IPL 2025: ಕನ್ನಡಿಗ ಕೆಎಲ್ ರಾಹುಲ್ ಆರ್​ಸಿಬಿ ಸೇರುವುದು ಅನುಮಾನ

Updated on: Aug 26, 2024 | 10:52 PM

KL Rahul: ಲಕ್ನೋ ಪ್ರಾಂಚೈಸಿ ರಾಹುಲ್​ರನ್ನು ತಂಡದಲ್ಲೇ ಉಳಿಸಿಕೊಳ್ಳಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಕ್ರಿಕ್‌ಬಜ್ ವರದಿಯ ಪ್ರಕಾರ, ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್, ಕೋಲ್ಕತ್ತಾದಲ್ಲಿರುವ ತಂಡದ ಕಚೇರಿಗೆ ತೆರಳಿದ್ದು ಅಲ್ಲಿ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರನ್ನು ಭೇಟಿಯಾಗಿದ್ದಾರೆ.

1 / 7
2025 ರ ಐಪಿಎಲ್​ಗೂ ಮುನ್ನ ಮೆಗಾ ಹರಾಜು ನಡೆಯಲ್ಲಿದೆ. ಇದರರ್ಥ ನಿಯಮಗಳ ಪ್ರಕಾರ ಎಲ್ಲಾ ತಂಡಗಳು ಕೇವಲ 4 ಆಟಗಾರರನ್ನು ಮಾತ್ರ ತಂಡದಲ್ಲಿ ಉಳಿಸಿಕೊಂಡರು ಇತರರನ್ನು ತಂಡದಿಂದ ಬಿಡುಗಡೆ ಮಾಡಬೇಕಾಗುತ್ತದೆ. ಆ ಬಳಿಕ ಹರಾಜಿನಲ್ಲಿ ತಮಗೆ ಬೇಕಾದ ಆಟಗಾರರನ್ನು ಖರೀದಿಸಿ ಸಮತೋಲಿತ ತಂಡವನ್ನು ಕಟ್ಟಬೇಕಾಗುತ್ತದೆ.

2025 ರ ಐಪಿಎಲ್​ಗೂ ಮುನ್ನ ಮೆಗಾ ಹರಾಜು ನಡೆಯಲ್ಲಿದೆ. ಇದರರ್ಥ ನಿಯಮಗಳ ಪ್ರಕಾರ ಎಲ್ಲಾ ತಂಡಗಳು ಕೇವಲ 4 ಆಟಗಾರರನ್ನು ಮಾತ್ರ ತಂಡದಲ್ಲಿ ಉಳಿಸಿಕೊಂಡರು ಇತರರನ್ನು ತಂಡದಿಂದ ಬಿಡುಗಡೆ ಮಾಡಬೇಕಾಗುತ್ತದೆ. ಆ ಬಳಿಕ ಹರಾಜಿನಲ್ಲಿ ತಮಗೆ ಬೇಕಾದ ಆಟಗಾರರನ್ನು ಖರೀದಿಸಿ ಸಮತೋಲಿತ ತಂಡವನ್ನು ಕಟ್ಟಬೇಕಾಗುತ್ತದೆ.

2 / 7

ಇದೀಗ ಮೆಗಾ ಹರಾಜಿಗೂ ಮುನ್ನ ಯಾವ್ಯಾವ ತಂಡಗಳು ಯಾವ್ಯಾವ ಆಟಗಾರನನ್ನು ತಂಡದಿಂದ ಕೈಬಿಡಲಿವೆ ಎಂಬುದರ ಬಗ್ಗೆ ಚರ್ಚೆ ಶುರುವಾಗಿದೆ. ಇದರಲ್ಲಿ ಹಲವು ಸ್ಟಾರ್ ಆಟಗಾರರ ಹೆಸರುಗಳು ಸೇರ್ಪಡೆಗೊಂಡಿವೆ. ಇದರಲ್ಲಿ ಪ್ರಮುಖ ಹೆಸರು ಕನ್ನಡಿಗ ಕೆಎಲ್ ರಾಹುಲ್ ಅವರದ್ದು. ರಾಹುಲ್​ರನ್ನು ಲಕ್ನೋ ತನ್ನ ತಂಡದಿಂದ ಬಿಡುಗಡೆ ಮಾಡಲಿದೆ ಎಂದು ಈ ಹಿಂದೆ ಹೇಳಲಾಗುತ್ತಿತ್ತು.

