
ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಆವೃತ್ತಿಯ ಮಧ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ತನ್ನ ಬೌಲಿಂಗ್ ವಿಭಾಗದಲ್ಲಿ ಮಹತ್ವದ ಬದಲಾವಣೆ ಮಾಡಿಕೊಂಡಿದೆ. ಈ ಬದಲಾವಣೆಯೊಂದಿಗೆ ಎಸ್ಆರ್ಹೆಚ್ ತಂಡಕ್ಕೆ ಲಂಕಾ ವೇಗಿ ಎಂಟ್ರಿ ಕೊಟ್ಟಿದ್ದಾರೆ.

ಮಾರ್ಚ್ 28 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಮೊದಲ ಪಂದ್ಯಕ್ಕೂ ಮುನ್ನ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಇಂಗ್ಲೆಂಡ್ ಆಟಗಾರ ಬ್ರೈಡನ್ ಕಾರ್ಸ್ ಅವರ ಕೈಗೆ ಬಲವಾದ ಗಾಯವಾಗಿತ್ತು. ಈ ಗಾಯದ ಕಾರಣ ಇದೀಗ ಕಾರ್ಸ್ ಇದೀಗ ಐಪಿಎಲ್ನಿಂದ ಹೊರಗುಳಿದಿದ್ದಾರೆ.

ಅತ್ತ ಬ್ರೈಡನ್ ಕಾರ್ಸ್ ಟೂರ್ನಿಯಿಂದ ಹೊರಬೀಳುತ್ತಿದ್ದಂತೆ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಶ್ರೀಲಂಕಾದ ಎಡಗೈ ವೇಗಿ ದಿಲ್ಶನ್ ಮಧುಶಂಕ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡಿದೆ. ಅದರಂತೆ ಎಸ್ಆರ್ಹೆಚ್ ತಂಡದ ಮುಂದಿನ ಪಂದ್ಯಗಳಿಗೆ ಮಧುಶಂಕ ಲಭ್ಯರಿರಲಿದ್ದಾರೆ.

ದಿಲ್ಶನ್ ಮಧುಶಂಕ ಶ್ರೀಲಂಕಾ ಪರ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ಆರಂಭಿಕ ಓವರ್‌ಗಳಲ್ಲಿ ಚೆಂಡನ್ನು ಸ್ವಿಂಗ್ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿರುವ ಮಧುಶಂಕ ಎಂಟ್ರಿಯು ಸನ್‌ರೈಸರ್ಸ್ ಹೈದರಾಬಾದ್ ತಂಡದ ಬೌಲಿಂಗ್ ವಿಭಾಗವನ್ನು ಮತ್ತಷ್ಟು ಬಲಿಷ್ಠಗೊಳಿಸಲಿದೆ.

ಸನ್‌ರೈಸರ್ಸ್ ಹೈದರಾಬಾದ್ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಅನಿಕೇತ್ ವರ್ಮಾ, ಸ್ಮರಣ್ ರವಿಚಂದ್ರನ್, ಇಶಾನ್ ಕಿಶನ್, ಹೆನ್ರಿಕ್ ಕ್ಲಾಸೆನ್, ನಿತೀಶ್ ಕುಮಾರ್ ರೆಡ್ಡಿ, ಹರ್ಷ್ ದುಬೆ, ಕಮಿಂದು ಮೆಂಡಿಸ್, ಹರ್ಷಲ್ ಪಟೇಲ್, ಜಯದೇವ್ ಉನದ್ಕತ್, ಎಶಾನ್ ಮಾಲಿಂಗ, ಝೀಶಾನ್ ಅನ್ಸಾರಿ, ಶಿವಾಂಗ್ ಕುಮಾರ್, ಸಲೀಲ್ ಅರೋರ, ಸಾಕಿಬ್ ಹುಸೈನ್, ಓಂಕಾರ್ ತರ್ಮಲೆ, ಅಮಿತ್ ಕುಮಾರ್, ಪ್ರಫುಲ್ ಹಿಂಗೆ, ಕ್ರೇನ್ಸ್ ಫುಲೆಟ್ರಾ, ಲಿಯಾಮ್ ಲಿವಿಂಗ್ಸ್ಟೋನ್ಸ್, ಶಿವಂ ಮಾವಿ, ದಿಲ್ಶನ್ ಮಧುಶಂಕ.