IPL 2024: ಲಕ್ನೋ ಪರ ದಾಖಲೆ ಬರೆದ ಕನ್ನಡಿಗ ಕೆಎಲ್ ರಾಹುಲ್..!

|

Updated on: Apr 08, 2024 | 6:27 PM

IPL 2024 KL Rahul: ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ತಂಡ 5 ವಿಕೆಟ್ ಕಳೆದುಕೊಂಡು 163 ರನ್ ಕಲೆಹಾಕಿತು. ತಂಡದ ಪರ ಸ್ಟೋಯ್ನಿಸ್ ಅರ್ಧಶತಕದ ಇನ್ನಿಂಗ್ಸ್ ಆಡಿದರೆ, ನಾಯಕನ ಆಟ ಆಡಿದ ರಾಹುಲ್ 33 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ ರಾಹುಲ್ ಲಕ್ನೋ ಪರ ಅಪರೂಪದ ದಾಖಲೆ ಕೂಡ ನಿರ್ಮಿಸಿದರು.

1 / 6
ಲಕ್ನೋದ ಏಕನಾ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ 33 ರನ್​ಗಳ ಅಮೋಘ ಜಯ ಸಾಧಿಸಿದ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್‌ಜೈಂಟ್ಸ್ ತಂಡ ಲೀಗ್​ನಲ್ಲಿ ಸತತ ಮೂರನೇ ಗೆಲುವು ದಾಖಲಿಸಿದೆ. ಇದರೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ.

2 / 6
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ತಂಡ 5 ವಿಕೆಟ್ ಕಳೆದುಕೊಂಡು 163 ರನ್ ಕಲೆಹಾಕಿತು. ತಂಡದ ಪರ  ಸ್ಟೋಯ್ನಿಸ್ ಅರ್ಧಶತಕದ ಇನ್ನಿಂಗ್ಸ್ ಆಡಿದರೆ, ನಾಯಕನ ಆಟ ಆಡಿದ ರಾಹುಲ್ 33 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ ಲಕ್ನೋ ಪರ ಅಪರೂಪದ ದಾಖಲೆ ಕೂಡ ನಿರ್ಮಿಸಿದರು.

3 / 6
ಗುಜರಾತ್ ಟೈಟಾನ್ಸ್ ವಿರುದ್ಧ 31 ಎಸೆತಗಳನ್ನಾಡಿದ್ದ ರಾಹುಲ್ 3 ಬೌಂಡರಿಗಳ ಸಹಿತ 33 ರನ್ ಗಳಿಸಿದರು. ಇದರೊಂದಿಗೆ ಲಕ್ನೋ ಸೂಪರ್‌ಜೈಂಟ್ಸ್ ಪರ 1000 ರನ್ ಪೂರೈಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು.

4 / 6
ಈ ಪಂದ್ಯಕ್ಕೂ ಮುನ್ನ ರಾಹುಲ್ ಲಕ್ನೋ ಪರ 983 ರನ್ ಬಾರಿಸಿದ್ದರು.ಹೀಗಾಗಿ 1000 ರನ್ ಗಡಿ ತಲುಪಲು ರಾಹುಲ್​ಗೆ 17 ರನ್‌ಗಳ ಅಗತ್ಯವಿತ್ತು. ಗುಜರಾತ್ ವಿರುದ್ಧ  17ನೇ ರನ್ ಬಾರಿಸಿದ ಕೂಡಲೇ ರಾಹುಲ್ 1000 ರನ್ ಗಡಿ ದಾಟಿದರು.

5 / 6
ರಾಹುಲ್ ಇದುವರೆಗೆ ಲಕ್ನೋ ಸೂಪರ್ ಜೈಂಟ್ಸ್ ಪರ 28 ಪಂದ್ಯಗಳನ್ನು ಆಡಿದ್ದು, ಈ 28 ಪಂದ್ಯಗಳಲ್ಲಿ 42.33ರ ಸರಾಸರಿಯಲ್ಲಿ 1016 ರನ್ ಬಾರಿಸಿದ್ದಾರೆ. ಇದರಲ್ಲಿ 2 ಶತಕ ಹಾಗೂ 7 ಅರ್ಧಶತಕಗಳೂ ಸೇರಿವೆ.

6 / 6
ಏತನ್ಮಧ್ಯೆ, ಕೆಎಲ್ ರಾಹುಲ್ ಐಪಿಎಲ್ 17 ನೇ ಸೀಸನ್‌ನಲ್ಲಿ ಇದುವರೆಗೆ 31.5 ಸರಾಸರಿಯಲ್ಲಿ 126 ರನ್ ಬಾರಿಸಿದ್ದಾರೆ. ಇದರಲ್ಲಿ 1 ಅರ್ಧಶತಕವೂ ಸೇರಿದೆ.