3 / 7

ಆದರೀಗ ಇದೀಗ ಕೇಳಿಬಂದಿರುವ ಮಾಹಿತಿ ಪ್ರಕಾರ, ಲಕ್ನೋ ಪ್ರಾಂಚೈಸಿ ರಾಹುಲ್​ರನ್ನು ತಂಡದಲ್ಲೇ ಉಳಿಸಿಕೊಳ್ಳಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಕ್ರಿಕ್‌ಬಜ್ ವರದಿಯ ಪ್ರಕಾರ, ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್, ಕೋಲ್ಕತ್ತಾದಲ್ಲಿರುವ ತಂಡದ ಕಚೇರಿಗೆ ತೆರಳಿದ್ದು ಅಲ್ಲಿ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರನ್ನು ಭೇಟಿಯಾಗಿದ್ದಾರೆ.

4 / 7

ಸುಮಾರು ಒಂದು ಗಂಟೆ ಕಾಲ ನಡೆದ ಈ ಸಭೆಯಲ್ಲಿ ರಾಹುಲ್​ರನ್ನು ತಂಡದಲ್ಲಿಯೇ ಉಳಿಸಿಕೊಳ್ಳುವ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ಕೆಎಲ್ ರಾಹುಲ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲು ಫ್ರಾಂಚೈಸಿ ಉತ್ಸುಕವಾಗಿದೆ ಎಂದು ವರದಿಯಾಗಿದೆ.

5 / 7

ಕೆಎಲ್ ರಾಹುಲ್ ಇದುವರೆಗೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಮೂರು ಸೀಸನ್‌ಗಳನ್ನು ಆಡಿದ್ದಾರೆ. ಈ ಮೂರು ಸೀಸನ್​ಗಳಲ್ಲೂ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದಾರೆ. ಆದರೆ ಕಳೆದ ಆವೃತ್ತಿಯ ಪಂದ್ಯದ ವೇಳೆ ರಾಹುಲ್ ಹಾಗೂ ಮಾಲೀಕ ಸಂಜೀವ್ ನಡುವೆ ಬಹಿರಂಗವಾಗಿಯೇ ಮಾತಿನ ಚಕಮಕಿ ನಡೆದಿತ್ತು. ಹೀಗಾಗಿ ರಾಹುಲ್ ಮುಂದಿನ ಆವೃತ್ತಿಯಲ್ಲಿ ಲಕ್ನೋ ತಂಡವನ್ನು ತೊರೆಯುವುದು ಖಚಿತ ಎಂದು ಹೇಳಲಾಗಿತ್ತು.

6 / 7

ಈ ನಡುವೆ ರಾಹುಲ್ ತನ್ನ ಮಾತೃ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಹರಾಜಿಗೂ ಮುನ್ನವೇ ಸೇರಿಕೊಳ್ಳಬಹುದು ಎಂಬ ವರದಿಗಳು ಹರಿದಾಡುತ್ತಿದ್ದವು. ಆದಾಗ್ಯೂ, ಸಂಜೀವ್ ಗೋಯೆಂಕಾ ಮತ್ತು ಕೆಎಲ್ ರಾಹುಲ್ ಭೇಟಿಯ ನಂತರ, ರಾಹುಲ್ ಆರ್​ಸಿಬಿ ಸೇರುವುದು ಅನುಮಾನ ಎಂದು ಹೇಳಲಾಗುತ್ತಿದೆ.

7 / 7

ಕೆಎಲ್ ರಾಹುಲ್ ಇದುವರೆಗೆ ಐಪಿಎಲ್‌ನಲ್ಲಿ ಆಡಿರುವ 132 ಪಂದ್ಯಗಳಲ್ಲಿ 4683 ರನ್ ಗಳಿಸಿದ್ದಾರೆ. ಇನ್ನು ಕಳೆದ ಆವೃತ್ತಿಯಲ್ಲಿ 14 ಪಂದ್ಯಗಳನ್ನಾಡಿದ್ದ ರಾಹುಲ್ 136 ಸ್ಟ್ರೈಕ್ ರೇಟ್​ನಲ್ಲಿ 4 ಅರ್ಧ ಶತಕ ಸೇರಿದಂತೆ 520 ರನ್ ಗಳಿಸಿದ್ದರು. 2013 ರಿಂದ ಐಪಿಎಲ್‌ನಲ್ಲಿ ಆಡುತ್ತಿರುವ ರಾಹುಲ್, ಒಟ್ಟು 6 ಸೀಸನ್‌ಗಳಲ್ಲಿ 500ಕ್ಕೂ ಅಧಿಕ ರನ್ ಗಳಿಸಿದ್ದಾರೆ.

Published On - 10:50 pm, Mon, 26 August 24

Loading...
Unable to load recommendations.
Follow Us