IPL 2025: LSG ನಾಯಕತ್ವದಿಂದ ಕೆಎಲ್ ರಾಹುಲ್​ ಕಿಕ್ ಔಟ್?

|

Updated on: Aug 29, 2024 | 9:45 AM

IPL 2025 KL Rahul: ಕೆಎಲ್ ರಾಹುಲ್ ಮುಂಬರುವ ಐಪಿಎಲ್​ನಲ್ಲಿ ಯಾವ ತಂಡದ ಪರ ಕಣಕ್ಕಿಳಿಯಲಿದ್ದಾರೆ ಎಂಬುದೇ ಈಗ ಕುತೂಹಲ. ಏಕೆಂದರೆ ಕಳೆದ ಸೀಸನ್​ನಲ್ಲಿ ಎಸ್​ಆರ್​ಹೆಚ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್​ ತಂಡ ಸೋತಿದಕ್ಕಾಗಿ ಸಂಜಯ್ ಗೊಯೆಂಕಾ ಮೈದಾನದಲ್ಲೇ ನಾಯಕ ಕೆಎಲ್ ರಾಹುಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದಾದ ಬಳಿಕ ರಾಹುಲ್ ಎಲ್​ಎಸ್​ಜಿ ತಂಡವನ್ನು ತೊರೆಯಲಿದ್ದಾರೆ ಎಂಬ ಸುದ್ದಿ ಹುಟ್ಟಿಕೊಂಡಿತ್ತು.

1 / 6
ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕತ್ವದಿಂದ ಕೆಎಲ್ ರಾಹುಲ್ ವಾಜಾಗೊಳ್ಳುವುದು ಬಹುತೇಕ ಖಚಿತವಾಗಿದೆ. ಇದಕ್ಕೆ ಸಾಕ್ಷಿ ಬುಧವಾರ LSG ತಂಡದ ಮಾಲೀಕರಾದ ಸಂಜೀವ್ ಗೊಯೆಂಕಾ ನೀಡಿರುವ ಹೇಳಿಕೆಗಳು. ಐಪಿಎಲ್​ 2025ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಸಂಜೀವ್ ಗೊಯೆಂಕಾ ಸ್ಪಷ್ಟ ಉತ್ತರ ನೀಡದೇ ಜಾರಿಕೊಂಡಿದ್ದಾರೆ.

2 / 6
ಬುಧವಾರ ನಡೆದ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯ ಪತ್ರಿಕಾಗೋಷ್ಠಿಯಲ್ಲಿ, ಕೆಎಲ್ ರಾಹುಲ್ ಬಗ್ಗೆ ಪ್ರಶ್ನಿಸಲಾಗಿತ್ತು. ಈ ವೇಳೆ ಸಂಜೀವ್ ಗೊಯೆಂಕಾ, ರಾಹುಲ್ ನಮ್ಮ ಕುಟುಂಬದ ಅವಿಭಾಜ್ಯ ಅಂಗ ಎಂಬ ಮಾರ್ಮಿಕ ಉತ್ತರ ನೀಡಿದರು. ಇದಾಗ್ಯೂ ಅವರು ಕೆಎಲ್ ರಾಹುಲ್ ಅವರನ್ನು ರಿಟೈನ್ ಮಾಡುತ್ತೇವೆ ಎಂದು ಎಲ್ಲೂ ಸಹ ಪ್ರಸ್ತಾಪಿಸಿಲ್ಲ.

3 / 6
ಅಷ್ಟೇ ಅಲ್ಲದೆ ನಾಯಕ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಂಜೀವ್ ಗೊಯೆಂಕಾ, ನಾಯಕ ಬಗ್ಗೆ ನಿರ್ಧರಿಸಲು ಮತ್ತು ರಿಟೈನ್ ಪ್ರಕ್ರಿಯೆನ್ನು ಪೂರ್ಣಗೊಳಿಸಲು ಇನ್ನೂ ಸಾಕಷ್ಟು ಸಮಯವಿದೆ ಎಂಬ ಉತ್ತರ ನೀಡಿದ್ದಾರೆ. ಇದಾಗ್ಯೂ ಕೆಎಲ್ ರಾಹುಲ್ ಅವರೇ ಮುಂದಿನ ಸೀಸನ್​ನಲ್ಲೂ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿ ಮುಂದುವರೆಯಲಿದ್ದಾರೆ ಎಂದು ಹೇಳಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ.

4 / 6
ಇಲ್ಲಿ ಮತ್ತೊಂದು ಇಂಟ್ರೆಸ್ಟಿಂಗ್ ವಿಷಯ ಎಂದರೆ ಕಳೆದ ಮೂರು ತಿಂಗಳಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಕೆಎಲ್ ರಾಹುಲ್ ಕುರಿತಾಗಿ ಒಂದೇ ಒಂದು ಪೋಸ್ಟ್ ಹಂಚಿಕೊಂಡಿಲ್ಲ ಎಂಬುದು. ಇದೇ ವೇಳೆ ಎಲ್​ಎಸ್​ಜಿ ಪರ ಕಣಕ್ಕಿಳಿದ ಹಲವು ಆಟಗಾರರ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ಶೇರ್ ಮಾಡಲಾಗಿದೆ.

5 / 6
ಆದರೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಶ್ರೀಲಂಕಾ ವಿರುದ್ಧದ ಸರಣಿಗೆ ಆಯ್ಕೆಯಾದರೂ ಆ ಬಗ್ಗೆ ಒಂದೇ ಒಂದು ಪೋಸ್ಟ್ ಮಾಡಲಾಗಿಲ್ಲ. ಇನ್ನು ಕೆಲ ದಿನಗಳ ಹಿಂದೆಯಷ್ಟೇ ರಾಹುಲ್ ಎಲ್​ಎಸ್​ಜಿ ಮಾಲೀಕರಾದ ಸಂಜೀವ್ ಗೊಯೆಂಕಾ ಅವರನ್ನು ಕೊಲ್ಕತ್ತಾದಲ್ಲಿ ಭೇಟಿಯಾಗಿದ್ದರು. ಆ ಫೋಟೋವನ್ನು ಸಹ ಲಕ್ನೋ ಸೂಪರ್ ಜೈಂಟ್ಸ್ ತನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿಲ್ಲ.

6 / 6
ಈ ಎಲ್ಲಾ ನಡೆಗಳನ್ನು ಗಮನಿಸಿದರೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕತ್ವದಿಂದ ಕೆಎಲ್ ರಾಹುಲ್ ವಜಾಗೊಳ್ಳುವುದು ಬಹುತೇಕ ಖಚಿತ. ಇನ್ನು ಪ್ರಸ್ತುತ ಸನ್ನಿವೇಶವನ್ನು ಅವಲೋಕಿಸಿದರೆ, ಮುಂಬರುವ ಸೀಸನ್​ನಲ್ಲಿ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಕಾಣಿಸಿಕೊಳ್ಳುವುದು ಸಹ ಅನುಮಾನ.