IPL 2025: ಕೆಕೆಆರ್ ತಂಡದಿಂದ ಗೇಟ್​ಪಾಸ್; ಶ್ರೇಯಸ್ ಅಯ್ಯರ್​ಗೆ ಕಾದು ಕುಳಿತ ಪಂಜಾಬ್ ಕಿಂಗ್ಸ್

|

Updated on: Oct 29, 2024 | 4:55 PM

Shreyas Iyer: ಐಪಿಎಲ್ 2025 ರ ಧಾರಣ ಪಟ್ಟಿ ಬಿಡುಗಡೆಗೆ ಕೆಲವೇ ಗಂಟೆಗಳು ಬಾಕಿ ಇವೆ. ಕೆಕೆಆರ್ ಶ್ರೇಯಸ್ ಅಯ್ಯರ್ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಪಂಜಾಬ್ ಕಿಂಗ್ಸ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ಹೊಂದಿದೆ ಎಂದು ಹೇಳಲಾಗುತ್ತಿದೆ. ರಿಕಿ ಪಾಂಟಿಂಗ್ ಅವರ ನಾಯಕತ್ವದಲ್ಲಿ ಅಯ್ಯರ್ ಪಂಜಾಬ್‌ಗೆ ಉತ್ತಮ ಆಯ್ಕೆಯಾಗಬಹುದು. ಇದರಿಂದ ಪಂಜಾಬ್ ಕಿಂಗ್ಸ್ ತಂಡಕ್ಕೆ ಒಳ್ಳೆಯ ನಾಯಕತ್ವ ದೊರೆಯಲಿದೆ.

1 / 7
2025 ರ ಐಪಿಎಲ್ ಧಾರಣ ಪಟ್ಟಿ ಬಿಡುಗಡೆಗೆ ಇನ್ನು ಕೆಲವೇ ಕೆಲವು ಗಂಟೆಗಳು ಬಾಕಿ ಉಳಿದಿವೆ. ಅಕ್ಟೋಬರ್ 31 ರೊಳಗೆ ಎಲ್ಲಾ ತಂಡಗಳು ಐಪಿಎಲ್ ಆಡಳಿತ ಮಂಡಳಿಗೆ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕು. ಇದರಲ್ಲಿ ಎಲ್ಲಾ ಫ್ರಾಂಚೈಸಿಗಳು ತಮಗೆ ಅಗತ್ಯವಿರುವ ಆಟಗಾರರನ್ನು ಈಗಾಗಲೇ ಪಟ್ಟಿ ಮಾಡಿದ್ದು, ಹಲವು ಸ್ಟಾರ್ ಆಟಗಾರರನ್ನು ತಂಡದಿಂದ ಕೈಬಿಡಲು ಮುಂದಾಗಿವೆ.

2 / 7
ಹಾಗೆ ತಂಡದಿಂದ ಹೊರಗಿಡುವ ಆಟಗಾರರ ಪೈಕಿ ಶ್ರೇಯಸ್ ಅಯ್ಯರ್ ಕೂಡ ಒಬ್ಬರು ಎಂದು ಹೇಳಲಾಗುತ್ತಿದೆ. ಶ್ರೇಯಸ್ ಅಯ್ಯರ್​ರನ್ನು ನಾಯಕನಾಗಿ ಉಳಿಸಿಕೊಳ್ಳುವ ಉತ್ಸಾಯವನ್ನು ಕೆಕೆಆರ್ ತೊರುತ್ತಿಲ್ಲ. ಹೀಗಾಗಿ ಅಯ್ಯರ್ ಹರಾಜಿಗೆ ಬಂದರೆ, ಅವರನ್ನು ಖರೀದಿಸಲು ಪಂಜಾಬ್ ಕಿಂಗ್ಸ್  ಯೋಜನೆ ಹಾಕಿಕೊಂಡಿದೆ ಎಂದು ವರದಿಯಾಗಿದೆ.

3 / 7
ಮಾಧ್ಯಮ ವರದಿಗಳ ಪ್ರಕಾರ, ಪಂಜಾಬ್ ಕಿಂಗ್ಸ್‌ನ ಹೊಸ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಅವರು ಶ್ರೇಯಸ್ ಅಯ್ಯರ್ ಅವರನ್ನು ಪಂಜಾಬ್‌ನ ನಾಯಕನನ್ನಾಗಿ ಮಾಡುವ ಇರಾದೆಯಲ್ಲಿದ್ದಾರೆ. ರಿಕಿ ಪಾಂಟಿಂಗ್ ಮತ್ತು ಶ್ರೇಯಸ್ ಅಯ್ಯರ್ ಈ ಹಿಂದೆಯೂ ಒಟ್ಟಿಗೆ ಕೆಲಸ ಮಾಡಿದ್ದಾರೆ. ಆ ಸಮಯದಲ್ಲಿ ಅಯ್ಯರ್ ಡೆಲ್ಲಿ ಕ್ಯಾಪಿಟಲ್ಸ್‌ನ ನಾಯಕರಾಗಿದ್ದರು ಮತ್ತು ರಿಕಿ ಪಾಂಟಿಂಗ್ ತಂಡದ ಮುಖ್ಯ ಕೋಚ್ ಆಗಿದ್ದರು.

