IPL 2024: ಸತತ 2 ಸೊನ್ನೆ; ಟಿ20 ವಿಶ್ವಕಪ್‌ಗೆ ಆಯ್ಕೆಯಾದ ಬಳಿಕ ಬ್ಯಾಟಿಂಗ್ ಮರೆತ ಶಿವಂ ದುಬೆ..!
Shivam Dube: ಶಿವಂ ದುಬೆ ಈ ಮೊದಲು ಪಂಜಾಬ್ ಕಿಂಗ್ಸ್ ವಿರುದ್ಧ ಆಡಿದ ಪಂದ್ಯದಲ್ಲಿ ಗೋಲ್ಡನ್ ಡಕ್‌ಗೆ ಪೆವಿಲಿಯನ್‌ಗೆ ಮರಳಿದ್ದರು. ಇದೀಗ ಪಂಜಾಬ್ ವಿರುದ್ಧದ ಸತತ ಎರಡನೇ ಪಂದ್ಯದಲ್ಲೂ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದ್ದಾರೆ. ಎರಡೂ ಪಂದ್ಯಗಳಲ್ಲೂ ದುಬೆ ಸ್ಪಿನ್ನರ್ಗೆ ಬಲಿಯಾಗಿರುವುದು ವಿಷಾದನೀಯ.
1 / 6
ಇಂದು ನಡೆದ ಐಪಿಎಲ್ 53ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 28 ರನ್ಗಳಿಂದ ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಲೀಗ್‌ನಲ್ಲಿ 6ನೇ ಗೆಲುವು ದಾಖಲಿಸಿದೆ. ಚೆನ್ನೈ ನೀಡಿದ 168 ರನ್ ಗುರಿ ಬೆನ್ನಟ್ಟಿದ ಪಂಜಾಬ್ ತಂಡ139 ರನ್ ಗಳಿಸಲಷ್ಟೇ ಶಕ್ತವಾಯಿತು.
2 / 6
ಈ ಪಂದ್ಯದ ಗೆಲುವು ಚೆನ್ನೈ ತಂಡಕ್ಕೆ ಪ್ಲೇಆಫ್ ವಿಚಾರದಲ್ಲಿ ಸಾಕಷ್ಟು ಲಾಭ ತಂದಿದೆ. ಆದರೆ ತಂಡದ ಸ್ಟಾರ್ ಬ್ಯಾಟರ್ ಶಿವಂ ದುಬೆ ಅವರ ಕಳಪೆ ಆಟ ತಂಡಕ್ಕೆ ತಲೆನೋವು ತಂದೊಡ್ಡಿದೆ. ದುಬೆ ಅವರ ಶೂನ್ಯ ಸಾಧನೆ ಸಿಎಸ್ಕೆ ತಂಡಕ್ಕೆ ಮಾತ್ರವಲ್ಲದೆ ಟೀಂ ಇಂಡಿಯಾಕ್ಕೂ ಆಘಾತ ನೀಡಿದೆ.
3 / 6
ಏಕೆಂದರೆ ಮುಂದೆ ನಡೆಯಲ್ಲಿರುವ ಟಿ20 ವಿಶ್ವಕಪ್‌ಗೆ ಶಿವಂ ದುಬೆ ಅವರನ್ನು ಟೀಂ ಇಂಡಿಯಾದಲ್ಲಿ ಆಯ್ಕೆ ಮಾಡಲಾಗಿದೆ. ಅಲ್ಲದೆ ದುಬೆಯನ್ನು ತಂಡದ ಮಧ್ಯಮ ಕ್ರಮಾಂಕದ ಜೀವಾಳ ಎಂದು ಭಾವಿಸಲಾಗಿದೆ. ಆದರೆ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆಯಾದ ಬಳಿಕ ದುಬೆ ಬ್ಯಾಟ್ ಸೈಲೆಂಟ್ ಆಗಿದೆ.
4 / 6
ದುಬೆ ಆಡಿದ ಸತತ ಎರಡೂ ಪಂದ್ಯಗಳಲ್ಲೂ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದ್ದಾರೆ. ಅಂದರೆ ಎರಡೂ ಪಂದ್ಯಗಳಲ್ಲೂ ದುಬೆ ಬ್ಯಾಟ್ನಿಂದ ಒಂದೇ ಒಂದು ರನ್ ಬಂದಿಲ್ಲ. ಇದು ಆಯ್ಕೆ ಮಂಡಳಿಗೆ ಹೊಸ ತಲೆನೋವು ತಂದಿದೆ.
5 / 6
ಶಿವಂ ದುಬೆ ಈ ಮೊದಲು ಪಂಜಾಬ್ ಕಿಂಗ್ಸ್ ವಿರುದ್ಧ ಆಡಿದ ಪಂದ್ಯದಲ್ಲಿ ಗೋಲ್ಡನ್ ಡಕ್‌ಗೆ ಪೆವಿಲಿಯನ್‌ಗೆ ಮರಳಿದ್ದರು. ಇದೀಗ ಪಂಜಾಬ್ ವಿರುದ್ಧದ ಸತತ ಎರಡನೇ ಪಂದ್ಯದಲ್ಲೂ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದ್ದಾರೆ. ಎರಡೂ ಪಂದ್ಯಗಳಲ್ಲೂ ದುಬೆ ಸ್ಪಿನ್ನರ್ಗೆ ಬಲಿಯಾಗಿರುವುದು ವಿಷಾದನೀಯ. ಏಕೆಂದರೆ ದುಬೆ ಸ್ಪಿನ್ನರ್ಗಳ ವಿರುದ್ಧ ಅದ್ಭುತವಾಗಿ ಬ್ಯಾಟ್ ಮಾಡುತ್ತಾರೆ.
6 / 6
ಈ ಸೀಸನ್ನಲ್ಲಿ ಶಿವಂ ದುಬೆ ಇಲ್ಲಿಯವರೆಗೆ ಆಡಿದ 11 ಪಂದ್ಯಗಳ 11 ಇನ್ನಿಂಗ್ಸ್‌ಗಳಲ್ಲಿ 350 ರನ್ ಗಳಿಸಿದ್ದಾರೆ. ಇದರಲ್ಲಿ 3 ಅರ್ಧಶತಕಗಳು ಸೇರಿವೆ. ದುಬೆ ಐಪಿಎಲ್‌ನಲ್ಲಿ ಇದುವರೆಗೆ 61 ಪಂದ್ಯಗಳನ್ನು ಆಡಿದ್ದು, 1456 ರನ್ ಗಳಿಸಿದ್ದಾರೆ. ಅಲ್ಲದೆ ಲೀಗ್‌ನಲ್ಲಿ 9 ಅರ್ಧಶತಕಗಳನ್ನು ಸಿಡಿಸಿದ್ದಾರೆ.