IPL 2024: ಮೊದಲಾರ್ಧದ ಐಪಿಎಲ್​ನಲ್ಲಿ ಆರ್​ಸಿಬಿ ಎಷ್ಟು ಪಂದ್ಯಗಳನ್ನು ಆಡಲಿದೆ? ಇಲ್ಲಿದೆ ವೇಳಾಪಟ್ಟಿ

|

Updated on: Feb 22, 2024 | 6:28 PM

RCB IPL 2024 Schedule: ಮಾರ್ಚ್​ 21 ರಿಂದ ಆರಂಭವಾಗಲಿರುವ ಐಪಿಎಲ್​ನ ಉದ್ಘಾಟನಾ ಪಂದ್ಯದಲ್ಲೇ ಆರ್​ಸಿಬಿ ಕಣಕ್ಕಿಳಿಯವುದನ್ನು ನಾವು ಕಾಣಬಹುದಾಗಿದೆ. ಮೊದಲಾರ್ಧದಲ್ಲಿ ನಡೆಯುವ ಒಟ್ಟು 21 ಪಂದ್ಯಗಳಲ್ಲಿ ಆರ್​ಸಿಬಿ ತಂಡ ಐದು ಪಂದ್ಯಗಳನ್ನು ಆಡಲಿದೆ. ಅದರ ಪೂರ್ಣ ವಿವರ ಇಲ್ಲಿದೆ.

1 / 6
ಐಪಿಎಲ್ 2024 ರ ಮೊದಲಾರ್ಧದ ವೇಳಾಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಗಿದೆ. ಅದರಂತೆ 17 ದಿನಗಳ ಕಾಲ ನಡೆಯುವ ಮೊದಲಾರ್ಧದಲ್ಲಿ ಒಟ್ಟು 21 ಪಂದ್ಯಗಳು ನಡೆಯಲ್ಲಿವೆ. ಈ 21 ಪಂದ್ಯಗಳ ಪೈಕಿ ಆರ್​ಸಿಬಿ ತಂಡ ಬರೋಬ್ಬರಿ 5 ಪಂದ್ಯಗಳನ್ನು ಆಡಲಿದೆ.

2 / 6
ಮಾರ್ಚ್​ 21 ರಿಂದ ಆರಂಭವಾಗಲಿರುವ ಐಪಿಎಲ್​ನ ಉದ್ಘಾಟನಾ ಪಂದ್ಯದಲ್ಲೇ ಆರ್​ಸಿಬಿ ಕಣಕ್ಕಿಳಿಯವುದನ್ನು ನಾವು ಕಾಣಬಹುದಾಗಿದೆ. ಅದರಂತೆ ಲೀಗ್​ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತಮಿಳು ನಾಡಿನ ಎಂ ಚಿದಂಬರಂ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

3 / 6
ತನ್ನ ಎರಡನೇ ಪಂದ್ಯವನ್ನು ಮಾರ್ಚ್​ 25 ರಂದು ಆಡಲಿರುವ ಆರ್​ಸಿಬಿ, ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಬೆಂಗಳೂರಿನಲ್ಲಿ ಎದುರಿಸಲಿದೆ. ಈ ಪಂದ್ಯ ಕೂಡ ಸಂಜೆ 7.30 ಕ್ಕೆ ಆರಂಭವಾಗಲಿದೆ.

4 / 6
ಮಾರ್ಚ್​ 29 ರಂದು ಕೆಕೆಆರ್ ವಿರುದ್ಧ ಆರ್​ಸಿಬಿ ತನ್ನ ಮೂರನೇ ಪಂದ್ಯವನ್ನು ಆಡಲಿದೆ. ಈ ಪಂದ್ಯಕ್ಕೆ ಬೆಂಗಳೂರಿನಲ್ಲಿ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯವಹಿಸಲಿದೆ. ಈ ಪಂದ್ಯ ಕೂಡ ಸಂಜೆ 7.30 ಕ್ಕೆ ಆರಂಭವಾಗಲಿದೆ.

5 / 6
ಏಪ್ರಿಲ್ 2 ರಂದು ನಾಲ್ಕನೇ ಪಂದ್ಯವನ್ನಾಡಲಿರುವ ಆರ್​ಸಿಬಿಗೆ, ಲಕ್ನೋ ಸೂಪರ್ ಜೈಂಟ್ಸ್ ತಂಡ ಎದುರಾಗಲಿದೆ. ಈ ಪಂದ್ಯ ಕೂಡ ಬೆಂಗಳೂರಿನಲ್ಲಿ ನಡೆಯಲ್ಲಿದ್ದು, ಸಂಜೆ 7.30 ಕ್ಕೆ ಪಂದ್ಯ ಆರಂಭವಾಗಲಿದೆ.

6 / 6
ಮೊದಲಾರ್ಧದ ಐಪಿಎಲ್​ನಲ್ಲಿ ತನ್ನ ಕೊನೆಯ ಪಂದ್ಯವನ್ನು ಆರ್​ಸಿಬಿ ಏಪ್ರಿಲ್ 6 ರಂದು ರಾಜಸ್ಥಾನ್ ವಿರುದ್ಧ ಆಡಲಿದೆ. ಉಭಯ ತಂಡಗಳ ಈ ಕಾದಾಟಕ್ಕೆ ಜೈಪುರ ಮೈದಾನ ಆತಿಥ್ಯವಹಿಸಲಿದೆ. ಈ ಪಂದ್ಯ ಕೂಡ ಸಂಜೆ 7.30 ಕ್ಕೆ ಪಂದ್ಯ ಆರಂಭವಾಗಲಿದೆ.