತರೂ +0.400 ಪ್ಲಸ್ ನೆಟ್ ರನ್ ರೇಟ್ ಹೊಂದಿರಲಿದೆ.
6 / 7
ಇದರಿಂದ ಆರ್ಸಿಬಿ ತಂಡವು ಅಂಕ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಲಿದ್ದು, ಅತ್ತ ಸಿಎಸ್ಕೆ ತಂಡವು 4ನೇ ಸ್ಥಾನ ಅಲಂಕರಿಸಲಿದೆ. ಇನ್ನು 2 ಮ್ಯಾಚ್ಗಳಲ್ಲಿ ಸೋತರೆ ಎಸ್ಆರ್ಹೆಚ್ ತಂಡವು ಅಂಕ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಕುಸಿಯಲಿದೆ. ಈ ಮೂಲಕ ಆರ್ಸಿಬಿ ಮತ್ತು ಸಿಎಸ್ಕೆ ತಂಡಗಳು ಪ್ಲೇಆಫ್ ಪ್ರವೇಶಿಸಬಹುದು.
7 / 7
ಈ ಲೆಕ್ಕಾಚಾರದಂತೆ ಆರ್ಸಿಬಿ ಮತ್ತು ಸಿಎಸ್ಕೆ ತಂಡಗಳು ಪ್ಲೇಆಫ್ ಪ್ರವೇಶಿಸಿದರೆ, ಎಲಿಮಿನೇಟರ್ ಪಂದ್ಯದಲ್ಲಿ ಮತ್ತೊಮ್ಮೆ ಮುಖಾಮುಖಿಯಾಗಲಿದೆ. ಏಕೆಂದರೆ ಪ್ಲೇಆಫ್ ನಿಯಮದ ಪ್ರಕಾರ ಅಂಕ ಪಟ್ಟಿಯಲ್ಲಿ 3ನೇ ಮತ್ತು 4ನೇ ಸ್ಥಾನಗಳಲ್ಲಿರುವ ತಂಡಗಳು ಎಲಿಮಿನೇಟರ್ ಪಂದ್ಯವಾಡಲಿದ್ದು, ಇದರಲ್ಲಿ ಗೆದ್ದ ತಂಡ 2ನೇ ಕ್ವಾಲಿಫೈಯರ್ಗೆ ಅರ್ಹತೆ ಪಡೆಯಲಿದೆ. ಅದರಂತೆ ಆರ್ಸಿಬಿ ಮತ್ತು ಸಿಎಸ್ಕೆ ತಂಡಗಳು ಪ್ಲೇಆಫ್ ಪ್ರವೇಶಿಸಿ ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆಯಾ ಕಾದು ನೋಡಬೇಕಿದೆ.
Published On - 8:23 am, Thu, 16 May 24