IPL 2025: ಮೂವರು ಕ್ಯಾಪ್ಡ್, ಇಬ್ಬರು ಅನ್​ಕ್ಯಾಪ್ಡ್ ಪ್ಲೇಯರ್ಸ್​ನ ರಿಟೈನ್ ಮಾಡಿದ ಗುಜರಾತ್ ಟೈಟಾನ್ಸ್

|

Updated on: Oct 31, 2024 | 8:23 AM

IPL 2025 Retention: ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಮೆಗಾ ಹರಾಜಿಗೂ ಮುನ್ನ 3+2 ಸೂತ್ರದಲ್ಲಿ ಐವರು ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಅಂದರೆ ಮೂವರು ರಾಷ್ಟ್ರೀಯ ತಂಡದ ಆಟಗಾರರು ಹಾಗೂ ಇಬ್ಬರು ದೇಶೀಯ ಆಟಗಾರರನ್ನು ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ತಂಡದಲ್ಲೇ ಉಳಿಸಿಕೊಂಡಿದೆ.

1 / 6
IPL 2025: ಐಪಿಎಲ್ ಮೆಗಾ ಹರಾಜಿಗೂ ಮುನ್ನ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಒಟ್ಟು ಐವರು ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಈ ರಿಟೈನ್ ಪಟ್ಟಿಯಲ್ಲಿ ಮೂವರು ಕ್ಯಾಪ್ಡ್​ ಪ್ಲೇಯರ್ಸ್ ಇದ್ದರೆ, ಇನ್ನುಳಿದ ಇಬ್ಬರು ಅನ್​ಕ್ಯಾಪ್ಡ್​. ಅಂದರೆ ಈವರೆಗೆ ರಾಷ್ಟ್ರೀಯ ತಂಡದ ಪರ ಆಡದ ಇಬ್ಬರು ಆಟಗಾರರಿದ್ದಾರೆ. ಅದರಂತೆ ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ಉಳಿಸಿಕೊಂಡ ಆಟಗಾರರ ಪಟ್ಟಿ ಈ ಕೆಳಗಿನಂತಿದೆ...

2 / 6
ಶುಭ್​ಮನ್ ಗಿಲ್: ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್​ಮನ್ ಗಿಲ್ ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲಾಗಿದೆ. ಹೀಗಾಗಿ ಮುಂದಿನ ಸೀಸನ್​ನಲ್ಲೂ ಸ್ಟಾರ್ ಆಟಗಾರ ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸುವುದು ಖಚಿತ ಎನ್ನಬಹುದು.

3 / 6
ರಶೀದ್ ಖಾನ್: ಅಫ್ಘಾನಿಸ್ತಾನದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಅವರನ್ನು ಸಹ ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ರಿಟೈನ್ ಮಾಡಿಕೊಂಡಿದೆ. ಅದರಂತೆ ಮುಂದಿನ ಸೀಸನ್​ನಲ್ಲೂ ಗುಜರಾತ್ ಟೈಟಾನ್ಸ್ ತಂಡದ ಉಪನಾಯಕರಾಗಿ ರಶೀದ್ ಖಾನ್ ಕಾಣಿಸಿಕೊಳ್ಳುವುದು ಖಚಿತ.

4 / 6
ಸಾಯಿ ಸುದರ್ಶನ್: ಯುವ ಎಡಗೈ ದಾಂಡಿಗ ಸಾಯಿ ಸುದರ್ಶನ್ ಕಳೆದ ಎರಡು ಸೀಸನ್​ಗಳಲ್ಲಿ ಗುಜರಾತ್ ಟೈಟಾನ್ಸ್ ಪರ ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಮುಂದಿನ ಸೀಸನ್​ಗೂ ಸಾಯಿ ಸುದರ್ಶನ್ ಅವರನ್ನು ಗುಜರಾತ್ ಟೈಟಾನ್ಸ್ ರಿಟೈನ್ ಮಾಡಿಕೊಂಡಿದೆ.

5 / 6
ರಾಹುಲ್ ತೆವಾಠಿಯಾ: ಗುಜರಾತ್ ಟೈಟಾನ್ಸ್ ತಂಡದ ಮ್ಯಾಚ್ ಫಿನಿಶರ್ ಆಗಿ ಕಾಣಿಸಿಕೊಂಡಿರುವ ರಾಹುಲ್ ತೆವಾಠಿಯಾ ಅವರನ್ನು ಸಹ ಬಿಡುಗಡೆ ಮಾಡಲಾಗಿಲ್ಲ. ಹೀಗಾಗಿ ಐಪಿಎಲ್ 2025 ರಲ್ಲೂ ತೆವಾಠಿಯಾ ಗುಜರಾತ್ ಟೈಟಾನ್ಸ್ ತಂಡದಲ್ಲೇ ಮುಂದುವರೆಯಲಿದ್ದಾರೆ.

6 / 6
ಶಾರುಖ್ ಖಾನ್: ಸ್ಪೋಟಕ ದಾಂಡಿಗ ಶಾರುಖ್ ಖಾನ್ ಅವರನ್ನು ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಅನ್​ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ಉಳಿಸಿಕೊಂಡಿದೆ. ಕಳೆದ ಸೀಸನ್​ನಲ್ಲಿ ಗುಜರಾತ್ ಟೈಟಾನ್ಸ್ ತಂಡಕ್ಕೆ ಎಂಟ್ರಿ ಕೊಟ್ಟಿದ್ದ ಶಾರುಖ್ ಈ ಬಾರಿ ಕೂಡ ಜಿಟಿ ಪರ ಕಣಕ್ಕಿಳಿಯಲಿದ್ದಾರೆ.