‘ಮೆಗಾ ಹರಾಜಿಗೆ ಬರಲ್ಲ, ಮಿನಿ ಹರಾಜು ಬಿಡಲ್ಲ’; ಬೆನ್ ಸ್ಟೋಕ್ಸ್ ಕಳ್ಳಾಟಕ್ಕೆ ಬ್ರೇಕ್ ಹಾಕಿದ ಬಿಸಿಸಿಐ

|

Updated on: Nov 07, 2024 | 4:03 PM

Ben Stokes IPL: ಬೆನ್ ಸ್ಟೋಕ್ಸ್ 2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಭಾಗವಹಿಸದಿರುವುದರಿಂದ ಎರಡು ವರ್ಷಗಳ ಕಾಲ ಐಪಿಎಲ್ ಆಡಲು ಅವಕಾಶವಿಲ್ಲ. ಬಿಸಿಸಿಐನ ಹೊಸ ನಿಯಮದ ಪ್ರಕಾರ, ಮೆಗಾ ಹರಾಜಿನಲ್ಲಿ ನೋಂದಾಯಿಸದ ವಿದೇಶಿ ಆಟಗಾರರು ಮುಂದಿನ ವರ್ಷದ ಹರಾಜಿನಲ್ಲೂ ಭಾಗವಹಿಸಲು ಅರ್ಹರಲ್ಲ. ಸ್ಟೋಕ್ಸ್ ಮುಂಬರುವ ಆಷಸ್ ಸರಣಿಯ ಮೇಲೆ ಗಮನಹರಿಸುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಂಡಿರಬಹುದು ಎನ್ನಲಾಗಿದೆ. ಈ ನಿಯಮದಿಂದಾಗಿ ಸ್ಟೋಕ್ಸ್ 2026ರ ಐಪಿಎಲ್​ನಲ್ಲೂ ಆಡಲು ಸಾಧ್ಯವಾಗುವುದಿಲ್ಲ.

1 / 7
2025ರ ಐಪಿಎಲ್ ಮೆಗಾ ಹರಾಜಿಗೆ ವೇದಿಕೆ ಸಿದ್ಧವಾಗಿದ್ದು, ಇದೇ ತಿಂಗಳ ಅಂದರೆ ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ. ಈ ಬಾರಿ ಮೆಗಾ ಹರಾಜಿಗೆ 1165 ಭಾರತೀಯ ಆಟಗಾರರು ಸೇರಿದಂತೆ ಒಟ್ಟು 1574 ಕ್ರಿಕೆಟಿಗರು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 320 ಕ್ಯಾಪ್ಡ್ ಮತ್ತು 1224 ಅನ್‌ಕ್ಯಾಪ್ಡ್ ಆಟಗಾರರಿದ್ದಾರೆ. ಉಳಿದಂತೆ ಸಹವರ್ತಿ ದೇಶಗಳ 30 ಆಟಗಾರರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ.

2 / 7
ಆದರೆ, ಈ 1574 ಆಟಗಾರರ ಪಟ್ಟಿಯಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಅವರ ಹೆಸರು ಇಲ್ಲ. ಅಂದರೆ ಬೆನ್ ಸ್ಟೋಕ್ಸ್ ಮೆಗಾ ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿಲ್ಲ. ಮುಂಬರುವ ಆಶ್ಯಸ್ ಸರಣಿಯ ಮೇಲೆ ಹೆಚ್ಚು ಗಮನಹರಿಸುವ ಕಾರಣಕ್ಕೆ ಸ್ಟೋಕ್ಸ್ ಈ ನಿರ್ಧಾರಕ್ಕೆ ಬಂದಿರಬಹುದು ಎಂದು ವರದಿಯಲ್ಲಿ ಹೇಳಲಾಗುತ್ತಿದೆ.

3 / 7
ಇದೀಗ ಐಪಿಎಲ್ ಮೆಗಾ ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸದ ಬೆನ್ ಸ್ಟೋಕ್ಸ್​ಗೆ ಎರಡು ವರ್ಷ ಐಪಿಎಲ್​ನಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಹೌದು, ಬಿಸಿಸಿಐ ನಿಯಮಗಳಿಂದಾಗಿ ಸ್ಟೋಕ್ಸ್ ಐಪಿಎಲ್‌ನ ಮುಂಬರುವ ಎರಡು ಸೀಸನ್‌ಗಳ ಭಾಗವಾಗಿರಲು ಸಾಧ್ಯವಾಗುವುದಿಲ್ಲ.

