IPL 2025: ಐಪಿಎಲ್ ಫ್ರಾಂಚೈಸಿಗಳ ಚಿಂತೆ ಹೆಚ್ಚಿಸಿದ ಹೊಸ ರೂಲ್ಸ್
IPL 2025 Mega Auction: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2025) ಮೆಗಾ ಹರಾಜಿಗಾಗಿ ಪ್ರಕಟಿಸಲಾದ ರೈಟ್ ಟು ಮ್ಯಾಚ್ ರೂಲ್ಸ್ನಲ್ಲಿನ ಲೋಪದೋಷಗಳ ಬಗ್ಗೆ ಐಪಿಎಲ್ ಫ್ರಾಂಚೈಸಿಗಳು ಕಳವಳ ವ್ಯಕ್ತಪಡಿಸಿದೆ. ಅಲ್ಲದೆ ಈ ನಿಯಮವನ್ನು ಮರುಪರಿಶೀಲಿಸುವಂತೆ ಬಿಸಿಸಿಐಗೆ ಮನವಿ ಮಾಡಿದೆ.
1 / 9
ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18ರ ಮೆಗಾ ಹರಾಜಿಗಾಗಿ ಸಿದ್ಧತೆಗಳು ಶುರುವಾಗಿದೆ. ಇದರ ಮೊದಲ ಹೆಜ್ಜೆಯಾಗಿ ಇದೀಗ ಆಟಗಾರರ ರಿಟೈನ್ ನಿಯಮವನ್ನು ಪ್ರಕಟಿಸಲಾಗಿದೆ. ಈ ನಿಯಮದಂತೆ ಮೆಗಾ ಹರಾಜಿಗೂ ಮುನ್ನ ಗರಿಷ್ಠ 6 ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳಬಹುದು.
2 / 9
ಹಾಗೆಯೇ ಉಳಿಸಿಕೊಳ್ಳಲು ಬಯಸದಿದ್ದರೂ ರೈಟ್ ಟು ಮ್ಯಾಚ್ ಕಾರ್ಡ್ ಮೂಲಕ ಗರಿಷ್ಠ 6 ಆಟಗಾರರನ್ನು ಹರಾಜಿಗೆ ಬಿಡುಗಡೆ ಮಾಡಲು ಸಹ ಅವಕಾಶ ನೀಡಲಾಗಿದೆ. ಅಂದರೆ ಇಲ್ಲಿ ಆರ್‌ಟಿಎಂ ಕಾರ್ಡ್ ಬಳಸಿದ ಆಟಗಾರರು ಹರಾಜಿನಲ್ಲಿ ಕಾಣಿಸಿಕೊಂಡರೂ ಅವರ ಮೇಲಿನ ಹಕ್ಕು ಹಳೆಯ ಫ್ರಾಂಚೈಸಿಯ ಕೈಯಲ್ಲೇ ಇರಲಿದೆ.
3 / 9
ಉದಾಹರಣೆಗೆ: RCB ತಂಡವು ಮೊಹಮ್ಮದ್ ಸಿರಾಜ್ ಅವರನ್ನು ಹರಾಜಿಗಾಗಿ ರಿಲೀಸ್ ಮಾಡಿದೆ ಎಂದಿಟ್ಟುಕೊಳ್ಳಿ. ಆದರೆ ಬಿಡುಗಡೆಗೂ ಮುನ್ನ ಆರ್‌ಟಿಎಂ ಆಯ್ಕೆ ಬಳಸಿ ಮೆಗಾ ಹರಾಜಿಗಾಗಿ ರಿಲೀಸ್ ಮಾಡಿದರೆ, ಸಿರಾಜ್ ಮೇಲಿನ ಹಕ್ಕು ಆರ್ಸಿಬಿ ಬಳಿಯೇ ಇರುತ್ತದೆ.
4 / 9
ಅದರಂತೆ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡ ಮೊಹಮ್ಮದ್ ಸಿರಾಜ್ (ಆರ್‌ಟಿಎಂ) ಅವರ ಖರೀದಿಗೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು 10 ಕೋಟಿ ರೂ.ವರೆಗೆ ಬಿಡ್ ಮಾಡಿತು ಎಂದಿಟ್ಟುಕೊಳ್ಳಿ. ಈ ವೇಳೆ ಆ ಮೊತ್ತವನ್ನು ತಾವೇ ನೀಡುತ್ತೇವೆ ಎಂದು ಸಿರಾಜ್ ಅವರನ್ನು ಆರ್ಸಿಬಿ ಮರಳಿ ಖರೀದಿಸಬಹುದು.
5 / 9
ಒಂದು ವೇಳೆ ಬಿಡುಗಡೆ ಮಾಡಿದ ತಂಡವು ಮರಳಿ ಖರೀದಿಸಲು ಇಚ್ಛಿಸದಿದ್ದರೆ ಮಾತ್ರ ಆರ್‌ಟಿಎಂ ಆಯ್ಕೆಯಲ್ಲಿ ಕಾಣಿಸಿಕೊಂಡ ಆಟಗಾರರು ಕೊನೆಯದಾಗಿ ಬಿಡ್ ಮಾಡಿದ ತಂಡದ ಪಾಲಾಗಲಿದ್ದಾರೆ. ಆದರೆ ಈ ಆಯ್ಕೆಯೊಂದಿಗೆ ಬಿಸಿಸಿಐ ಪರಿಚಯಿಸಿದ ಹೊಸ ರೂಲ್ಸ್ ಈಗ ಫ್ರಾಂಚೈಸಿಗಳ ಚಿಂತೆಗೆ ಕಾರಣವಾಗಿದೆ.