4 / 7
2019 ರಲ್ಲಿ ಡೆಲ್ಲಿ ತಂಡದ ನಾಯಕರಾಗಿ ಆಯ್ಕೆಯಾಗಿದ್ದ ಅಯ್ಯರ್, 2021 ರವರೆಗೆ ಈ ಪಾತ್ರವನ್ನು ನಿರ್ವಹಿಸಿದ್ದರು. 2020 ರಲ್ಲಿ, ಅವರು ತಮ್ಮ ನಾಯಕತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಫೈನಲ್‌ಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದರು. ಆದರೆ 2021 ರ ನಂತರ, ದೆಹಲಿಯು ಅಯ್ಯರ್ ಅವರನ್ನು ನಾಯಕತ್ವದಿಂದ ತೆಗೆದುಹಾಕಿ ಅವರ ಸ್ಥಾನದಲ್ಲಿ ರಿಷಬ್ ಪಂತ್​ಗೆ ತಂಡದ ನಾಯಕತ್ವವನ್ನು ನೀಡಲಾಯಿತು.

5 / 7
ಇದರ ನಂತರ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೇರಿಕೊಂಡ ಅಯ್ಯರ್, ಕಳೆದ ಸೀಸನ್​ನಲ್ಲಿ ಅವರ ನಾಯಕತ್ವದಲ್ಲಿ, ಕೆಕೆಆರ್ ತಂಡ ಮೂರನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಶ್ರೇಯಸ್ ಅಯ್ಯರ್ ಅದ್ಭುತ ನಾಯಕತ್ವದ ಗುಣ ಹೊಂದಿದ್ದು, ಅವರ ನಾಯಕತ್ವದಲ್ಲಿ ಕೆಕೆಆರ್ ತಂಡವನ್ನು ಐಪಿಎಲ್ ಚಾಂಪಿಯನ್ ಆಗಿ ಮಾಡಿದ್ದಾರೆ.

6 / 7
ಆದರೆ ಕೆಕೆಆರ್ ತಂಡ ತನ್ನ ಚಾಂಪಿಯನ್ ನಾಯಕನನ್ನು ಬಿಡುಗಡೆ ಮಾಡುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಏಕೆಂದರೆ ಇದು ಸಂಭವಿಸಿದಲ್ಲಿ ಪಂಜಾಬ್ ಕಿಂಗ್ಸ್ ನಿಸ್ಸಂಶಯವಾಗಿ ಅಯ್ಯರ್ ಅವರನ್ನು ತಮ್ಮ ತಂಡಕ್ಕೆ ಕರೆತರಲು ಬಯಸುತ್ತದೆ. ಪಂಜಾಬ್ ಕಿಂಗ್ಸ್ ತಂಡ ಐಪಿಎಲ್ ಗೆದ್ದಿಲ್ಲವಾದ್ದರಿಂದ ಪ್ರೀತಿ ಜಿಂಟಾ ತಂಡಕ್ಕೆ ಉತ್ತಮ ನಾಯಕನ ಅಗತ್ಯವಿದೆ.

7 / 7
ಕಳೆದ ಸೀಸನ್​ನಲ್ಲಿ ಶಿಖರ್ ಧವನ್ ಅವರು ತಂಡದ ನಾಯಕರಾಗಿದ್ದರು. ಆದರೆ ಇಂಜುರಿಯಿಂದಾಗಿ ಅವರು ಸೀಸನ್​ನ ಮಧ್ಯದಲ್ಲೇ ತಂಡವನ್ನು ತೊರೆಯಬೇಕಾಯಿತು. ಹೀಗಾಗಿ ಧವನ್ ಸ್ಥಾನದಲ್ಲಿ ಜಿತೇಶ್ ಶರ್ಮಾ ಅವರು ಈ ಜವಾಬ್ದಾರಿಯನ್ನು ವಹಿಸಿಕೊಂಡರು. ಆದರೆ ಈ ಬಾರಿ ಪಂಜಾಬ್ ಕಿಂಗ್ಸ್​ಗೆ ಪೂರ್ಣ ಪ್ರಮಾಣದ ನಾಯಕನ ಅಗತ್ಯವಿರುವ ಕಾರಣ ಅಯ್ಯರ್ ಮೇಲೆ ಕಣ್ಣಿಟ್ಟಿದೆ.