IPL 2025: 6 ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳಲು ಅವಕಾಶ… ಆದರೆ
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಿಯಮದ ಪ್ರಕಾರ ಒಂದು ತಂಡದಲ್ಲಿ ಕನಿಷ್ಠ 18 ಆಟಗಾರರು ಇರಲೇಬೇಕು. ಈ ಹದಿನೆಂಟು ಆಟಗಾರರಲ್ಲಿ 6 ಮಂದಿಯನ್ನು ಮೆಗಾ ಹರಾಜಿಗೂ ಮುನ್ನ ತಂಡದಲ್ಲೇ ಉಳಿಸಿಕೊಳ್ಳಬಹುದು. ಆದರೆ ಹೀಗೆ ಉಳಿಸಿಕೊಂಡರೆ ಹರಾಜು ಮೊತ್ತದಲ್ಲಿ ಭಾರೀ ಕಡಿತವಾಗಲಿದೆ.
1 / 6
ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18ರ ರಿಟೆನ್ಷನ್ ರೂಲ್ಸ್ ಹೊರಬಿದ್ದಿದೆ. ಈ ನಿಯಮದಂತೆ ಈ ಬಾರಿಯ ಮೆಗಾ ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿಗಳು ಆರು ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳಬಹುದು. ಆದರೆ ಹೀಗೆ ಉಳಿಸಿಕೊಂಡರೆ ನಿಗದಿತ ಮೊತ್ತವನ್ನು ನೀಡಬೇಕಾಗುತ್ತದೆ.
2 / 6
ಅಂದರೆ ಐಪಿಎಲ್ ಧಾರಣ ನಿಯಮದ ಪ್ರಕಾರ, ಆರು ಆಟಗಾರರನ್ನು ಉಳಿಸಿಕೊಳ್ಳಲು ಮುಂದಾದರೆ ಬರೋಬ್ಬರಿ 79 ಕೋಟಿ ರೂ. ಅನ್ನು ವ್ಯಯಿಸಬೇಕು. ಇಲ್ಲಿ ಮೊದಲ ಆಟಗಾರನಿಗೆ 18 ಕೋಟಿ, ಎರಡನೇ ಆಟಗಾರನಿಗೆ 14 ಕೋಟಿ, ಮೂರನೇ ಆಟಗಾರನಿಗೆ 11 ಕೋಟಿ, ನಾಲ್ಕನೇ ಆಟಗಾರನಿಗೆ 18 ಕೋಟಿ, ಐದನೇ ಆಟಗಾರನಿಗೆ 14 ಕೋಟಿ ರೂ. ಹಾಗೂ ಆರನೇ ಆಟಗಾರನಿಗೆ 4 ಕೋಟಿ ಕೋಟಿ ನೀಡಬೇಕಾಗುತ್ತದೆ.
3 / 6
ಅಷ್ಟೇ ಅಲ್ಲದೆ ಆರು ಆಟಗಾರರನ್ನು ಉಳಿಸಿಕೊಳ್ಳಲು ಬಯಸಿದರೆ, ಅದರಲ್ಲಿ ಓರ್ವ ಅನ್ಕ್ಯಾಪ್ಡ್ ಆಟಗಾರ ಇರಲೇಬೇಕು. ಅಂದರೆ ರಾಷ್ಟ್ರೀಯ ತಂಡದ ಪರ ಆಡದ ಆಟಗಾರ ಅಥವಾ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಿ 5 ವರ್ಷ ಕಳೆದಿರುವ ಆಟಗಾರರನ್ನು ಅನ್ಕ್ಯಾಪ್ಡ್ ಪಟ್ಟಿಯಲ್ಲಿ ಆಯ್ಕೆ ಮಾಡಬಹುದು. ಈ ಮೂಲಕ ಒಟ್ಟು 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ.
4 / 6
ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಆರು ಆಟಗಾರರನ್ನು ರಿಟೈನ್ ಮಾಡಿಕೊಂಡರೆ, ಆರ್ಟಿಎಂ ಆಯ್ಕೆ ಇರುವುದಿಲ್ಲ ಎಂಬುದು. ಅಂದರೆ ರೈಟ್ ಟು ಮ್ಯಾಚ್ ಕಾರ್ಡ್ ಬಳಸಿ ಯಾವುದೇ ಆಟಗಾರನನ್ನು ಹರಾಜಿಗೆ ಬಿಡುಗಡೆ ಮಾಡಲು ಅವಕಾಶವಿರಲಿಲ್ಲ. ಬದಲಾಗಿ 6 ಆಟಗಾರರನ್ನು ನೇರವಾಗಿ ರಿಟೈನ್ ಮಾಡಬೇಕಾಗುತ್ತದೆ.
5 / 6
ಇನ್ನು ಫ್ರಾಂಚೈಸಿ 6 ಆಟಗಾರರನ್ನು ರಿಟೈನ್ ಮಾಡಿಕೊಂಡರೆ ಒಟ್ಟು ಹರಾಜು ಮೊತ್ತದಿಂದ 79 ಕೋಟಿ ರೂ. ಕಡಿತವಾಗಲಿದೆ. ಅಂದರೆ 120 ಕೋಟಿ ರೂ. ನಿಂದ 79 ಕೋಟಿ ರೂ. ಮೈನಸ್ ಆಗಲಿದ್ದು, ಕೇವಲ 41 ಕೋಟಿಯಲ್ಲಿ ಉಳಿದ 12 ಆಟಗಾರರನ್ನು ಖರೀದಿಸಬೇಕಾಗುತ್ತದೆ. ಏಕೆಂದರೆ ಐಪಿಎಲ್ ನಿಯಮದ ಪ್ರಕಾರ ಒಂದು ತಂಡದಲ್ಲಿ 18 ಆಟಗಾರರು ಇರುವುದು ಕಡ್ಡಾಯ.
6 / 6
ಹೀಗಾಗಿ ಈ ಬಾರಿಯ ಮೆಗಾ ಹರಾಜಿಗೂ ಮುನ್ನ ಸಂಪೂರ್ಣ ರಿಟೆನ್ಷನ್ ಆಯ್ಕೆಯನ್ನು ಬಳಿಸಿಕೊಳ್ಳುವ ಫ್ರಾಂಚೈಸಿ ಯಾವುದೆಂಬುದೇ ಈಗ ಕುತೂಹಲ. ಏಕೆಂದರೆ 6 ಆಟಗಾರರನ್ನು ನೇರವಾಗಿ ಉಳಿಸಿಕೊಂಡರೆ ಉಳಿದ 12 ಆಟಗಾರರನ್ನು 41 ಕೋಟಿ ರೂ.ನಲ್ಲಿ ಖರೀದಿಸಲು ಪ್ಲ್ಯಾನ್ ರೂಪಿಸಬೇಕಾಗುತ್ತದೆ. ಅಂತಹ ಸಾಹಸಕ್ಕೆ ಕೈಹಾಕಿ ಉತ್ತಮ ತಂಡ ಕಟ್ಟುವ ಫ್ರಾಂಚೈಸಿ ಯಾವುದೆಂದು ಕಾದು ನೋಡಬೇಕಿದೆ.