6 / 9
ಅಂದರೆ ಇಲ್ಲಿ ಆರ್‌ಟಿಎಂ ಆಯ್ಕೆಯಲ್ಲಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡ ಆಟಗಾರನ ಖರೀದಿಗೆ ಫ್ರಾಂಚೈಸಿಯೊಂದು ಕೊನೆಯದಾಗಿ 10 ಕೋಟಿ ರೂ. ಬಿಡ್ಡಿಂಗ್ ಮಾಡಿದ್ರೆ, ಆರ್‌ಟಿಎಂ ಬಳಸಿದ ಫ್ರಾಂಚೈಸಿಗೆ ನೀವು ಈ ಆಟಗಾರನನ್ನು ಉಳಿಸಿಕೊಳ್ಳಲು ಬಯಸುತ್ತೀರಾ ಎಂದು ಕೇಳಲಾಗುತ್ತದೆ. ಈ ವೇಳೆ ಎಸ್ ಎಂದರೆ... ಕೊನೆದಾಗಿ ಬಿಡ್ ಮಾಡಿದ ಫ್ರಾಂಚೈಸಿಗೆ ಮತ್ತೊಂದು ಬಿಡ್ಡಿಂಗ್ಗೆ ಅವಕಾಶ ನೀಡಲಾಗುತ್ತದೆ. ಈ ನಿಯಮದ ಬಗ್ಗೆ ಇದೀಗ ಫ್ರಾಂಚೈಸಿಗಳು ಅಸಮಾಧಾನ ಹೊರಹಾಕಿದ್ದಾರೆ.
7 / 9
ಉದಾಹರಣೆಗೆ: ಆರ್ಸಿಬಿ ತಂಡವು ರಜತ್ ಪಾಟಿದಾರ್ ಅವರನ್ನು ಆರ್‌ಟಿಎಂ ಆಯ್ಕೆಯಲ್ಲಿ ಬಿಡುಗಡೆ ಮಾಡಿದೆ ಎಂದಿಟ್ಟುಕೊಳ್ಳಿ. ಹರಾಜಿನಲ್ಲಿ ಸಿಎಸ್ಕೆ ಫ್ರಾಂಚೈಸಿಯು ಪಾಟಿದಾರ್ ಅವರಿಗಾಗಿ 10 ಕೋಟಿ ರೂ. ಬಿಡ್ಡಿಂಗ್ ಮಾಡಿರುತ್ತದೆ. ಈ ವೇಳೆ ಆರ್ಸಿಬಿಗೆ ನೀವು 10 ಕೋಟಿ ರೂ.ಗೆ ಪಾಟಿದಾರ್ ಅವರನ್ನು ಮರಳಿ ಖರೀದಿಸಲು ಬಯಸುತ್ತೀರಾ ಎಂದು ಕೇಳಲಾಗುತ್ತದೆ. ಈ ವೇಳೆ ಹೌದು ಎಂದರೆ, ಸಿಎಸ್ಕೆಗೆ ಮತ್ತೊಂದು ಬಿಡ್ಗೆ ಅವಕಾಶ ನೀಡಲಾಗುತ್ತದೆ.
8 / 9
ಹೀಗೆ ಸಿಗುವ ಅವಕಾಶದಲ್ಲಿ ಎದುರಾಳಿ ಫ್ರಾಂಚೈಸಿ ತನ್ನ ಮೊತ್ತವನ್ನು ಡಬಲ್ ಮಾಡಬಹುದು. ಉದಾಹರಣೆಗೆ, ಪಾಟಿದಾರ್ಗೆ 10 ಕೋಟಿ ರೂ.ವರೆಗೆ ಬಿಡ್ ಮಾಡಿದ್ದ ಸಿಎಸ್ಕೆ ಫ್ರಾಂಚೈಸಿ ತನಗೆ ಆ ಆಟಗಾರ ಸಿಗಲ್ಲ ಎಂದು ಗೊತ್ತಾದ ಮೇಲೆ ಕೊನೆಯ ಬಿಡ್ ಅನ್ನು ಏಕಾಏಕಿ 15 ಕೋಟಿ ರೂ.ಗೆ ಹೆಚ್ಚಿಸಬಹುದು. ಇದರಿಂದ ಆರ್‌ಟಿಎಂ ಬಳಸಿದ ಫ್ರಾಂಚೈಸಿ 15 ಕೋಟಿ ರೂ. ನೀಡಬೇಕಾಗುತ್ತದೆ. ಹೀಗಾಗಿ ಈ ನಿಯಮವನ್ನು ಫ್ರಾಂಚೈಸಿಗಳು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
9 / 9
ಇದೇ ಕಾರಣದಿಂದ ಇದೀಗ ಕೊಲ್ಕತ್ತಾ ನೈಟ್ ರೈಡರ್ಸ್ ಸೇರಿದಂತೆ ಕೆಲ ಫ್ರಾಂಚೈಸಿಗಳು ರೈಟ್ ಟು ಮ್ಯಾಚ್ (ಆರ್‌ಟಿಎಂ) ಹೊಸ ನಿಯಮದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ನಿಯಮವನ್ನು ಬದಲಿಸುವಂತೆ ಬಿಸಿಸಿಐಗೆ ಪತ್ರದ ಮೂಲಕ ಮನವಿ ಮಾಡಿದೆ ಎಂದು ವರದಿಯಾಗಿದೆ.