4 / 7
ವಾಸ್ತವವಾಗಿ ಮೆಗಾ ಹರಾಜಿಗೂ ಮುನ್ನ ಬಿಸಿಸಿಐ ಐಪಿಎಲ್‌ಗೆ ಸಂಬಂಧಿಸಿದಂತೆ ಕೆಲವು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಆ ಪ್ರಕಾರ, ಐಪಿಎಲ್ ಮೆಗಾ ಹರಾಜಿನಲ್ಲಿ ಯಾವುದೇ ವಿದೇಶಿ ಆಟಗಾರ ತನ್ನ ಹೆಸರನ್ನು ನೋಂದಾಯಿಸಿಕೊಳ್ಳದಿದ್ದರೆ, ಆತ ಮುಂದಿನ ವರ್ಷ ನಡೆಯಲಿರುವ ಹರಾಜಿನಲ್ಲೂ ಭಾಗವಹಿಸುಂತಿಲ್ಲ ಎಂಬುದು ಕೂಡ ಈ ನಿಯಮಗಳಲ್ಲಿ ಒಂದಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಬೆನ್ ಸ್ಟೋಕ್ಸ್ 2026 ರ ಹರಾಜಿನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ.

5 / 7
ಬಿಸಿಸಿಐ ಪ್ರಕಾರ, ಐಪಿಎಲ್ ಆಡುವ ಇಚ್ಛೆಯಿರುವ ಯಾವುದೇ ವಿದೇಶಿ ಆಟಗಾರರು ಮೆಗಾ ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಒಂದು ವೇಳೆ ಅವರು ತಮ್ಮ ಹೆಸರನ್ನು ನೋಂದಣಿ ಮಾಡದಿದ್ದರೆ ಮುಂದಿನ ವರ್ಷದ ಹರಾಜಿಗೆ ಅವರು ಅನರ್ಹರಾಗುತ್ತಾರೆ. ಇದರರ್ಥ ಸ್ಟೋಕ್ಸ್, 2025 ರ ಐಪಿಎಲ್ ಜೊತೆಗೆ 2026 ರ ಐಪಿಎಲ್​ನಲ್ಲೂ ಆಡಲು ಸಾಧ್ಯವಾಗುವುದಿಲ್ಲ.

6 / 7
ಬಿಸಿಸಿಐ ಈ ನಿಯಮವನ್ನು ಮಾಡಲು ಕಾರಣವೂ ಇದ್ದು, ಕಳೆದ ಕೆಲವು ವರ್ಷಗಳಲ್ಲಿ ವಿದೇಶಿ ಆಟಗಾರರು ಮೆಗಾ ಹರಾಜಿನಲ್ಲಿ ಭಾಗವಹಿಸುವುದಿಲ್ಲ. ಆದರೆ ಆ ನಂತರ ನಡೆಯುವ ಮಿನಿ ಹರಾಜಿನಲ್ಲಿ ಭಾಗವಹಿಸುತ್ತಾರೆ. ಇಲ್ಲಿ ಎಲ್ಲಾ ತಂಡಗಳಿಗೂ ಸ್ಟಾರ್ ಪ್ಲೇಯರ್​ನ ಅಗತ್ಯವಿರುವ ಕಾರಣ ಆತ ಊಹೆಗೂ ಮೀರಿದ ಹಣಕ್ಕೆ ಹರಾಜಾಗುತ್ತಾನೆ. ಈ ರೀತಿಯ ಸಂದರ್ಭಗಳನ್ನು ನಾವು ಈ ಹಿಂದೆ ಸಾಕಷ್ಟು ಬಾರಿ ನೋಡಿದ್ದೇವೆ. ಇದನ್ನು ತಪ್ಪಿಸುವ ಸಲುವಾಗಿಯೇ ಬಿಸಿಸಿಐ ವಿದೇಶಿ ಆಟಗಾರರ ವಿರುದ್ಧ ಈ ರೀತಿಯ ಕಠಿಣ ಕ್ರಮ ಕೈಗೊಂಡಿದೆ.

7 / 7
ಬೆನ್ ಸ್ಟೋಕ್ಸ್ ಈ ಹಿಂದೆಯೂ ಇದೇ ರೀತಿಯ ಕೆಲಸ ಮಾಡಿದ್ದಾರೆ. 2022 ರ ಮೆಗಾ ಹರಾಜಿನಿಂದ ಹೊರಗುಳಿದ್ದ ಸ್ಟೋಕ್ಸ್, ಆ ನಂತರ ಅಂದರೆ 2023 ರಲ್ಲಿ ನಡೆದ ಮಿನಿ ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಈ ವೇಳೆ ಸ್ಟಾರ್ ಆಟಗಾರನನ್ನು ಖರೀದಿಸಲು ಹಲವು ಫ್ರಾಂಚೈಸಿಗಳು ಪೈಪೋಟಿಗೆ ಬಿದ್ದಿದ್ದವು. ಅಂತಿಮವಾಗಿ ಚೆನ್ನೈ ಸೂಪರ್ ಕಿಂಗ್ಸ್ 16.25 ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನು ಖರ್ಚು ಮಾಡುವ ಮೂಲಕ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿತ್ತು.