
IPL 2025: ಐಪಿಎಲ್ ಮೆಗಾ ಹರಾಜಿಗಾಗಿ ಒಟ್ಟು 1,574 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ 409 ವಿದೇಶಿ ಆಟಗಾರರಿದ್ದಾರೆ. ಈ ವಿದೇಶಿ ಆಟಗಾರರಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಕಾಣಿಸಿಕೊಂಡಿದ್ದು ಸೌತ್ ಆಫ್ರಿಕಾ ಕ್ರಿಕೆಟಿಗರು. ಇನ್ನು 2ನೇ ಸ್ಥಾನದಲ್ಲಿ ಆಸ್ಟ್ರೇಲಿಯನ್ನರಿದ್ದಾರೆ. ಹಾಗಿದ್ರೆ ಯಾವ ದೇಶದಿಂದ ಎಷ್ಟು ಆಟಗಾರರು ಐಪಿಎಲ್ ಮೆಗಾ ಹರಾಜಿಗಾಗಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ನೋಡೋಣ...

ಸೌತ್ ಆಫ್ರಿಕಾ: ಈ ಬಾರಿಯ ಮೆಗಾ ಹರಾಜಿಗೆ ಅತ್ಯಧಿಕ ಹೆಸರು ನೋಂದಣಿ ಮಾಡಿಕೊಂಡಿದ್ದು ಸೌತ್ ಆಫ್ರಿಕನ್ನರು. ಒಟ್ಟು 91 ಆಟಗಾರರು ಐಪಿಎಲ್ ಮೆಗಾ ಆಕ್ಷನ್ಗಾಗಿ ಹೆಸರು ರಿಜಿಸ್ಟರ್ ಮಾಡಿಕೊಂಡಿದ್ದಾರೆ.

ಆಸ್ಟ್ರೇಲಿಯಾ: ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿ ಆಸ್ಟ್ರೇಲಿಯಾ ಆಟಗಾರರಿದ್ದಾರೆ. ಈ ಬಾರಿಯ ಮೆಗಾ ಹರಾಜಿಗಾಗಿ ಆಸ್ಟ್ರೇಲಿಯಾದ 76 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ.

ಇಂಗ್ಲೆಂಡ್: ಮೂರನೇ ಸ್ಥಾನದಲ್ಲಿ ಇಂಗ್ಲೆಂಡ್ ಇದ್ದು, ಐಪಿಎಲ್ ಮೆಗಾ ಹರಾಜಿಗಾಗಿ ಇಂಗ್ಲೆಂಡ್ನ 52 ಆಟಗಾರರು ಹೆಸರು ನೀಡಿದ್ದಾರೆ.

ನ್ಯೂಝಿಲೆಂಡ್: ಐಪಿಎಲ್ ಮೆಗಾ ಹರಾಜಿನಲ್ಲಿ ಅದೃಷ್ಟ ಪರೀಕ್ಷಿಸಲು ನ್ಯೂಝಿಲೆಂಡ್ನ 39 ಆಟಗಾರರು ನಿರ್ಧರಿಸಿದ್ದಾರೆ. ಅದರಂತೆ ಕಿವೀಸ್ ಪಡೆಯ ಸ್ಟಾರ್ ಆಟಗಾರರು ಈ ಬಾರಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ವೆಸ್ಟ್ ಇಂಡೀಸ್: ಐಪಿಎಲ್ನಲ್ಲಿ ತನ್ನದೆಯಾದ ಛಾಪು ಮೂಡಿಸಿರುವ ಕೆರಿಬಿಯನ್ ಕ್ರಿಕೆಟಿಗರು ಹೆಸರು ರಿಜಿಸ್ಟರ್ನಲ್ಲಿ ಹಿಂದೆ ಉಳಿದಿದ್ದಾರೆ. ಏಕೆಂದರೆ ಈ ಬಾರಿ ವೆಸ್ಟ್ ಇಂಡೀಸ್ನ 33 ಆಟಗಾರರು ಮಾತ್ರ ಹೆಸರು ನೋಂದಾಯಿಸಿಕೊಂಡಿದ್ದಾರೆ.

ಅಫ್ಘಾನಿಸ್ತಾನ್: ಐಪಿಎಲ್ 2025 ಮೆಗಾ ಹರಾಜಿಗಾಗಿ ಅಫ್ಘಾನಿಸ್ತಾನದ 29 ಆಟಗಾರರು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಇವರಲ್ಲಿ ಎಷ್ಟು ಮಂದಿಗೆ ಚಾನ್ಸ್ ಸಿಗಲಿದೆ ಕಾದು ನೋಡಬೇಕಿದೆ.

ಶ್ರೀಲಂಕಾ: ಈ ಬಾರಿ ಶ್ರೀಲಂಕಾ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಅದರಂತೆ ಲಂಕಾದ 29 ಆಟಗಾರರ ಹೆಸರು ಐಪಿಎಲ್ ಮೆಗಾ ಹರಾಜು ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.

ಬಾಂಗ್ಲಾದೇಶ್: ಐಪಿಎಲ್ನಲ್ಲಿ ಬಾಂಗ್ಲಾದೇಶ್ ತಂಡದ ಆಟಗಾರರು ಕಾಣಿಸಿಕೊಳ್ಳುವುದು ವಿರಳ. ಇದಾಗ್ಯೂ ಈ ಬಾರಿ 13 ಆಟಗಾರರು ತಮ್ಮ ಹೆಸರುಗಳನ್ನು ರಿಜಿಸ್ಟರ್ ಮಾಡಿಕೊಂಡಿದ್ದಾರೆ.

ನೆದರ್ಲೆಂಡ್ಸ್: ಈ ಬಾರಿಯ ಮೆಗಾ ಹರಾಜಿಗಾಗಿ ನೆದರ್ಲೆಂಡ್ಸ್ನ 12 ಆಟಗಾರರು ಹೆಸರು ನೋಂದಣಿ ಮಾಡಿಕೊಂಡಿರುವುದು ವಿಶೇಷ. ಇವರಲ್ಲಿ ಯಾರಿಗೆ ಅವಕಾಶ ಸಿಗಲಿದೆ ಕಾದು ನೋಡಬೇಕಿದೆ.

ಇನ್ನು ಯುಎಸ್ಎ ತಂಡದ 10 ಆಟಗಾರರು, ಐರ್ಲೆಂಡ್ನ 9 ಆಟಗಾರರು, ಝಿಂಬಾಬ್ವೆಯ 8 ಆಟಗಾರರು, ಕೆನಡಾದ 4 ಆಟಗಾರರು, ಸ್ಕಾಟ್ಲೆಂಡ್ನ ಇಬ್ಬರು ಆಟಗಾರು, ಇಟಲಿ ಮತ್ತು ಯುಎಇ ಯಿಂದ ತಲಾ ಒಬ್ಬರು ಮೆಗಾ ಹರಾಜಿಗಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ.